ಬೆಂಗಳೂರು: ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ಟ್ರೋಫಿ ಗೆಲ್ಲುವಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ವೈಫಲ್ಯವನ್ನು ಕಂಡಿರಬಹುದು. ಆದರೆ ಟೂರ್ನಿಯಲ್ಲಿ ತಂಡದ ಪ್ರದರ್ಶನದ ಬಗ್ಗೆ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ಸೋಲು ಯಾವತ್ತೂ ನೋವಿನಿಂದ ಕೂಡಿರುತ್ತದೆ. ಆದರೆ ಒಬ್ಬ ಆರ್ಸಿಬಿ ಅಭಿಮಾನಿಯಾಗಿ ನಮ್ಮಲ್ಲಿ ಮತ್ತೆ ನಂಬಿಕೆ ಹುಟ್ಟಿಸಿದ ನಮ್ಮ ಹುಡುಗರ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.ಮೊದಲ ಎಂಟು ಪಂದ್ಯಗಳಲ್ಲಿ ಸತತ ಆರು ಪಂದ್ಯ ಸೇರಿದಂತೆ ಏಳರಲ್ಲಿ ಸೋತಿದ್ದ ಆರ್ಸಿಬಿ, ನಂತರದ ಎಲ್ಲ ಆರು ಪಂದ್ಯಗಳನ್ನು ಗೆದ್ದು ಪ್ಲೇ-ಆಫ್ಗೆ ಪ್ರವೇಶಿಸಿತ್ತು.
ಇದನ್ನೇ ವಿಲಿಯರ್ಸ್ ಉಲ್ಲೇಖ ಮಾಡಿದ್ದಾರೆ.ಮುಂದಿನ ವರ್ಷ ಮತ್ತಷ್ಟು ಪ್ರಬಲರಾಗಿ ಪುನರಾಗಮನ ಮಾಡಿ ಟ್ರೋಫಿ ತವರಿಗೆ ತರುವ ನಂಬಿಕೆ ನನಗಿದೆ ಎಂದು ಸಹ ವಿಲಿಯರ್ಸ್ ಹೇಳಿದ್ದಾರೆ.