ತಿ.ನರಸೀಪುರ:ಒಂದು ತಿಂಗಳ ಒಳಗಾಗಿ ಸ್ಮಶಾನ ಮತ್ತು ಪೌರಕಾರ್ಮಿಕರ ಅಕ್ರಮ ನಿವೇಶನವನ್ನು ಸಕ್ರಮ ಮಾಡಿಕೊಡುವಂತೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಶಂಕರ್ ಪುರಸಭಾ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪೌರಕಾರ್ಮಿಕರ ಕುಂದು ಕೊರತೆ ಹಾಗೂ ಸಂವಹದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಮಶಾನದ ವಿಚಾರ ಬಹಳ ಸೂಕ್ಷ್ಮವಾದದ್ದು ಆದ್ದರಿಂದ ಅಧಿಕಾರಿಗಳು ಕೂಡಲೇ ತುರ್ತಾಗಿ ಕ್ರಮ ವಹಿಸಬೇಕು ಮತ್ತು ಇವರುಗಳು ಅಕ್ರಮವಾಗಿ ನಿವೇಶವನ್ನು ಸ್ಥಳ ಪರಿಶೀಲಿಸಿ ಸಕ್ರಮಗೊಳಿಸಬೇಕು ತಪ್ಪಿದಲ್ಲಿ ಈ ವಿಚಾರವನ್ನು ಆಯೋಗದ ಗಮಕ್ಕೆ ತರಲಾಗುವುದು ಎಂದರು.
24/10.ರ ಹಣಕಾಸು ಪೌರಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಮತ್ತು ಈ ಮಕ್ಕಳಿಗೆ ಲ್ಯಾಪ್ಟಾಪ್ ನೀಡಬೇಕು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು.ಈ ಹಣ ಪೌರಕಾರ್ಮಿಕ ಸಮುದಾಯದ ಅಭಿವೃದ್ಧಿಗಳಿಗೆ ಮಾತ್ರ ಮೀಸಲಿರಸಬೇಕು. ಬೇರೆ ವ್ಯವಹಾರಗಳಿಗೆ ವ್ಯಯ ಮಾಡಬಾರದು ಎಂದು ಎಚ್ಚರಿಕೆ ನೀಡಿದರು .
ಪೌರಕಾರ್ಮಿಕರಿಗೆ ಮೂರು ತ್ರೈಮಾಸಿಕ ಒಂದು ಬಾರಿ ಆರೋಗ್ಯ ತಪಾಸಣಾ ಮಾಡಿಸಬೇಕು. ಹಾಗೂ ವರ್ಷಕ್ಕೆ ಒಂದು ಬಾರಿ ( ಯಕೋ, ಇಸಿಜಿ, ಹೃದಯ ಪರೀಕ್ಷೆ, ಬಿಪಿ ಶುಗರ್, ಇನ್ನು ಇತರ ಪರೀಕ್ಷೆಗಳು ) ಒಳಗೊಂಡAತೆ ಮಾಸ್ಟರ್ ಚೆಕಪ್ ಮಾಡಿಸಬೇಕು ಎಂದು ಹೇಳಿದರು.ಗುಣಮಟ್ಟಯುಳ್ಳ ಪರಿಕರಗಳನ್ನು ನೀಡಬೇಕು ಹಾಗೂ ಪೌರಕಾರ್ಮಿಕರು ತಪ್ಪದೆ ಪರಿಕರಗಳನ್ನು ಬಳಸಬೇಕು. ಏಕೆಂದರೆ ನಿಮ್ಮ ಆರೋಗ್ಯದ ಬಗ್ಗೆ ತಾವು ಗಮನಿಸಬೇಕು. ಒಂದು ವೇಳೆ ಹೆಚ್ಚು ಕಡಿಮೆ ಆದಲ್ಲಿ ಯಾರೂ ಬರುವುದಿಲ್ಲ ಎಂದರು ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಿ ಪೌರಕಾರ್ಮಿಕರಿಗೆ ಸಲಹೆ ನೀಡಿದರು.
ಪೌರಕಾರ್ಮಿಕರು ಕೆಲಸ ನಿರ್ವಹಿಸಿ ಬಂದಮೇಲೆ ವಿಶ್ರಾಂತಿ ಪಡೆಯಲು ವಿಶ್ರಾಂತಿ ಕೊಠಡಿ ಅವಶ್ಯಕತೆ ಇದೆ ಆದ್ದರಿಂದ ಶೀಘ್ರದಲ್ಲಿ ವ್ಯವಸ್ಥೆ ಮಾಡುವಂತೆ ತಿಳಿಸಿದರು.
ಈ ಸಭೆಯಲ್ಲಿ ತಹಶೀಲ್ದಾರ್ ಟಿ.ಜೆ.ಸುರೇಶಾರ್, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಸಾಯಕ ಸಮಾಜ ಕಲ್ಯಾಣ ಅಧಿಕಾರಿ ವಿನುತನ್, ಆರ್.ಒ. ತ್ರಿವೇಣಿ, ಆರೋಗ್ಯಧಿಕಾರಿ ಚಂಪಾಶ್ರೀ, ವ್ಯವಸ್ಥಾಪಕ ಮಹೇಂದ್ರ, ಸಮುದಾಯ ಸಂಘಟನಾಧಿಕಾರಿ ನಳಿನಿ, ಪೌರಕಾರ್ಮಿಕರ ಮುಖಂಡ ಮುರುಗ, ಸೋಮು, ಗುಮ್ಮಸ್ತಿ ಆಶಾ, ಮೇಸ್ತ್ರೀ ಸೋಮಣ್ಣ,ನಂಜಯ್ಯ, ಆರ್ ಮಹದೇವ, ಗೋಪಾಲ, ಇದ್ದರು.
ಪೌರ ಕಾರ್ಮಿಕರ ಕುಂದು ಕೊರತೆ ಸಭೆ



