ಮಂಜು ಪಾಂಡವಪುರ ನಿರ್ದೇಶನ….. ಸದ್ಯದಲ್ಲಿ……
ಬೆಂಗಳೂರಿಂದ ಮೈಸೂರಿಗೆ ಕೆಂಪು ಬಸ್ಸಿನಲ್ಲಿ ಸುಮಾರು ಮೂರು ತಾಸಿನ ಪ್ರಯಾಣ. ಈ ಪ್ರಯಾಣದಲ್ಲಿ ಹಲವಾರು ಕುತೂಹಲ ಭರಿತ ಘಟನೆಗಳು ಜರುಗಿ ದಾರಿ ಮಧ್ಯದಲ್ಲಿ ಬಸ್ ಕೆಟ್ಟುನಿಂತು ಒಂದು ಗಂಟೆ ವಿಳಂಬವಾಗಿ ಮೈಸೂರು ತಲುಪುತ್ತದೆ. ಈ ರೀತಿ ಕಥಾಂದರದ ಪಯಣದ ಕಥೆಯನ್ನು” ಮಂಜು ಪಾಂಡವಪುರ” ಚಿತ್ರಕಥೆ-ಸಂಭಾಷಣೆಗೆ, ಅಳವಡಿಸಿ ನಿರ್ದೇಶನವನ್ನು ವಹಿಸಲಿದ್ದಾರೆ. ಈ ಚಿತ್ರದಲ್ಲಿ ಐದು ಜನ ನಾಯಕ ನಟರಿದ್ದು, ಇನ್ನು ಅನೇಕ ಕಲಾವಿದರ ಹಾಗೂ ತಾಂತ್ರಿಕ ವರ್ಗ ಬಳಗದ ಆಯ್ಕೆ ನಡೆಯುತ್ತಿದೆ. ಇಲ್ಲಿಯವರೆಗೂ ಸ್ಮಶಾನ ಮೌನ, ಭೃಂಗದ ಬೆನ್ನೇರಿ, ಹಿರಿಮನೆ ಎಸ್ಟೇಟ್, ನಿರ್ಗಮನದ ಹಾದಿಯಲ್ಲಿ ಹಾಗೂ ಮಾತಂಗಿ ದೀವಟಿಗೆ.. ಎಂಬ ಕಲಾತ್ಮಕ ಸಿನಿಮಾಗಳನ್ನು ನಿರ್ದೇಶಿಸಿ ಈಗ ಕಮರ್ಷಿಯಲ್ ಸಿನಿಮಾ ನಿರ್ದೇಶಿಸಲು ಹೆಜ್ಜೆ ಇಡುತ್ತಿದ್ದಾರೆ. ಈ ಸಿನಿಮಾವನ್ನು” ವರ್ಲ್್ಡ ಸಿನಿಮೂವೀಸ್” ಸಂಸ್ಥೆಯು ನಿರ್ಮಾಣ ಮಾಡುತ್ತಿದ್ದು ಐದು ಜನ ಸಹ ನಿರ್ಮಾಪಕರ ಬಳಗವಿದೆ.
ನಾಲ್ಕು ಗಂಟೆಗಳಲ್ಲಿ ಜರುಗುವ ಬಸ್ ಪ್ರಯಾಣದ ಕಥೆ ಬೆಂಗಳೂರು ಖಿಔ ಮೈಸೂರು ಸಿನಿಮಾ



