ರಾಮನಗರ: ತಾರಕಕ್ಕೇರಿದ ಬಿಡದಿ ಟೌನ್ ಶಿಪ್ ಜಟಾಪಟಿ. ಯೋಜನೆ ಪರ ಇರುವ ರೈತರು, ಭೂಮಾಲೀಕರಿಂದಲೂ ಮುಂದುವರಿದ ಪ್ರತಿಭಟನೆ. ತಾಲ್ಲೂಕಿನ ಬಿಡದಿಯ ಭೈರಮಂಗಲ ಗ್ರಾಮದಲ್ಲಿ ಶುಕ್ರವಾರ ಯೋಜನೆ ಪರ ಇರುವ ರೈತರು ಟೌನ್ ಶಿಪ್ ಯೋಜನೆ ಬೇಕು ಎಂದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.ಬೆಂಗಳೂರು ಪಕ್ಕದಲ್ಲೇ ಇದ್ರೂ ಬಿಡದಿ ಅಭಿವೃದ್ಧಿ ಆಗಿಲ್ಲ, ಕೂಡಲೇ ರೆಡ್ ಜೋನ್ ತೆರವು ಮಾಡುವಂತೆ ಆಗ್ರಹಿಸಿದ ಪ್ರತಿಭಟನಾಕರಾರು ನಮ್ಮ ಮಕ್ಕಳ ಅಭಿವೃದ್ಧಿಗಾಗಿ ಟೌನ್ಶಿಪ್ ಬೇಕು ಎಂದು ಒತ್ತಾಯ. ಈ ಭಾಗದಲ್ಲಿ ನೀರಿನ ಕೊರತೆ ಇದ್ದು ಕೃಷಿ ಮಾಡಲು ಆಗ್ತಿಲ್ಲ. ನಮ್ಮ ಮಕ್ಕಳೂ ಇದೇ ಭೂಮಿ ನಂಬಿ ಕೂರಲು ಆಗಲ್ಲ. ಹಾಗಾಗಿ ನಮಗೆ ಅಭಿವೃದ್ಧಿ ಬೇಕು, ಈ ಯೋಜನೆಗೆ ಭೂಮಿ ಕೊಟ್ಟೇಕೊಡ್ತೀವಿ ಎಂದರು.ಕುಮಾರಸ್ವಾಮಿ ಈ ಭಾಗವನ್ನ ರೆಡ್ ಜೋನ್ ಮಾಡಿ ರೈತರಿಗೆ ಅನ್ಯಾಯ ಮಾಡಿದ್ದಾರೆ, ಈಗ ಯೋಜನೆಗೆ ಕುಮಾರಸ್ವಾಮಿ ವಿರೋಧ ಮಾಡ್ತಿದ್ದಾರೆ. ರಾಜಕೀಯ ಕಾರಣಕ್ಕೆ ವಿರೋಧ ಮಾಡೋದು ನಿಲ್ಲಿಸಲಿ. ಕೂಡಲೇ ಯೋಜನೆ ಸಹಕಾರ ನೀಡಲಿ ಎಂದು ರೈತರ ಅಗ್ರಹಿಸಿದರು.
ಬಿಡದಿ ಟೌನ್ ಶಿಪ್ ಜಟಾಪಟಿ.ಯೋಜನೆ ವಿರೋಧಿಸಿ ರೈತರ ಪ್ರತಿಭಟನೆಗೆ ವಿವಿಧ ಜಿಲ್ಲೆಯ ರೈತರ ಬೆಂಬಲ ಕೊಡಲು ಬಂದ ರೈತರ ವಿರುದ್ಧ ಯೋಜನೆ ಪರ ಇರುವ ಭೂ ಮಾಲೀಕರಿಂದ ಘೋಷಣೆ.ಹೊರಗಿನಿಂದ ಬಂದವರಿಗೆ ದಿಕ್ಕಾರ ಎಂದು ಘೋಷಣೆ ಕೂಗಿ ಅವರು ಪೇಮೆಂಟ್ ಗಿರಾಕಿಗಳು ಎಂದು ಯೋಜನೆ ಪರ ಇರುವ ಭೂ ಮಾಲೀಕರಿಂದ ಘೋಷಣೆ.ಪೊಲೀಸರ ಮಧ್ಯಪ್ರವೇಶಿಸಿ ಭೂಮಾಲೀಕರನ್ನ ಸಮಾಧಾನ ಪಡಿಸಿ ಕಳುಹಿಸಿದ ಪೊಲೀಸರು.
ತಾರಕಕ್ಕೇರಿದ ಬಿಡದಿ ಟೌನ್ ಶಿಪ್ ಜಟಾಪಟಿ ಯೋಜನೆ ಪರ-ವಿರೋಧ ರೈತರಿಂದ ಪ್ರತಿಭಟನೆ



