ಬೆಂಗಳೂರು: ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಇತ್ತೀಚೆಗೆ ಲೋಕಸಭಾ ಚುನಾವಣೆಗೆ ಸಂಬಂಧಪಟ್ಟ ಹಾಗೆ ರೌಡಿಗಳ ಮೇಲೆ ನಿಗಾವಹಿಸಲು ನೀಡಿದ ಆದೇಶದ ಮೇರೆಗೆ ಕುಣಿಗಲ್ ತಾಲೂಕಿನ ಮೇದೂರು ಗ್ರಾಮದ ನಟೋರಿಯಸ್ ರೌಡಿ ಶೀಟರ್ ಕುಣಿಗಲ್ ಗಿರಿಯನ್ನು ಗಡಿಪಾರು ಮಾಡಲಾಗಿದೆ.
ಈತನ ಮೇಲೆ ಸುಮಾರು 20 ವರ್ಷಗಳಿಂದ ದರೋಡೆ, ಕೊಲೆ, ಕೊಲೆ ಯತ್ನ ಹಾಗೂ ಇತರೆ ಪ್ರಕರಣಗಳಿಗೆ ಸಂಬಂಧಪಟ್ಟ ಹಾಗೆ ತುಮಕೂರು ಹಾಗೂ ಬೆಂಗಳೂರು ನಗರ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತದೆ.
ಏಪ್ರಿಲ್ 26ರಂದು ಲೋಕಸಭಾ ಚುನಾವಣಾ ನಡೆಯುವ ಹಿನ್ನೆಲೆಯಲ್ಲಿ ಈತನಿಂದ ಸಾರ್ವಜನಿಕರಿಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಪೊಲೀಸ್ ಠಾಣೆ ನಿರ್ದೇಶಕರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿರುತ್ತದೆ.