ವಾಷಿಂಗ್ಟನ್: ಅಮೆರಿಕ-ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಿಂದ ಇರಾನ್ನ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಅವರ ಮುಖ ವಿರೂಪಗೊಂಡಿದ್ದು, ಅವರಿಗೆ ಪ್ಲಾಸ್ಟಿಕ್ ಸರ್ಜರಿ ಅಗತ್ಯವಿದೆ ಎಂದು ವರದಿಯಾಗಿದೆ.
ಮೊಜ್ತಾಬಾ ಅವರ ಮುಖ ಮತ್ತು ತುಟಿಗಳು ತೀವ್ರವಾಗಿ ಸುಟ್ಟುಹೋಗಿವೆ. ಈ ಕಾರಣದಿಂದ ಅವರಿಗೆ ಮಾತನಾಡಲು ಕಷ್ಟವಾಗುತ್ತಿದ್ದು, ಮುಖದ ಪುರ್ರಚನೆಗಾಗಿ ಶೀಘ್ರದಲ್ಲೇ ಪ್ಲಾಸ್ಟಿಕ್ ಸರ್ಜರಿ ಮಾಡಲು ಇರಾನ್ ಆಡಳಿತ ಮುಂದಾಗಿದೆ ಎಂದು ಸುದ್ದಿ ಮಾಧ್ಯಮ ವರದಿ ಮಾಡಿದೆ.ಮುಖದ ಗಾಯಗಳಿಂದಾಗಿ ಅವರಿಗೆ ಸ್ಪಷ್ಟವಾಗಿ ಮಾತನಾಡಲು ಕಷ್ಟವಾಗುತ್ತಿದೆ. ಈ ಕಾರಣದಿಂದಲೇ ಅವರು ಯಾವುದೇ ಆಡಿಯೋ ಅಥವಾ ವಿಡಿಯೋ ಸಂದೇಶಗಳನ್ನು ಬಿಡುಗಡೆ ಮಾಡುತ್ತಿಲ್ಲ.ಮೊಜ್ತಾಬಾ ಅವರ ಒಂದು ಕಾಲಿಗೆ ಈಗಾಗಲೇ ಮೂರು ಬಾರಿ ಶಸ್ತçಚಿಕಿತ್ಸೆ ಮಾಡಲಾಗಿದ್ದು, ಪ್ರಸ್ತುತ ಅವರು ಕೃತಕ ಕಾಲು ಅಳವಡಿಕೆಗೆ ಕಾಯುತ್ತಿದ್ದಾರೆ. ಅವರ ಒಂದು ಕೈಗೂ ಶಸ್ತçಚಿಕಿತ್ಸೆಯಾಗಿದ್ದು, ಅದು ಈಗ ನಿಧಾನವಾಗಿ ಚಲನೆಯನ್ನು ಕಂಡುಕೊಳ್ಳುತ್ತಿದೆ.ಸದ್ಯಕ್ಕೆ ಅವರು ಭದ್ರತಾ ಕಾರಣಗಳಿಗಾಗಿ ಮತ್ತು ತಮ್ಮ ಸುಟ್ಟ ಮುಖದೊಂದಿಗೆ ಕಾಣಿಸಿಕೊಳ್ಳಲು ಇಷ್ಟಪಡದ ಕಾರಣ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ. ದೇಹ ತೀವ್ರ ಗಾಯಗೊಂಡಿದ್ದರೂ ಮೊಜ್ತಾಬಾ ಅವರು ಮಾನಸಿಕವಾಗಿ ಚುರುಕಾಗಿದ್ದಾರೆ ಮತ್ತು ದೇಶದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೊಜ್ತಾಬಾ ಖಮೇನಿಗೆ ಪ್ಲಾಸ್ಟಿಕ್ ಸರ್ಜರಿ?



