ಸಾಹಿತಿ, ಗಾಯಕ, ಸಂಗೀತ ಸಂಯೋಜಕ ಮಂಜುಕವಿ ನಿರ್ದೇಶನ ಮಾಡುತ್ತಿರುವ `ತಿಕ್ಲು ರಾಮ’ ಸಿನಿಮಾದ ಚಿತ್ರೀಕರಣವು ಈಗಾಗಲೇ ಶೇಕಡ 40ರಷ್ಟು ಮುಗಿದಿದೆ. ಕಥೆ ಬರೆದಿರುವ ಡಾ.ರಾಜ್ವೀರ್ ಶೀರ್ಷಿಕೆ ಹೆಸರಿನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಮನವಮಿ ಪುಣ್ಯದಿನದಂದು ಹೊಸ ಪೋಸ್ಟರ್ನ್ನು ಹೊರಬಿಡಲಾಗಿತ್ತು. ಆದರೆ ಸಿನಿಮಾದ ಶೀರ್ಷಿಕೆ ಸರಿಯಿಲ್ಲವೆಂದು ಹಿಂದೂಪರ ಸಂಘಟನೆಯ ಕಾರ್ಯಕರ್ತ ಗಿರೀಶ್ ಕಾಮಾಕ್ಷಿಪಾಳ್ಯ ಪೋಲೀಸ್ ಠಾಣೆಗೆ ದೂರು ನೀಡಿ, ಸಿನಿಮಾದ ಹೆಸರನ್ನು ಬದಲಾವಣೆ ಮಾಡಬೇಕೆಂದು ಆಗ್ರಹ ಪಡಿಸಿರುತ್ತಾರೆ.
ಇದೇ ವಿಷಯಕ್ಕೆ ಮಾತನಾಡಿರುವ ಡಾ.ರಾಜ್ವೀರ್, ರಾಮ ಮತ್ತು ಹನುಮನ ಹೆಸರಿಗೆ ಧಕ್ಕೆ ಬಾರದಂತೆ, ಅವಹೇಳನ ಮಾಡದಂತೆ ಇಲ್ಲಿಯವರೆಗೂ ಯಾವುದೇ ಕೆಲಸವನ್ನು ಮಾಡಿಲ್ಲ, ಮಾಡುವುದು ಇಲ್ಲ. ಟೈಟಲ್ ಬಗ್ಗೆ ಲೋಪದೋಷಗಳು ಕಂಡುಬAದಲ್ಲಿ, ಅದನ್ನು ಸರಿಪಡಿಸಿಕೊಳ್ಳುವುದಾಗಿ ನಿರ್ಮಾಪಕಿ ಶೃತಿ.ಜಿ.ಬಿ ಮತ್ತು ನಿರ್ದೇಶಕ ಮಂಜುಕವಿ ಸ್ಪಷ್ಟನೆ ನೀಡಿರುತ್ತಾರೆ. ಒಂದು ವೇಳೆ ರಾಮ, ಹನುಮನ ಅವಹೇಳನ ದೃಶ್ಯಗಳು ಇದ್ದಲ್ಲಿ ಅದನ್ನು ತೆಗೆದು ಹಾಕಲಾಗುವುದು.
ಇದೊಂದು ಪರಿಸರ ಪ್ರೇಮಿ, ಹೃದಯ ಸ್ಪರ್ಶಿ ಕಾದಂಬರಿ ಆಗಿದೆ. ಇದನ್ನು ಓದಿದ ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡರು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿರುತ್ತಾರೆ. ಸಿನಿಮಾದಲ್ಲಿ ಉತ್ತಮವಾದ ಸಂದೇಶಗಳು ಇರಲಿದೆ. ತಿಕ್ಲುರಾಮ ಸಾಮಾಜಿಕ ಕಳಕಳಿಯ ಕೆಲಸದಲ್ಲಿ ತೊಡಗಿಕೊಂಡು, ಪರಿಸರ ಕಾಪಾಡುತ್ತಾ, ಜೀವನ ನಡೆಸುತ್ತಿರುವಾಗ ಆತನ ಬದುಕಲ್ಲಿ ಏನೆಲ್ಲಾ ಆಗುಹೋಗುಗಳು ಆಗುತ್ತದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುವ ಪ್ರಯತ್ನ ಮಾಡಲಾಗುತ್ತಿದೆ. ರಾಮನನ್ನು ಬಿಂಬಿಸುವ ನಿಟ್ಟಿನಲ್ಲಿ ಸಿನಿಮಾ ಸಿದ್ದಪಡಿಸಲಾಗುತ್ತಿದೆ. ಶ್ರೀರಾಮನಿಗೆ ಅವಮಾನವಾಗುವ ಹಾಗೂ, ಹಿಂದೂಗಳ ಭಾವನೆಗೆ ಧಕ್ಕೆ ತರಬಾರದೆಂಬ ಉದ್ದೇಶದಿಂದ `ತಿಕ್ಲುರಾಮ’ ಎನ್ನುವ ಚಿತ್ರದ ಶೀರ್ಷಿಕೆಯನ್ನು ಬದಲಾಯಿಸಲು ಸೂಚಿಸಲಾಗಿದ್ದು, ಯಾವ ಹೆಸರು ಇಡಲಾಗುವುದು ಎಂಬ ವಿಷಯವನ್ನು ಸುದ್ದಿಗೋಷ್ಟಿ ನಡೆಸಿ ಅಲ್ಲಿ ತಿಳಿಸಲಾಗುವುದೆಂದು ಡಾ.ರಾಜ್ವೀರ್ ಮಾಹಿತಿ ಹಂಚಿಕೊAಡಿದ್ದಾರೆ.
ತಾರಾಗಣದಲ್ಲಿ ಸುಚೇಂದ್ರ ಪಸ್ರಾದ್, ಜಹಾಂಗೀರ್, ಚೈತ್ರರಾಮ್, ಹಾಸ್ಯ ನಟ ಗಿರೀಶ್. ಇವರೊಂದಿಗೆ ವಿನೋದ್ ಪವಿತ್ರ, ಮಧು ಭೈರಪ್ಪ, ಶ್ರಾವ್ಯ ಸೇರಿದಂತೆ ಅನೇಕ ಹೆಸರಾಂತ ಕಲಾವಿದರು ಅಭಿನಯಿಸುತ್ತಿದ್ದಾರೆ. ಹಿನ್ನಲೆ ಸಂಗೀತ ವಿನು ಮನಸು, ಛಾಯಾಗ್ರಹಣ ರಾಜ್ ಕಡೂರು-ಭರತ್, ಸಾಹಸ ಅಲ್ಟಿಮೇಟ್ ಶಿವು-ಮಾಸ್ ಮಾದು, ನೃತ್ಯ ಜಗ್ಗು ಅವರದಾಗಿದೆ.
ವಿವಾದಕ್ಕೆ ಸಿಲುಕಿದ ತಿಕ್ಲುರಾಮ ಶೀರ್ಷಿಕೆ



