ಬೆಂಗಳೂರು: ಕೆ ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊನ್ನೆ ನಡೆದ ತ್ರಿವಳಿ ಕೊಲೆಗಳಿಗೆ ಸಂಬಂಧಪಟ್ಟಹಾಗೆ ಪ್ರಮುಖ ಆರೋಪಿ ಕೆನೆತ್ನನ್ನು ಪುದುಚೇರಿಯಲ್ಲಿ ಪೊಲೀಸರು ಬಂಧಿಸಿರುತ್ತಾರೆ.ಕೊಲೆಯಾದ ಮಾರನೇ ದಿನ ಶ್ವೇತಾಳನ್ನು ಬಂಧಿಸಿದ ಪೊಲೀಸರು ನಿನ್ನೆ ರಾತ್ರಿ ಕೆನೆತ್ನನ್ನು ಸಹ ಬಂಧಿಸಿರುತ್ತಾರೆ.ತಂದೆ ಶೋಭಾ ಸುಂದರ್, ತಾಯಿ ಮುತ್ತುಲಕ್ಷ್ಮೀ ಮತ್ತು ತಂಗಿ ಸುಪ್ರಿಯ ರವರನ್ನು ಶ್ವೇತ ತನ್ನ ಪ್ರಿಯಕರ ಕೆನೆತ್ ಜೊತೆ ಸೇರಿ ಕೊಲೆ ಮಾಡಿ ಪರಾರಿಯಾಗಿದ್ದರು. ಕೊಲೆಯು ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಸೀಗೆಹಳ್ಳಿಯಲ್ಲಿರುವ ಡೊಮಿನಿಕ್ ಲೇಔಟ್ನ ಸಾಯಿ ಗ್ರೀನ್ ಅಪಾರ್ಟ್ಮೆಂಟ್ನಲ್ಲಿ ಜರುಗಿತ್ತು.



