ಅಂಬೇಡ್ಕರ್ ಜಯಂತಿಯ ವಿಶೇಷವಾಗಿ ಜನರಿಂದ ನಾನು ಮೇಲೆ ಬಂದೆ ಸಿನಿಮಾ ತಂಡವು ಜೈ ಭೀಮ್ ಜೈ ಭೀಮ್ ಅಂಬೇಡ್ಕರ್ ಎಂಬ ಹಾಡನ್ನು ಮ್ಯೂಸಿಕ್ ಬಜಾರ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಹಾಡನ್ನು ಕವಿರತ್ನ ಡಾ ವಿ ನಾಗೇಂದ್ರ ಪ್ರಸಾದ್, ಖ್ಯಾತ ಹಿರಿಯ ನಟರಾದ ಅಶೋಕ್, ಭೀಮಪುತ್ರಿ ರೇವತಿರಾಜ್ ಹಾಗೂ ಇನ್ನೂ ಹಲವಾರು ಮಹನೀಯರು, ಸಿನಿಮಾ ಗಣ್ಯರು, ಹೋರಾಟಗಾರರು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಹಾಡಿನ ಸಾಹಿತ್ಯವನ್ನು ಸಿನಿಮಾದ ನಿರ್ದೇಶಕರಾದ ನವಿಲುಗರಿ ನವೀನ್ ಪಿ ಬಿ ಬರೆದಿದ್ದು, ಅದರ ಜೊತೆಗೆ ಐದು ಜನ ಮುಖ್ಯ ಗಾಯಕರಲ್ಲಿ ಇವರು ಕೂಡ ಒಬ್ಬರಾಗಿ ಹಾಡಿದ್ದಾರೆ, ಸಂಗೀತ ನಿರ್ದೇಶನವನ್ನು ಪ್ರಣವ್ ಸತೀಶ್ ಮಾಡಿದ್ದಾರೆ. ಈ ಹಾಡನ್ನು ಅಣ್ಣಾವ್ರ ಮೊಮ್ಮಗ ಷಣ್ಮುಖ ಗೋವಿಂದರಾಜು, ಸರಿಗಮಪ ಖ್ಯಾತಿಯ ರೇವಣ್ಣ ಸಿದ್ಧ ಪುಲಾರಿ, ಎ ಆರ್ ತನ್ವೀರ್ ಹಾಗೂ ಪ್ರಣವ್ ಸತೀಶ್ ಅವರು ಮುಖ್ಯ ಗಾಯಕರಾಗಿ ಹಾಡಿದ್ದಾರೆ. ಸಹ ಗಾಯನದಲ್ಲಿ ಯಶಸ್ವಿನಿ ಕಾಪ್ಸೆ, ಶಿವಣ್ಣ, ಗಂಧರ್ವ ರಾಜ್ (ಶಂಕರ್), ಶಾಂತ ಪಾಪು, ವಿಶಾಲ ಸತೀಶ್, ಪ್ರಜ್ವಲ್ ಕೆ ಆರ್, ಭುವನ್ ಎಂ ಎಸ್, ಡಾ. ಪುರುಷೋತ್ತಮ್ (ಅಪ್ಪು) ಅವರು ಜೊತೆಯಾಗಿದ್ದಾರೆ. ನೃತ್ಯ ನಿರ್ದೇಶನವನ್ನು ಸತೀಶ್ ಕೃಷ್ಣ ಶೆಟ್ಟಿ ಮತ್ತು ತಂಡದವರು ಮಾಡಿದ್ದಾರೆ. ಈ ಚಿತ್ರವು ಶ್ರೀ ಮಂಜುನಾಥ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದ್ದು ಶ್ರೀಮತಿ ಬಿ ಹೇಮಾವತಿ ಅವರು ನಿರ್ಮಾಪಕಿಯಾಗಿದ್ದಾರೆ, ಗಂಧರ್ವ ರಾಜ್ (ಶಂಕರ), ಅಭಿಜಿತ್, ಶೈಲಜಾ ದ್ವಾರಕೀಶ್, ಚಾಮರಾಜ ಮಾಸ್ಟರ್, ನವಿಲುಗರಿ ನವೀನ್ ಪಿ ಬಿ, ಶಿವಕುಮಾರ್ ಆರಾಧ್ಯ, ಜಯಪ್ರಕಾಶ್ ನಾಗತಿಹಳ್ಳಿ, ಪ್ರವೀಣ ಕುಲಕರ್ಣಿ, ಸಂದೀಪ್ ಮಲಾನಿ, ಅನಿಲ್ ಕುಮಾರ್ ಬಾಬಿ, ಮಧುಶ್ರೀ ವಸಂತ, ಶಿವಣ್ಣ, ಆಪ್ತಿ ಪಟವರ್ಧನ್, ಕೃತಿಕಾ ದಿವಾಕರ್, ಶಾಂತಾ ಪಾಪು, ಸುನಂದ ಕಲಬುರಗಿ, ಕಾಟೇರ ಕೇಶವ್, ಅಂಬೇಡ್ಕರ್ ಮಹೇಶ್, ಡಾ ಅಕ್ಷತ, ವಿಶಾಲ ಸತೀಶ್, ಲಲಿತ್ ಕೃಷ್ಣ, ಯಶುರಾಜ್, ಶಶಿರೇಖಾ ಸೇರಿದಂತೆ ಬಹಳ ದೊಡ್ಡ ತಾರಾಬಳಗವಿದೆ. ಛಾಯಾಗ್ರಾಹಣ ಮತ್ತು ಸಂಕಲನವನ್ನು ಟಿ ಆರ್ ಗೌತಮ್ ನಿಭಾಯಿಸಿದ್ದಾರೆ. ಸಾಹಿತ್ಯ ನವಿಲುಗರಿ ನವೀನ್ ಪಿ ಬಿ, ಪೃಥ್ವಿ ರಾಜ್ ಸಂಕಿ, ಭುವನ್ ಎಂ ಎಸ್ ಅವರದು. ಸಹಾಯಕ ನಿರ್ದೇಶಕ : ಲಲಿತ್ ಕೃಷ್ಣ, ನೃತ್ಯ ನಿರ್ದೇಶನ : ಚಾಮರಾಜ ಮಾಸ್ಟರ್, ಅರುಣ್ ಮಾಸ್ಟರ್, ಸತೀಶ್ ಕೃಷ್ಣ ಶೆಟ್ಟಿ, ಪೂಜಾ ರಾಯಸಂ , ಡಿ ಐ : ಟಿ ಆರ್ ಜಿ ಪಿಕ್ಸೆಲ್ಸ್ , ಪೋಸ್ಟರ್ ಡಿಸೈನ್ : ಟಿ ಆರ್ ಜಿ ಪಿಕ್ಸೆಲ್ಸ್, ಮಿಕ್ಸಿಂಗ್ ಮಾಸ್ಟರಿಂಗ್ : ಪೂರ್ಣ ಶ್ರೀಖರ್ ಎಂ, ಪಿ ಆರ್ ಓ : ಆರ್ ಚಂದ್ರ ಶೇಖರ್, ಡಾ ಪ್ರಭು ಗಂಜೀಹಾಳ, ಡಾ ವೀರೇಶ ಹಂಡಿಗಿ. ಅತೀ ಶೀಘ್ರದಲ್ಲಿ ಬೆಳ್ಳಿ ಪರದೆ ಮೇಲೆ ರಾರಾಜಿಸಲು ಜನರಿಂದ ನಾನು ಮೇಲೆ ಬಂದೆ ಚಿತ್ರ ರೆಡಿ ಇದೇ ಎಂದು ಸಿನಿಮಾ ತಂಡದವರು ತಿಳಿಸಿದ್ದಾರೆ.
ಜೈ ಭೀಮ್ ಅಂಬೇಡ್ಕರ್ ಹಾಡಿಗೆ ಜೈಕಾರ ಹಾಕಿದ ಜನರು



