ಭಾರತೀಯ ಚಿತ್ರರಂಗದ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಪರಶುರಾಮ ಜಯಂತಿಯ ವಿಶೇಷ ದಿನದಂದು ತನ್ನ ಮುಂದಿನ ಮಹತ್ವಾಕಾಂಕ್ಷೆಯ ಚಿತ್ರ `ಮಹಾವತಾರ ಪರಶುರಾಮ’ ವನ್ನು ಅಧಿಕೃತವಾಗಿ ಘೋಷಿಸಿದೆ.
`ರಾಜಕುಮಾರ’, `ಕೆಜಿಎಫ್’ , `ಕಾಂತಾರ’, `ಸಲಾರ್’ ಹಾಗೂ ಇತ್ತೀಚೆಗೆ ಘೋಷಣೆಯಾದ `ಮಹಾವತಾರ ನರಸಿಂಹ’ದಂತಹ ಬ್ಲಾಕ್ಬಸ್ಟರ್ ಚಿತ್ರಗಳ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿರುವ ಹೊಂಬಾಳೆ ಫಿಲ್ಮ್ಸ್, ಈಗ ತನ್ನ ಯಶಸ್ಸಿನ ಪಯಣದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ. ಈಗ ಅಶ್ವಿನ್ ಕುಮಾರ್ ಅವರ ನಿರ್ದೇಶನದಲ್ಲಿ ಹಾಗೂ ಕ್ಲೀಂ ಪ್ರೊಡಕ್ಷನ್ಸ್ ಸಹಯೋಗದೊಂದಿಗೆ ಈ ಪೌರಾಣಿಕ ಕಥೆಯನ್ನು ತೆರೆಗೆ ತರುತ್ತಿದೆ. ಇದು ಹೊಂಬಾಳೆ ಫಿಲ್ಮ್ಸ್ ರೂಪಿಸಿರುವ `ಮಹಾವತಾರ ಸಿನಿಮಾಟಿಕ್ ಯುನಿವರ್ಸ್’ ನ ಒಂದು ಪ್ರಮುಖ ಭಾಗವಾಗಿದ್ದು, ಅತ್ಯಾಧುನಿಕ ಅನಿಮ್ಯಾಟಿಕ್ ತಂತ್ರಜ್ಞಾನದ ಮೂಲಕ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಇಂದಿನ ಪೀಳಿಗೆಗೆ ದೃಶ್ಯ ವೈಭವದಂತೆ ಉಣಬಡಿಸಲು ಸಜ್ಜಾಗಿದೆ. ಈ ಘೋಷಣೆಯು ಈಗಾಗಲೇ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಜಯ ಸ್ಥಾಪಿಸುವ ಮುನ್ಸೂಚನೆ ನೀಡಿದೆ.
ಪರಶುರಾಮ ಜಯಂತಿಯ ಶುಭ ಸಂದರ್ಭದಲ್ಲಿ ಹೊಂಬಾಳೆ ಫಿಲ್ಮ್ಸ್ ನಿಂದ ಮತ್ತೊಂದು ಅದ್ಧೂರಿ ಚಿತ್ರದ ಘೋಷಣೆ: `ಮಹಾವತಾರ ಪರಶುರಾಮ’



