ದೇವನಹಳ್ಳಿ: ಪಟ್ಟಣದ ಬಿಜೆಪಿ ಪಕ್ಷದ ಕಚೇರಿಯಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಹಿಂದುಳಿದ ವರ್ಗಗಳ (ಒಬಿಸಿ) ಮೋರ್ಚಾವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಒಬಿಸಿ ಮೋರ್ಚಾ ತಾಲೂಕು ಅಧ್ಯಕ್ಷ ಬಿ.ಕೆ. ನಾರಾಯಣಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಆದೇಶ ಪತ್ರಗಳನ್ನು ವಿತರಿಸಿ ಅಧಿಕೃತವಾಗಿ ಘೋಷಿಸಿದರು.ಈ ವೇಳೆಯಲ್ಲಿ ಬಿಜೆಪಿ ಒಬಿಸಿ ಮೋರ್ಚಾ ತಾಲೂಕು ಅಧ್ಯಕ್ಷ ಬಿ.ಕೆ. ನಾರಾಯಣಸ್ವಾಮಿ ಮಾತ ನಾಡಿ ಕುಂದಾಣ, ತೂಬಗೆರೆ, ವಿಜಯಪುರ, ಚನ್ನರಾಯಪಟ್ಟಣ, ದೇವನಹಳ್ಳಿ ನಗರ, ಬಿಜ್ಜವಾರ ಹಾಗೂ ಆವತಿ ಸೇರಿದಂತೆ ಏಳು ಮಹಾಶಕ್ತಿ ಕೇಂದ್ರಗಳಿಗೆ ದೇವನಹಳ್ಳಿ ಮಂಡಲ ಅಧ್ಯಕ್ಷ ಎಲ್.ಎನ್.ಅಂಬರೀಶ್ ಗೌಡ ನೇತೃತ್ವದಲ್ಲಿ ನೂತನ ಒಬಿಸಿ ಅಧ್ಯಕ್ಷರನ್ನು ನೇಮಕ ಮಾಡಲಾ ಗಿದ್ದು. ಪ್ರತಿಯೊಂದು ಭೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಸಂಘಟಿಸಿ, ಮತದಾರರಿಗೆ ಇತರ ಪಕ್ಷಗಳ ಉಚಿತಗಳನ್ನು ನೀಡುವ ಆಮಿಷಗಳಿಂದ ಉಂಟಾಗುವ ಅನಾನುಕೂಲದ ಬಗ್ಗೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಉತ್ತಮ ನಾಯಕತ್ವದ ಆಡಳಿತದ ಕುರಿತು ಅರಿವು ಮೂಡಿಸಿ ಮುಂದಿನ ಚುನಾವಣೆಗಳಲ್ಲಿ ಗೆಲುವು ಸಾಧಿಸುವಂತೆ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.ವಿವಿಧ ರಾಜಕೀಯ ಪಕ್ಷಗಳಿಂದ 50ಕ್ಕೂ ಹೆಚ್ಚು ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾಗಿದ್ದಾರೆ, ಅವರಿಗೆ ಪಕ್ಷದ ಧ್ವಜ ನೀಡಿ ಅಧಿಕೃತವಾಗಿ ಸ್ವಾಗತಿಸಿದ್ದೇವೆ. ಈ ಕಾರ್ಯಕ್ರಮದ ಮೂಲಕ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆಯನ್ನು ತಳಮಟ್ಟದಲ್ಲಿ ಇನ್ನಷ್ಟು ಬಲಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.ದೇವನಹಳ್ಳಿ ತಾಲೂಕು ಮಂಡಲದ ಅಧ್ಯಕ್ಷ ಅಂಬರೀಷ್ ಗೌಡ ಮಾತನಾಡಿ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿರುವ ಪ್ರತಿ ಭೂತ್ ನಲ್ಲೂ ಒಬಿಸಿ ಮಂಡಲದ ಕಾರ್ಯಕರ್ತರನ್ನು ಸಂಘಟಿಸಬೇಕು , ಇತರ ಪಕ್ಷಗಳು ಒಬಿಸಿಗೆ ಯಾವುದೇ ಪ್ರಾಮುಖ್ಯತೆ ನೀಡುವುದಿಲ್ಲ ಆದರೆ ಭಾರತ ದೇಶದ ಪ್ರಜೆಗಳು ಪ್ರಧಾನಿ ನರೇಂದ್ರ ಮೋದಿಯವರ ಸುಭೀಕ್ಷ ಆಡಳಿತದಲ್ಲಿದ್ದೇವೆ, ಯಾರಿಗೂ ಯಾವುದಕ್ಕೂ ಭಯ ಪಡುವ ಅವಶ್ಯಕತೆ ಇಲ್ಲ , ಬಿಜೆಪಿ ಪಕ್ಷಕ್ಕೆ ದೇಶದ ಅಭಿವೃದ್ಧಿ ಮೊದಲು ರಾಜಕಾರಣವಲ್ಲ ಎಂದು ಹೇಳಿದರು.
ಹಿಂದುಳಿದ ಪದಾಧಿಕಾರಿಗಳು ಆಯ್ಕೆ: ತಾಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ್, ಸಂತೋಷ್, ಉಪಾಧ್ಯಕ್ಷರಾದ ನರಸಿಂಹ ಮೂರ್ತಿ, ಮುನೀಂದ್ರ, ಕಾರ್ಯದರ್ಶಿ ನಟರಾಜು, ರಮೇಶ್ ಬಾಬು, ನವೀನ್, ವಿನೋದ್ ಕುಮಾರ್, ಶಶಿಕುಮಾರ್, ಹೋಬಳಿ ಮಟ್ಟದಲ್ಲಿನ ಆವತಿ ಶಕ್ತಿ ಕೇಂದ್ರ ಅಧ್ಯಕ್ಷ ರಾಗಿ ಗುರುಮೂರ್ತಿ, ವಿಜಯಪುರ ಮಂಜುನಾಥ್, ದೇವನಹಳ್ಳಿ ನಗರ ಅಧ್ಯಕ್ಷ ರೂಪೇಶ್, ಕುಂದಾಣ ಶಕ್ತಿ ಕೇಂದ್ರ ಮುನಿರಾಜು, ಬಿಜ್ಜವಾರ ಶಕ್ತಿ ಕೇಂದ್ರ ಅಧ್ಯಕ್ಷ ವೆಂಕಟೇಶ್, ಚನ್ನರಾಯಪಟ್ಟಣ ಶಕ್ತಿ ಕೇಂದ್ರ ಅದ್ಯಕ್ಷ ರಮೇಶ್, ತೂಬಗೆರೆ ಮಂಜುನಾಥ್ ಸೇರಿದಂತೆ ಅನೇಕರಿಗೆ ನೇಮಕಾತಿ ಪತ್ರ ನೀಡಿ ಅಭಿನಂದಿಸಿದರು.ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಜಿ.ಚಂದ್ರಣ್ಣ, ಜಿಲ್ಲಾ ಅಧ್ಯಕ್ಷ ರಾಮಕೃಷ್ಣಪ್ಪ, ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಎನ್.ಎಲ್. ಅಂಬರೀಶ್ ಗೌಡ, ಒಬಿಸಿ ತಾಲೂಕು ಅಧ್ಯಕ್ಷ ಬಿ.ಕೆ.ನಾರಾಯಣಸ್ವಾಮಿ ಮುಖಂಡರುಗಳಾದ ಎಸ್.ಎಲ್.ಎನ್.ಅಶ್ವಥ್ ನಾರಾಯಣ್, ನಾಗವೇಣಿ, ಕೇಶವ, ದೇಸು.ನಾಗಾರಾಜು, ಪ್ರಭು, ಸೇರಿದಂತೆ ಪಕ್ಷದ ಹಲವು ಪ್ರಮುಖ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಒಬಿಸಿ ಮೋರ್ಚಾದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಣೆ



