ದೆಹಲಿ: ದೆಹಲಿ ಮದ್ಯ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ನಾಯಕ ಸತ್ಯೇಂದ್ರ ಜೈನ್ ಅವರಿಗೆ ಜಾಮೀನು ನೀಡಲು ಇಂದು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಈಗಾಗಲೇ ಅವರಿಗೆ ನೀಡಿರುವ ಮಧ್ಯಂತರ ಜಾಮೀನನ್ನು ರದ್ದುಗೊಳಿಸಿ, ತಕ್ಷಣವೇ ಶರಣಾವಾಗುವಂತೆ ಸೂಚಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 2022ರ ಮೇ ತಿಂಗಳನಲ್ಲಿ ಅವರನ್ನು ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಿತ್ತು.
2010-12 ಹಾಗೂ 2015 ಹಾಗೂ 16ರಲ್ಲಿ ವಿವಿಧ ಕಂಪನಿಗಳಿಂದ ಇವರು ಅಕ್ರಮವಾಗಿ ಹಣ ಪಡೆದಿದೆ ಎಂದು ಹೇಳಲಾಗಿತ್ತು. ಈ ಕಾರಣಕ್ಕೆ ಅವರನ್ನು ಇಡಿ ಬಂಧಿಸಿತ್ತು. ನಂತರ ಕೆಲವು ತಿಂಗಳುಗಳ ಹಿಂದೆ ಅವರಿಗೆ ಕೋರ್ಟ್ ಅನಾರೋಗ್ಯದ ಕಾರಣಕ್ಕೆ ಮಧ್ಯಂತರ ಜಾಮೀನು ನೀಡಿತ್ತು.