ಬೆಂಗಳೂರು: ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗದಿದ್ದಕ್ಕೆ ತೀವ್ರ ಅಸಮಾಧಾನಗೊಂಡಿದ್ದ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರು ಇಂದು ತಮ್ಮ ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕೋರಮಂಗಲದಲ್ಲಿರುವ ಅವರ ಕಚೇರಿ ಬಳಿ ಪರಿಸ್ಥಿತಿ ಕೈಮೀರಿ ಹೋಗಿದ್ದು, ತಮ್ಮ ನೆಚ್ಚಿನ ನಾಯಕನಿಗೆ ಅನ್ಯಾಯವಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಬೆಂಬಲಿಗರು ಮತ್ತು ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಚೇರಿ ಮುಂಭಾಗದಲ್ಲಿ ಭಾರಿ ಹೈಡ್ರಾಮಾ ಸೃಷ್ಟಿಯಾಯಿತು.
ಪರಿಸ್ಥಿತಿ ವಿಕೋಪಕ್ಕೆ ತೆರಳಿ ತೀವ್ರ ಆವೇಶಕ್ಕೊಳಗಾದ ಬೆಂಬಲಿಗರು ರಾಮಲಿಂಗಾರೆಡ್ಡಿ ಅವರ ಕಾರಿಗೆ ಅಡ್ಡಲಾಗಿ ರಸ್ತೆಯಲ್ಲೇ ಮಲಗಿ ತಮ್ಮ ಆಕ್ರೋಶವನ್ನು ಹೊರಹಾಕಿದರು. “ನಮ್ಮ ನಾಯಕರಿಗೆ ಅನ್ಯಾಯವಾಗಿದೆ, ನಮಗೆ ನ್ಯಾಯ ಬೇಕೇ ಬೇಕು” ಎಂದು ತೀವ್ರವಾಗಿ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಹೈಕಮಾಂಡ್ ಮತ್ತು ಸರ್ಕಾರದ ನಿರ್ಧಾರದ ವಿರುದ್ಧ ತೀವ್ರ ಅಸಮಾಧಾನ ಪ್ರದರ್ಶಿಸಿದರು.ಈ ದಿಢೀರ್ ಪ್ರತಿಭಟನೆ ಮತ್ತು ಹೈಡ್ರಾಮಾದಿಂದಾಗಿ ಕೋರಮಂಗಲದ ಕಚೇರಿ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಪೂರ್ಣವಾಗಿ ಸಂಚಾರ ದಟ್ಟಣೆ
ರಾಮಲಿಂಗಾರೆಡ್ಡಿ ರಾಜೀನಾಮೆ ಹಿನ್ನೆಲೆ; ಕಾರಿಗೆ ಅಡ್ಡ ಮಲಗಿ ಬೆಂಬಲಿಗರಿಂದ ಪ್ರತಿಭಟನೆ



