ದೇವನಹಳ್ಳಿ: ಬಿಜೆಪಿ ಎಸ್ಸೀ ಮೋರ್ಚ ವತಿಯಿಂದ ಜೈಭೀಮ್ ಅಖಿಲಭಾರತ ದಲಿತ ಕ್ರಿಯಾ ಸಮಿತಿ ಸಂಸ್ಥಾಪಕ
ರಾಷ್ಟ್ರಾಧ್ಯಕ್ಷ ಬಿ.ಆರ್ ಮುನಿರಾಜು ಸಾರಥ್ಯದಲ್ಲಿ ಬಂಡಿಕೊಡಿಗೆನಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ಡಾ. ಬಿ.ಆರ್, ಅಂಬೇಡ್ಕರ್ರವರ 135 ನೇ ಜಯಂತಿ ಹಾಗೂ ಬಾಬು ಜಗಜೀವನರಂ ರವರ 119 ನೇ ಜಯಂತಿಯನ್ನು ಹಬ್ಬದ ವಾತಾವರಣದಲ್ಲಿ ಆಚರಿಸಲಾಯಿತು.ಡಾ. ಬಿ.ಆರ್, ಅಂಬೇಡ್ಕರ್ರವರ ಭಾವಚಿತ್ರವನ್ನು ಪೂಜಿಸಿ ಅವರ ಕಂಚಿನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜೈಬೀಮ್ ಅಖಿಲಭಾರತ ದಲಿತ ಕ್ರಿಯಾ ಸಮಿತಿ ಸಂಸ್ಥಾಪಕ ರಾಷ್ಟ್ರಾಧ್ಯಕ್ಷ ಬಿ.ಆರ್ ಮುನಿರಾಜು ಮಾತನಾಡಿ ಬಲಾಡ್ಯರ ವಿರುದ್ದ ಮಾತನಾಡಲು ಶಕ್ತಿ ಧ್ವನಿ ಇಲ್ಲದವರಿಗೆ ತುಳಿತಕ್ಕೊಳಗಾದವರಿಗೆ ಡಾ. ಅಂಬೇಡ್ಕರ್ ಸಂವಿಧಾನ ಎಂಬ ಸಂಜೀವಿನಿ ನೀಡಿ ನಮಗೂ ಘರ್ಜಿಸಲು ಧ್ವನಿ ಕೊಟ್ಟರು ಅಂತಹ ಸಂವಿಧಾನ ಶಿಲ್ಪಿ ಶೋಷಿತರ ಬಳಿನ ಸೂರ್ಯ ಉದಯಿಸಿದ ಈ ಸುದೀನ ದಲಿತರ ಶೋಷಿತರ ಪಾಲಿಗೆ ಬಹುದೊಡ್ಡ ಹಬ್ಬ ಈ ದಿನ ನಮ್ಮ ಬದುಕಿಗೆ ಬೆಳಕು ಕಂಡ ದಿನವಾಗಿದೆ ಹಾಗಾಗಿ ಇಂದು ದೊಡ್ಡ ಹಬ್ಬದಂತೆ ಆಚರಿಸಲಾಗುತ್ತದೆ ಹಾಗೂ ಎಲ್ಲರಿಗೂ ಸಿಹಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ ರಾಷ್ಟç ಪ್ರೇಮ ಬಿಂಬಿಸುವ ಸಾಂಸ್ಕೃತಿಕ ಮನರಂಜನಾ ಕಾರ್ಯಕ್ರಮ ಅಂಬೇಡ್ಕರ್ ಜೀವನಗಾಥೆಯ ವಾದ್ಯಗೋಷ್ಟಿ ಮೂಲಕ ಮುಂದಿನ ಪೀಳಿಗೆಗೆ ಅವರ ಜೀವನ ಚರಿತ್ರೆ ಪರಿಚಯಿಸುವ ಕೆಲಸ ನಮ್ಮ ಸಂಘಟನೆ ಮಾಡುತ್ತಿದೆ ಎಂದರು.
ಮುಂದುವರಿದು ಮಾತನಾಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಂದಿಕೊAಡಿರುವ ಬಂಡಿಕೊಡಿಗೇನಹಳ್ಳಿಯಲ್ಲಿ ನಮ್ಮ ಸಂಘಟನೆಯ ಯುವಕರು ಸಮುದಾಯ ಭವನದ ಮುಂದೆ ಡಾ. ಬಾಬ ಸಹೇಬ್ ಅಂಬೇಡ್ಕರರ ಕಂಚಿನೆ ಪುತ್ತಳಿ ಇಮದು ಪ್ರತಿಷ್ಠಾಪಿಸಿ ಲೋಕಾರ್ಪಣೆ ಮಾಡಲು ಪ್ರತಿಮೆ ಕೂರಿಸಲು ಸಿಎಂಬಟ್ ಮೂಲಕ ಪೀಠ ಮಾಡಿದ್ದರು ಆದರೆ ಸವರ್ಣಿಯ ಗ್ರಾ.ಪಂ. ಸದಸ್ಯನೊಬ್ಬ ತನ್ನ ಚೇಲಾಗಳ ಮೂಲಕ ರಾತ್ರೋರಾತ್ರಿ ಆ ಪೀಠವನ್ನು ನೆಲಸಮ ಗೊಳಿಸಿ ಅಲ್ಲಿ ಮಹಾನುಭಾವರ ಪ್ರತಿಮೆ ಪ್ರತಿಷ್ಠಾಪನೆಯಾಗದಂತೆ ಅಡ್ಡಿಪಡಿಸಿದ್ದಾನೆ ನಾವು ನಮ್ಮ ಸಂಘಟನೆಯಿಮಧ ಈಗಾಗಲೇ ಈ ಕಿಡಿಗೇಡಿಗಳ ವಿರುದ್ದ ದೂರು ನೀಡಿದ್ದೆವೆ ಅಲ್ಲದೇ ಇಂದಲ್ಲಾ ನಾಳೆ ಅಲ್ಲಿಯೇ ಇದೇ ಪ್ರತಿಮೆಯ್ನು ಅನಾವರಣ ಗೊಳಿಸುವುದನ್ನು ಯಾರಿಂದಲೂ ತಡೆಯಲಾಗದು 21 ನೇ ಶತಮಾನದಲ್ಲಿಯೂ ರಾಜಧಾನಿಗೆ ಹೊಂದಿಕೊAಡಿರುವ ಗ್ರಾಮದಲ್ಲಿ ದಲಿತರನ್ನು ಕೆಲ ಪಟ್ಟಭದ್ರ ಹಿಒತಾಸಕ್ತಿಗಳು ಐರಿಮದ ಹೊರಗಿಡುವ ಪ್ರಯತ್ನ ಮಾಡುತ್ತಲೇ ಇದ್ದಾರೆ ಇಮತಹವರು ಡಾ. ಅಂಬೇಡ್ಕರ್ ನೀಡಿದ ಸಂವಿಧಾನದಡಿ ಜನಪ್ರತಿನಿಧಿಗಳಾಗಲು ಅರ್ಹರಲ್ಲ ಇದರ ವಿರುದ್ದ ನಾವು ರಾಜ್ಯಾದ್ಯಂತೆ ಸಂಘಟಿತ ಹೋರಾಟ ರೂಪಿಸಿ ಕಿಡಿಗೇಡಿಗಳಿಗೆ ಕಾನೂನು ರೀತಿ ಶಿಕ್ಷೆಯಾಗುವವರೆಗೂ ಬಿಡುವುದಿಲ್ಲ ಎಂದು ಗುಡುಗಿದರು.
ದಲಿತ ಭೂ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷೆ ಭಾಗ್ಯ ಮಾತನಾಡಿ ನಾನು ಸತ್ತರೂ ಚಿಂತೆಯಿಲ್ಲ ಮಲಗಿದ್ದ ನನ್ನ ಜನರನ್ನು ಎಚ್ಚರಿಸಿದ್ದೆನೆ ಮುಂದೆ ಮಿಂಚಿನಂತೆ ಮಿಂಚುತ್ತಾರೆ ಗುಡುಗಿನಂತೆ ಗುಡುಗುತ್ತಾರೆ ಇನ್ನು ಮುಂದೆ ಈ ದೇಶದ ರಾಜ ಅರಮನೆಯಲ್ಲಿ ಹುಟ್ಟುವುದಿಲ್ಲ ಮತದಾರನ ಮತ ಪೆಟಿಗೆಯಲ್ಲಿ ಹುಟ್ಟುತ್ತಾನೆ ಗುಡಿಸಲು ವಾಸಿಯೂ ದೇಶವನ್ನು ಆಳಬಹುದು ಎಂದಿದ್ದರು ಆದರೆ ಇಂದು ಆಳುವ ನಾಯಕರು ಅವರ ಆಶಯಗಳನ್ನು ಗಾಳಿಗೆ ತೂರುತ್ತಿದ್ದಾರೆ ಶ್ರೀಮಂತರು ಶ್ರೀಮಂತರಾಗುತ್ತಿದ್ದಾರೆ ಬಡವರು ಬಡತನದ ಬೇಗೆಯಲ್ಲಿ ಬೇಯುತ್ತಿದ್ದರೆ ಇಂತಹವರಿಗೆ ಜ್ಞಾನ ತುಂಬಿ ಜಾಗೃತ ಗೊಳಿಸುವ ಕೆಲಸ ನಮ್ಮ ಸಂಘಟನೆ ಮಾಡುತ್ತದೆ ಮಹಿಳೆಯರಿಗೆ ಸಮಾನ ಹಕ್ಕು ಸಮಾನ ಪ್ರಾತಿನಿದ್ಯ ಸಂವಿಧಾನದ ಮೂಲಕ ಅಂಬೇಡ್ಕರ್ ಕಲ್ಪಿಸಿದ್ದು ಮಹಿಳೆಯರು ಇನ್ಬೆಷ್ಟು ದಿನ ಭಯದಿಂದ ಮನೆಯ ಒಳಗೆ ಇರತ್ತೀರು ಜಾಗೃತರಾಗಿ ಹೊರಬನ್ನಿ ನಮ್ಮ ನಾರಿ ಶಕ್ತಿ ತೋರಿಸೋಣ ಅದೇ ರೀತಿ ಇಂತಹ ಜಯಂತಿ ಆಚರಣೆ ಮೂಲಕ ಮುಂದಿನ ಪೀಳಿಗೆಯನ್ನು ಜಾಗೃತರನ್ನಾಗಿರುವ ಕೆಲಸ ಮಾಡೋಣ ಎಂದರು.
ಪ್ರಜಾವಿಮೋಚನಾ ಚಳುವಳಿ ಸ್ವಾಭಿಮಾನದ ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ ಮಾತನಾಡಿ ಅಂಬೇಡ್ಕರ್ ರವರ ಪ್ರತಿಮೆ ಸಾಪನಗೆ ಅಡ್ಡಿಪಡಿಸುವ ಕಿಡಿಗೇಡಿಗಳು ಯಾರೆ ಆಗಿರಲ ಅವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಇಲ್ಲವಾದರೆ ದಲಿತರ ಧ್ವನಿ ಪ್ರವಾಹವಾಗಲಿದೆ ಅದರಲ್ಲಿ ಅವರು ಕೊಚ್ಚಿಹೋಗಲಿದ್ದಾರೆ ಗ್ರಾಮ ಸಾಮರಸ್ಯ ಹಾಳು ಮಾಡುವ ಕಿಡಿಗೇಡಿಗಳನ್ನು ಗಡೀಪಾರು ಮಾಡಬೇಕು ಎಂದರು.
ದಲಿತ ಭೂ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷೆ ಭಾಗ್ಯ, ಪ್ರಜಾವಿಮೋಚನಾ ಚಳುವಳಿ ಸ್ವಾಭಿಮಾನದ ರಾಜ್ಯಾಧ್ಯಕ್ಷ ಮುನಿಆಂಜಿನಪ್ಪ, ಜೈಬೀಮ್ ದಲಿತ ಕ್ರಿಯಾ ಸಮಿತಿಯ ರಾಷ್ಟ್ರೀಯ ಅಧ್ಯಕ್ಷ ಬಿ.ಆರ್.ಮುನಿರಾಜು, ರಾಜ್ಯ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಸರವಣ, ತುಮಕೂರು ಜಿಲ್ಲಾಧ್ಯಕ್ಷ ಮುರುಳಿ, ನಗರ ಜಿಲ್ಲಾ ಯುವ ಘಟಕದ ಪ್ರಧಾನಕಾರ್ಯದರ್ಶಿ ಚಂದನಕುಮಾರ್ ಮತ್ತಿತರರು ಇದ್ದರು.
ಜೈ ಭೀಮ್ ದಲಿತ ಕ್ರಿಯಾ ಸಮಿತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ರವರ 135ನೇ ಜಯಂತಿ ಆಚರಣೆ



