`ಕರ್ನಾಟಕದ ಚಿತ್ರರಂಗಕ್ಕೆ ಮತ್ತೊಂದು ಅಂತರರಾಷ್ಟ್ರೀಯ ಗರಿ. ಕನ್ನಡದ ಯುವ ನಿರ್ದೇಶಕಿ- ಕರೆನ್ ಕ್ಷಿತಿ ಸುವರ್ಣ ಅವರು 79ನೇ ಕಾನ್ ಚಿತ್ರೋತ್ಸವದ ಅಂಗವಾಗಿ ಮೇ 12-15ರ ವರೆಗೆ ಫ್ರಾನ್ಸ್ನ ಕಾನ್ ನಗರದಲ್ಲಿ ನಡೆಯಲಿರುವ ಪ್ರತಿಷ್ಠಿತ `ವರ್ಲ್್ಡ ವುಮನ್ ಕಾನ್ ಅಜೆಂಡಾ 2026′ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ.
ಇದರೊಂದಿಗೆ, ಕಾನ್ ಚಿತ್ರೋತ್ಸವದ ವೇದಿಕೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿರುವ ಮೊದಲಿಗರಲ್ಲಿ ಒಬ್ಬ ಮಹಿಳಾ ನಿರ್ದೇಶಕಿ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಕರೆನ್ ಪಾತ್ರರಾಗಿದ್ದಾರೆ.
ವರ್ಲ್ ವುಮನ್ ಫೌಂಡೇಶನ್ ಆಯೋಜಿಸಿರುವ ಈ ಜಾಗತಿಕ ವೇದಿಕೆಯು ,AI Artistry & Activism’ ವಿಷಯದ ಮೇಲೆ ಕೇಂದ್ರೀಕೃತವಾಗಿದ್ದು, ಕರ್ನಾಟಕದ ಸಿನಿಮಾ ಪ್ರತಿಭೆಯನ್ನು ವಿಶ್ವ ಮಟ್ಟದಲ್ಲಿ ಪರಿಚಯಿಸುವ ಸುವರ್ಣಾವಕಾಶವಾಗಿದೆ.
ಪ್ರಿಯಾಂಕಾ ಉಪೇಂದ್ರ ಅಭಿನಯದ `ಸೆಪ್ಟೆಂಬರ್ 21′ ಚಿತ್ರದ ಮೂಲಕ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡಿರುವ ಕರೆನ್, ಈ ವೇದಿಕೆಯಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಕರ್ನಾಟಕದ ಸ್ವತಂತ್ರ ಸಿನಿಮಾ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.
`ಕರ್ನಾಟಕದ ಮಣ್ಣಿನಿಂದ ಕಾನ್ನ ಕೆಂಪು ಕಾರ್ಪೆಟ್ವರೆಗೆ’ ಇದು ನನ್ನೊಬ್ಬಳ ಪಯಣವಲ್ಲ. ಇದು ಕನ್ನಡ ಸಿನಿಮಾ ಮತ್ತು ನಮ್ಮ ರಾಜ್ಯದ ಪ್ರತಿಯೊಬ್ಬ ಯುವ ಕಲಾವಿದೆಯ ಕನಸಿನ ಪಯಣ. ಈ ವೇದಿಕೆ ಕಲ್ಪಿಸಿದ ವರ್ಲ್್ಡ ವುಮನ್ ಫೌಂಡೇಶನ್ಗೆ ನಾನು ಕನ್ನಡ ನಾಡಿನ ಪರವಾಗಿ ಆಭಾರಿ’ ಎಂದು ಕರೆನ್ ಹೇಳಿದ್ದಾರೆ.
ಕರ್ನಾಟಕದ ಕುರಿತು: ಕನ್ನಡ ಚಿತ್ರರಂಗವು ಡಾ. ರಾಜ್ಕುಮಾರ್, ಗಿರೀಶ್ ಕಾಸರವಳ್ಳಿಯಿಂದ ಹಿಡಿದು ಇಂದಿನ ನವ-ತರಂಗ ನಿರ್ದೇಶಕರವರೆಗೆ ವಿಶ್ವ ಸಿನಿಮಾಕ್ಕೆ ನೀಡಿದ ಕೊಡುಗೆ ಅಪಾರ. ಕರೆನ್ ಅವರ ಕಾನ್ ಪಯಣವು ಆ ಪರಂಪರೆಗೆ ಹೊಸ ಅಧ್ಯಾಯವನ್ನು ಸೇರಿಸಿದೆ.
ವಲ್ಡ್ ವುಮನ್ ಕಾನ್ ಅಜೆಂಡಾ 2026ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿರುವ `ಸೆಪ್ಟೆಂಬರ್ 21′ ನಿರ್ದೇಶಕಿ



