ಬೆಂಗಳೂರು: ಬಿಡದಿ ಟೌನ್ಶಿಪ್ ಯೋಜನೆ ಸಂಬAಧ ಇದುವರೆಗೂ ನಡೆಯುತ್ತಿದ್ದ ರೈತರ ಹೋರಾಟ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ.
ಸುಮಾರು 450ಕ್ಕೂ ಹೆಚ್ಚು ದಿನಗಳಿಂದ ಯೋಜನೆ ವಿರೋಧಿಸಿ ನಡೆಯುತ್ತಿದ್ದ ಹೋರಾಟ ಇದೀಗ ಯೋಜನೆ ಪರವೂ ಹೋರಾಟ ಆರಂಭಿಸುವ ಮೂಲಕ ಮತ್ತೊಂದು ತಿರುವು ಪಡೆದುಕೊಂಡಿದೆ. ಈಗಾಗಲೇ ಟೌನ್ಶಿಪ್ ವಿರುದ್ಧ ಹೋರಾಟ ನಡೆಸುತ್ತಿದ್ದ ರೈತರನ್ನು ಬೆಂಬಲಿಸಿ ಮಾಜಿ ಮುಖ್ಯಮಂತ್ರಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೋರಾಟಕ್ಕಿಳಿದಿದ್ದರು. ಈ ಹೋರಾಟ ಹಾಲಿ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡುವಿನ ಮಾತಿನ ಚಕಮಕಿಗೆ ಎಡೆಮಾಡಿಕೊಟ್ಟು ಇಬ್ಬರ ನಡುವೆ ಪ್ರತಿನಿತ್ಯ ಆರೋಪ ಪ್ರತ್ಯಾರೋಪಗಳು ನಡೆಯತೊಡಗಿದ್ದವು. ನಾಳೆ ತಮ್ಮ ಆಹ್ವಾನವನ್ನು ಮನ್ನಿಸಿ ಮುಖ್ಯಮಂತ್ರಿಯವರು ಬೈರಮಂಗಲಕ್ಕೆ ಚರ್ಚೆಗೆ ಬರುತ್ತಾರೆ ಎಂದು ಮಧ್ಯಾಹ್ನದವರೆಗೂ ಕಾಯುತ್ತಿರುತ್ತೇನೆ ಎಂದು ತಿಳಿಸಿರುವ ಕುಮಾರಸ್ವಾಮಿ, ಇದುವರೆಗೂ ತಾವು ಬರೆದ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ನಿನ್ನೆ ರಾತ್ರಿಯಿಂದ 15-20 ಜನ ಅಲ್ಲಿಯೇ ಉಳಿದು ಯೋಜನೆಯ ಪರ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ತಾವು ಯೋಜನೆಯನ್ನು ಬೆಂಬಲಿಸುವುದಾಗಿ ಅವರು ಹೇಳಿದ್ದಾರೆ. ಇದೆಲ್ಲಾ ಯಾರೂ ಏಕೆ ಮಾಡುತ್ತಿದ್ದಾರೆ ಎಂದು ನಾನು ತಿಳಿಯದವನೇನಲ್ಲಾ ಎಲ್ಲವೂ ನನಗೆ ಗೊತ್ತಿದೆ. ಭೂಸ್ವಾಧೀನಕ್ಕೆ ಅವಕಾಶ ಮಾಡಿಕೊಟ್ಟು ಹಣ ಪಡೆದರೆ ನಮ್ಮದೇನು ಅಭ್ಯಂತರವಿಲ್ಲ. ಈಗಾಗಲೇ ರೈತರು ನನ್ನ ಬಳಿಬಂದು ಘಟನೆ ಬಗ್ಗೆ ತಿಳಿಸಿದ ಪರಿಣಾಮ ನಾನು ರೈತರ ಪರವಾಗಿ ಹೋರಾಟ ನಡೆಸಲು ಮುಂದಾದೆ.
ಚರ್ಚೆಗೆ ಸಿಎಂ ನಿರೀಕ್ಷೆಯಲ್ಲಿ ಎಚ್ಡಿಕೆ ತಾರಕಕ್ಕೇರುತ್ತಿರುವ ಬಿಡದಿ ಟೌನ್ಶಿಪ್ ಪರ ವಿರೋಧ ಹೋರಾಟ



