ಚಿತ್ರದುರ್ಗ: ಇಂದಿನ ದಿನಮಾನದಲ್ಲಿ ಅಪ್ಪ, ಅಣ್ಣ, ತಮ್ಮ, ಅಮ್ಮ, ಅಕ್ಕ ಶಾಸಕರಾದರೆ, ಮಂತ್ರಿಗಳಾದರೆಅವರ ಸಂಭAಧಿಕರು ಅವರ ಹೆಸರನ್ನು ಹೇಳಿಕೊಂಡು ತಮ್ಮ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ ಆದರೆ ಶಿವಪ್ರ ಕಾಶ್ ರವರು ತಮ್ಮ ಮಗ ಶಾಸಕರಾದರೂ ಸಹಾ ಅವರ ಹೆಸರನ್ನು ಎ ಲ್ಲಿಯೂ ಸಹಾ ಎತ್ತದೆ ತಮ್ಮ ಪಾಲಿನ ಕೆಲಸವನ್ನು ಸಮಾಜಮುಖಿ ಯಾಗಿ ಮಾಡುತ್ತಾ ಜೀವನವನ್ನು ಸಾಗಿಸಿದ್ದಾರೆ ಎಂದು ಮಾದಾರ ಚನ್ನ ಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಮಹಾಸ್ವಾ ಮೀಜಿ ತಿಳಿಸಿದರು.ಇತ್ತೀಚೆಗೆ ನಿಧನರಾದ ವೀರಶೈವ ಸಮಾಜದ ಮಾಜಿ ಅಧ್ಯಕ್ಷರು,ಜಯ ಪದ್ಮ ಮೋಟಾರ್ ಸರ್ವಿಸ್ ಮಾಲಿಕರಾದ ಕೆ.ಆರ್. ಶಿವಪ್ರಕಾಶ್ ರವ ರು ಸ್ಮರಣೆ ಕಾರ್ಯಕ್ರಮವನ್ನು ಭಾನುವಾರ ನಗರದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಶಿವಪ್ರಕಾಶ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿಮಾತ ನಾಡಿದ ಶ್ರೀಗಳು,ಶಿವಪ್ರಕಾಶ್ ರವರ ಜೊತೆಯಲ್ಲಿ ಅಷ್ಠಾಗಿ ನಮಗೆ ಒಡನಾಟ ಇಲ್ಲ. ಅವರಿಗೂ ನಮಗೂ ವ್ಯಯಸ್ಸಿನ ಅಂತರ ಇದೆ. ನವೀನ್ ರವರ ತಂದೆ ಎಂದು ಮಾತ್ರ ಗೋತ್ತು. ಸರಳ, ಸಜ್ಜನಿಕ ವ್ಯಕ್ತಿ ಯಾಗಿ ಶಿವಪ್ರಕಾಶ ಇದ್ದರೂ, ಬೇರೆಯವರಿಗೆ ನೆರವನ್ನು ನೀಡುವಂತ ಗುಣವನ್ನು ಹೊಂದಿದವರಾಗಿದ್ದರು,ಯಾರಿಗೂ ಸಹಾ ಕೆಟ್ಟದ್ದನ್ನು ಬಯ ಸದೇ ಸದಾ ಒಳಿತನ್ನು ಬಯಸುತ್ತಿದ್ದರು,ಮಗ ಶಾಸಕನಾಗಿದ್ದರೂ ಸಹಾ ಯಾವೂತ್ತು ಸಹಾ ಮಗನ ಹಸರನ್ನು ಬಳಸಿ ಕೊಳ್ಳಲಿಲ್ಲ,ತಮ್ಮ ಮಕ್ಕಳಿ ಗೆ ಸರಿಯಾದ ಮಾರ್ಗದರ್ಶವನ್ನು ನೀಡಿದ್ದಾರೆ. ಅವರ ಆದರ್ಶಗಳನ್ನು ಅವರ ಕುಟುಂಬ ಪಾಲಿಸುವುದರ ಮೂಲಕ ಅವರ ಆತ್ಮಕ್ಕೆ ಶಾಂತಿಯ ನ್ನು ನೀಡಬೇಕಿದೆ ಎಂದರು.ಶ್ರೀ ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನAದ ಮಹಾಸ್ವಾಮೀಜಿ, ತಮ್ಮ ಆರ್ಶೀಚನದಲ್ಲಿ ಶಿವಪ್ರಕಾಶ್ ರವರು ನಮ್ಮ ಆಶ್ರಮದ ಪರಮ ಭಕ್ತರಾಗಿದ್ದರು, ಮಗನನ್ನು ಎಂಎಲ್.ಸಿ.ಯನ್ನಾಗಿ ಮಾಡುವ ಕನಸನ್ನು ಕಂಡಿದ್ದರು ಅದರಂತೆ ಛಲ ಬಿಡದೆ ಮಗನನ್ನು ಶಾಸಕನನ್ನಾಗಿ ಮಾಡಿದ ರು. ತಂದೆಯ ರೀತಿಯಲ್ಲಿ ಮಗನು ಸಹಾ ನಡೆಸುಕೊಳ್ಳುತ್ತಿದ್ದಾರೆ. ನಗ ರದ ನೀಲಕಂಠೇಶ್ವರ ದೇವಾಲಯದ ಅಭೀವೃದ್ದಿಯಲ್ಲಿ ಇವರ ಪಾತ್ರ ಇದೆ.ಇದ್ದಲ್ಲದೆ ಪಂಚಾಚಾರ್ಯ ಕಲ್ಯಾಣ ಮಂಟಪ ನಿರ್ಮಾಣದಲ್ಲಿ ಯೂ ಸಹಾ ಇವರು ಇದ್ದಾರೆ.ಇವರ ಶ್ರೀಮತಿಯವರು ಸಹಾ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ವಿವಿಧ ರೀತಿ ಯ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ. ಶಿವಪ್ರಕಾಶ್ ರವರ ಸಮಾಜ ಮುಖಿಯಾದ ಕೆಲಸಗಳನ್ನು ಮಾಡುತ್ತಿ ದ್ದಾರು ಇದರಿಂದ ಯಾವುದೇ ರೀತಿಯ ಪ್ರಚಾರವನ್ನು ಬಯಸಿರಲಿಲ್ಲ, ಹುಟ್ಟು ಸಾವು ಸಾಮಾನ್ಯ ಇದರ ಮಧ್ಯದಲ್ಲಿ ಬದುಕಿದ್ದಾಗ ಏನಾದರೂ ಸಾಧನೆಯನ್ನು ಮಾಡಿ ತೋರಿಸಬೇಕಿದೆ ಎಂದು ಶ್ರೀಗಳು ಶಿವಪ್ರಕಾಶ್ ಭೌತಿಕವಾಗಿ ನಮ್ಮ ಜೊತೆಯಲ್ಲಿ ಇಲ್ಲವಾದರೂ ಸಹಾ ಮಾನಸಿಕವಾಗಿ ನಮ್ಮ ಜೊತೆಯಲ್ಲಿ ಇದ್ದಾರೆ, ಅವರ ಮಾಡುತ್ತಿದ್ದ ಕೆಲಸಗಳನ್ನು ಅವರ ಮಗನಾದ ನವೀನ್ ರವರು ಮುಂದುವರೆಸಿಕೊAಡು ಹೋಗಬೇಕಿದೆ ಎಂದರು.ದಾವಣಗೆರೆಯ ವಿರಕ್ತಮಠದ ಶ್ರೀ ಡಾ.ಬಸವಪ್ರಭು ಮಹಾಸ್ವಾಮೀಜಿ ತಮ್ಮ ಆರ್ಶೀಚನದಲ್ಲಿ ಶಿವಪ್ರಕಾಶ್ ರವರ ಮುರುಘಾ ಮಠದೊಂದಿಗೆ ಉತ್ತಮವಾದ ಭಾಂಧ್ಯವ್ಯವನ್ನು ಹೊಂದಿದ್ದರು,ಆಧಾತ್ಮಿಕ ಚಿಂತನೆ, ಕಾ ಯಕ ನಿರ್ವಹಣೆ ಹಾಗೂ ಪರೋಪಕಾರದ ವರ್ತನೆಯನ್ನು ಹೊಂದಿದ್ದ ರು, ಮಠದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು, ಇಂದಿನ ದಿನಮಾನದಲ್ಲಿ ಪ್ರತಿ ಮನೆಯಲ್ಲಿಯೂ ಸಹಾ ಉಪ್ಪು-ಕಾರ ಸಿಗುತ್ತ ದೆ ಆದೆರೆ ಪರೋಪಕಾರ ಮಾಡುವವರ ಸಂಖ್ಯೆ ಕಡಿಮೆ ಇದೆ. ಶಿವಪ್ರ ಕಾಶ ರವರು ಸಮಾಜಕ್ಕೆ ತಮ್ಮದೆ ಆದ ಕೂಡುಗೆಯನ್ನು ನೀಡಿದ್ದಾರೆ ಎಂದರು.ಅರಿಶಿನಕುಂಟೆ ಫ್ಲೈಓವರ್ನಲ್ಲಿ ಸರಣಿ ಅಪಘಾತ: ನಾಲ್ಕು ಸ್ವಾಮೀಜಿ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆಡಳಿತ ಮಂಡಳಿ ಸದಸ್ಯರಾದ ಶ್ರೀ ಡಾ.ಬಸವಕುಮಾರ ಮಹಾಸ್ವಾಮೀಜಿ ತಮ್ಮ ಆರ್ಶೀಚನದಲ್ಲಿ ಶಿವ ಪ್ರಕಾಶ್ ರವರ ಉತ್ತಮವಾದ ಸಮಾಜದಲ್ಲಿ ಮೌಲ್ಯಗಳನ್ನು ಬಿತ್ತಿದ್ದಾ ರೆ. ಅವುಗಳನ್ನು ಮುನ್ನಡೆಸುವ ಕಾರ್ಯವನ್ನು ಈಗ ಅವರ ಕುಟುಂಬ ದವರು ಮಾಡಬೇಕಿದೆ.ಶ್ರೀಮಠದ ಜೊತೆಯಲ್ಲಿ ಶಿವಪ್ರಕಾಶ್ ರವರ ಉತ್ತಮವಾದ ಒಡನಾಟ ಇತ್ತು,ನವೀನ್ ರವರು ಯುವ ನಾಯಕರಾಗಿ ರಾಜಕೀಯದಲ್ಲಿ ಉತ್ತಮವಾಗಿ ಬೆಳೆಯುತ್ತಿದ್ದಾರೆ,ಜನತೆಯ ಸಮಸ್ಯೆಗ ಳಿಗೆ ಸ್ಪಂದಿಸುತ್ತಿದ್ದಾರೆ ಎಂದರು.ಮಾಜಿ ಉಪಮುಖ್ಯಮಂತ್ರಿಗಳು. ಲೋಕಸಭಾ ಸದಸ್ಯರಾದ ಗೋವಿಂ ದ ಎಂ.ಕಾರಜೋಳ ಮಾತನಾಡಿ, ಹುಟ್ಟಿದ ಮಾನವ ಸಾಯಲೇ ಬೇಕು ಈ ಸಾಯುವುದರೊಳಗೆ ಉತ್ತಮವಾದ ಕೆಲಸವನ್ನು ಮಾಡಿ ಸಾಯ ಬೇಕು ನಾವು ಸತ್ತಾಗ ಜನತೆ ನಮ್ಮನ್ನು ಬೈಯಬಾರದು ನೆನೆಯುವಂತೆ ಮಾಡಬೇಕಿದೆ ಶಿವಪ್ರಕಾಶ್ ರವರ ಇದೆ ಕೆಲಸವನ್ನು ಮಾಡಿದ್ದಾರೆ ಬದು ಕಿದ್ದಾಗ ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ ಇದರಿಂದ ಈ ಕಾ ರ್ಯಕ್ರಮದಲ್ಲಿ ಇಷ್ಟೊಂದು ಜನತೆ ಭಾಗವಹಿಸಿದ್ದಾರೆ. ನಾವೂ ಬದುಕಿದ್ದಾಗ ಮಾಡುವ ಕೆಲಸಗಳು ಯಾವಾಗಲೂ ಶಾಶ್ವತವಾ ಗಿ ಇರಬೇಕಿದೆ. ಸಮಾಜವನ್ನು ಒಗ್ಗೂಡಿಸುವಂತ ಕಾರ್ಯವಾಗಬೇಕಿದೆ, ಬಸವ ತತ್ವದ ಮೂಲಕ ನಸವ ರಥವನ್ನು ಮುಂದಕ್ಕೆ ಎಳೆತಯುವ ಕಾ ರ್ಯವನ್ನು ಎಲ್ಲರು ಸೇರಿ ಮಾಡಬೇಕಿದೆ. ಜಾತಿ ಉಪ ಜಾತಿಗಳನ್ನು ಕೈ ಬಿಟ್ಟು ಎಲ್ಲರು ಒಂದೇ ಎಂಬ ಅಭೀಪ್ರಾಯದ ಮೂಲಕ ಮುನ್ನೆಡೆಯು ವ ಅವಶ್ಯಕತೆ ಇಂದಿನ ದಿನಮಾನದಲ್ಲಿ ಇದೆ ಎಂದರು.
ಅಧ್ಯಕ್ಷತೆಯನ್ನು ವಹಿಸದ್ದ ಮಾಜಿ ಸಚಿವರಾದ ಹೆಚ್.ಏಕಾಂತಯ್ಯ ಮಾತನಾಡಿ, ಬಸವಣ್ಣರವರ ವಚನಗಳನ್ನು ಎಲ್ಲರು ಹೇಳುತ್ತಾರೆ ಆದ ರೆ ಅದನ್ನು ಅಳವಡಿಸುವಲ್ಲಿ ಮಾತ್ರ ಹಿಂದೆ ಬೀಳುತ್ತಾರೆ. ನುಡಿದಂತೆ ನಡೆಯುವ ಹಾದಿ ನಮ್ಮದಾಗುರಬೇಕಿದೆ ಆಗ ಮಾತ್ರ ಕಲ್ಯಾಣ ರಾಜ್ಯ ನಿರ್ಮಾಣವಾಗಲು ಸಾಧ್ಯವಿದೆ. ಸಮಾಜವನ್ನು ಒಂದುಗೂಡಿಸುವ ಕಾ ರ್ಯವಾಗಬೇಕಿದೆ.ಮೈ ಮೇಲೆ ಲಿಂಗವನ್ನು ಕಟ್ಟಿಕೊಂಡವನೆ ಲಿಂಗಾ ಯತ ಆದರೆ ಇಂದಿನ ದಿನಮಾನದಲ್ಲಿ ಲಿಂಗವನ್ನು ಕಟ್ಟಿಕೊಳ್ಳುವವರವ ಸಂಖ್ಯೆ ಕಡಿಮೆ ಇದೆ.ಇಂದಿನ ದಿನದಲ್ಲಿ ದೌರ್ಜನ್ಯಕ್ಕೆ ಒಳಗಾದವರ ಬಗ್ಗೆ ಯಾರು ಸಹಾ ಮಾತನಾಡುವುದಿಲ್ಲ ಎಲ್ಲರು ಉಳ್ಳವರ ಪರವಾಗಿಯೇ ಇದ್ದಾರೆ ನೊಂದವರ, ಬಡವರ, ಧ್ವನಿ ಇಲ್ಲದವರ ಬಗ್ಗೆ ಯಾರೂ ಸಹಾ ಧ್ವನಿಯನ್ನು ಎತ್ತುವುದಿಲ್ಲ ಎಂದರು.ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು. ತಾ ಕುಂಚಿಟಿಗ ಸಂಸ್ಥಾನದ ಶ್ರೀ ಡಾ. ಶಾಂತವೀರ ಮಹಾಸ್ವಾಮೀಜೀ, ಭೋವಿಗುರು ಪೀಠದ ಶ್ರೀ ಇಮ್ಮ ಡಿ ಸಿದ್ಧರಾಮೇಶ್ವರ ಮಹಾಸ್ವಾಮೀಜಿ, ಹರಿಹರದ ವಾಲ್ಮೀಕಿ ಗುರುಪೀ ಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾವಿ ಮಡಿವಾಳ ಗುರುಪೀಠ ದ ಶ್ರೀ ಬಸವ ಮಾಚಿದೇವ ಮಹಾಸ್ವಾಮೀಜಿ, ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಮಹಾಸ್ವಾಮೀಜಿ. ಕೇತೇಶ್ವರ ಗುರುಪೀಠ ದ ಶ್ರೀ ಬಸವ ಇಮ್ಮಡಿ ಕೇತೇಶ್ವರ ಮಹಾಸ್ವಾಮೀಜಿ ವಹಿಸಲಿದ್ದರು.ಹಿರಿಯ ಪತ್ರಕರ್ತರಾದ ಜಿ.ಎಸ್. ಉಜ್ಜನಪ್ಪ ಸ್ಮರಣಾ ನುಡಿಗಳನ್ನಾಡಿ ದರು ಮಾಜಿ ಕೇಂದ್ರ ಸಚಿವರಾದ ಜಿ.ಎಂ.ಸಿದ್ದೇಶ್ವರ,ಮಾಜಿ ಶಾಸಕರಾದ ಎಸ್.ಕೆ.ಬಸವರಾಜನ್,ಮನೋಹರ ಮಸ್ಕಿ ಭಾಗವಹಿಸಿದ್ದರು,ತೋ ಟಂಪ್ಪ ಉತ್ತಂಗಿ ಹಾಗೂ ಕೋಕಿಲ ಪ್ರಾರ್ಥಿಸಿದರೆ,ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಅವರ ಪುತ್ರರಾದ ನವೀನ್ ಕೆ.ಎಸ್. ಸ್ವಾಗತಿಸಿದ ರು ನವೀನ್ ಮಸ್ಕಲ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.
ಸರಳ ಸಜ್ಜನಿಕೆಯ ವ್ಯಕ್ತಿತ್ವದ ಸಹಕಾರ ಮೂರ್ತಿ ಶಿವಪ್ರಕಾಶ್: ಶ್ರೀ ಮಾದರ ಚನ್ನಯ್ಯ ಸ್ವಾಮೀಜಿ



