ಎಲ್ಲರಿಗೆ ಗೊತ್ತಿರುವಂತೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಮನ:ಪೂರ್ವಕವಾಗಿ ಮದುವೆಯಾಗಿ ಮನ:ಪೂರ್ವಕವಾಗಿಯೇ ದೂರವಾದ ಇಬ್ಬರು ಈಗ ತಮ್ಮ ತಮ್ಮ ಬದುಕಿನ ಸಂತೆಯಲ್ಲಿ ನೆಮ್ಮದಿ ಹುಡುಕುತ್ತಿದ್ದಾರೆ. ವಿಚ್ಚೇದನದ ನಂತರ ನಿವೇದಿತಾ ಗೌಡ ರೀಲ್ಸು ಪಾಲ್ಸು ಎಂದು ಮತ್ತೆ ಬ್ಯುಸಿಯಾದರೆ, ಚಂದನ್ ಶೆಟ್ಟಿ ಸಂಗೀತ-ಸಾಹಿತ್ಯ ಎಂದು ತಲೆ ಕೆಡಿಸಿಕೊಂಡಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಅಲ್ಲ ಬದಲಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕು, ಬೆಳೆಯಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ.ಇದರ ನಡುವೆ ಸಮಯ ಬಿಡುವು ಮಾಡಿಕೊಂಡು ಆಗಾಗ ಇಬ್ಬರು ಹಲವರಿಗೆ ಸಂದರ್ಶನ ನೀಡುತ್ತಲೇ ಬರುತ್ತಿದ್ದಾರೆ. ಹೀಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ನಿವೇದಿತಾ ಗೌಡ ತಮ್ಮ ಡಿವೋರ್ಸ್ಗೆ ಕಾರಣವೇನು ಎಂದು ಹೇಳಿದ್ದಾರೆ. ಪ್ರೀತಿಸಿ, ಮೋಹಿಸಿ ಮದುವೆಯಾದ ನಂತರ ಎಡವಿದ್ದು ಎಲ್ಲಿ ಎಂದು ವಿವರಿಸಿದ್ದಾರೆ. ಈ ಕುರಿತು ”ರಾಜೇಶ್ ಗೌಡ” ಅವರ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಿವೇದಿತಾ ಗೌಡ, ಯಾರು ಡಿವೋರ್ಸ್ ಪಡೆಯಬೇಕು ಎನ್ನುವ ಉದ್ದೇಶದಿಂದ ಮದುವೆಯಾಗಲ್ಲ ಎಂದು ಹೇಳಿದ್ದಾರೆ. ಚೆನ್ನಾಗಿರುತ್ತೇವೆ, ಜೊತೆಯಲ್ಲಿ ಜೀವನಪೂರ್ತಿ ಬದುಕುತ್ತೇವೆ, ಎಂಬ ಆಶಯ ಮತ್ತು ಕನಸನ್ನೊತ್ತೇ ಎಲ್ಲರು ಮದುವೆಯಾಗುವುದು ಎಂದು ಹೇಳಿರುವ ನಿವೇದಿತಾ ಗೌಡ ಎಲ್ಲೋ ಒಂದು ಕಡೆ ನಮ್ಮ ನಡುವೆ ಹೊಂದಾಣಿಕೆ ಸಮಸ್ಯೆ ಇತ್ತು ಎಂದು ಹೇಳಿದ್ದಾರೆ. ನಮ್ಮ ಮದುವೆ ವಿಚಾರದಲ್ಲಿ ಸಾಮಾಜಿಕ ಜಾಲತಾಣ ತುಂಬಾನೇ ಮಹತ್ವದ ಪಾತ್ರ ನಿರ್ವಹಿಸಿತ್ತು ಎನ್ನುವುದು ನನ್ನ ಭಾವನೆ ಎಂದು ಹೇಳಿರುವ ನಿವೇದಿತಾ ಗೌಡ, ನೀವು ಮದುವೆಯಾದರೆ ಚೆನ್ನಾಗಿರುತ್ತಿತ್ತು ಎಂದು ಯಾವುದೇ ಕಾರ್ಯಕ್ರಮದಲ್ಲಿ ನಾವು ಭಾಗಿಯಾದಾಗ ಹಲವರು ಹೇಳುತ್ತಿದ್ದರು, ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದರು, ಈ ಹಿನ್ನೆಲೆ ನಮ್ಮಲ್ಲಿ ಆ ಭಾವನೆ ಹುಟ್ಟಲು ಶುರುವಾಯ್ತು ಎಂದು ಹೇಳಿದ್ದಾರೆ.
ಆದರೆ, ನಾವು ಯಾವತ್ತೂ ಜೊತೆಯಾಗಿ ಸಮಯ ಕಳೆದಿರಲಿಲ್ಲ, ಎಲ್ಲೋ ಒಂದು ಕಡೆ ಇದರಿಂದ ಹಿನ್ನೆಡೆಯಾಯ್ತು ಅಂತ ಅನ್ಸುತ್ತೆ ಎಂದು ಹೇಳಿರುವ ನಿವೇದಿತಾ ಗೌಡ ನಾವು ಸ್ನೇಹಿರತಾಗಿದ್ವಿ, ಸುಮ್ಮನೆ ಸ್ನೇಹಿತರಾಗಿಯೇ ಇರಬೇಕಿತ್ತು ಎಂದು ಅನ್ಸಿದ್ದು ಕೂಡ ಇದೆ ಎಂದು ಹೇಳಿದ್ದಾರೆ. ಆಗಲೇ ಹೇಳಿದಂತೆ ಹೊಂದಾಣಿಕೆಯ ಕೊರತೆ ಇತ್ತು ಎಂದು ಹೇಳಿದ್ಧಾರೆ.
ಇನ್ನು ಡಿವೋರ್ಸ್ ನಂತರ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಜಂಟಿಯಾಗಿ ಸುದ್ದಿಗೋಷ್ಠಿ ಮಾಡಿದ್ದರು. ಈ ವಿಚಾರದ ಕುರಿತು ಕೂಡ ಮಾತನಾಡಿರುವ ನಿವೇದಿತಾ ಗೌಡ, ವಿಚ್ಚೇದನದ ವಿಚಾರ ತುಂಬಾನೇ ವೈಯಕ್ತಿಕವಾದದ್ದು ಎಂದು ಹೇಳಿದ್ದಾರೆ. ನಮ್ಮ ದಾಂಪತ್ಯ ಮುರಿದು ಬೀಳಲು ಕಾರಣವೇನು ಎನ್ನುವುದಕ್ಕೆ ಉತ್ತರ ನಾನು ಯಾರಿಗೂ ಕೊಡಬೇಕಿರಲಿಲ್ಲ ಎಂದು ಹೇಳಿರುವ ನಿವೇದಿತಾ ಗೌಡ ಆ ಸಮಯದಲ್ಲಿ ತುಂಬಾನೇ ಊಹಾಪೋಹದ ಸುದ್ದಿಗಳು ಕೇಳಿ ಬರಲು ಶುರುವಾದವು ಎಂದು ಹೇಳಿದ್ದಾರೆ.
ಅಸಲಿ ಸತ್ಯ ಹೇಳಿದ ನಿವೇದಿತಾ ಗೌಡ



