ಬೆಂಗಳೂರು: ಟೆಲಿಗ್ರಾಮ್ ಆ್ಯಪ್ಗೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ.ಜೂ.22ರವರೆಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿದೆ. ಜೂ.21ರಂದು ರಾಷ್ಟ್ರದೆಲ್ಲೆಡೆ ನೀಟ್ ಮರುಪರೀಕ್ಷೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ. ನೀಟ್ ಪ್ರಶ್ನೆ ಪತ್ರಿಕೆ ಟೆಲಿಗ್ರಾಮ್ ಆ್ಯಪ್ ಮುಖಾಂತರ ಸೋರಿಕೆಯಾಗಿತ್ತು. ರಾಷ್ಟ್ರೀಯ ಪರೀಕ್ಷಾ ಮಂಡಳಿ ಮನವಿ ಮೇರೆಗೆ ಟೆಲಿಗ್ರಾಮ್ಗೆ ನಿರ್ಬಂಧ ಹೇರಲಾಗಿದೆ. ಜತೆಜತೆಯಾಗಿ ಟೆಲಿಗ್ರಾಮ್ ಎಡಿಟ್ಗೂ ಜೂ.30ರವರೆಗೆ ನಿಷೇಧ ಹೇರಲಾಗಿದೆ ಎಂದು ತಿಳಿದುಬಂದಿದೆ.



