ಚನ್ನಪಟ್ಟಣ: 2025-26 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದು ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಸನ್ಮಾನಿಸಲಾಯಿತು.
ಪಟ್ಟಣದ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಈ ಸಮಾರಂಭದಲ್ಲಿ ಗೌಡಗೆರೆ ಚಾಮುಂಡೇಶ್ವರಿ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ. ಮಲ್ಲೇಶ್ ಗುರೂಜಿ ಅವರು ಮಾತನಾಡಿ, ರಮೇಶ್ಗೌಡರು ತಮ್ಮ ಹೋರಾಟದ ಮೂಲಕ ಹತ್ತಾರು ಸಮಸ್ಯೆಗಳಿಗೆ ಪರಿಹಾರ ಕೊಡಿಸಿದ್ದು ಮದ್ದೂರಿನ ಕೆರೆಗೆ ನೀರು ಬಿಡುವಂತೆ ಆಗ್ರಹಿಸಿ 37 ದಿನಗಳ ಕಾಲ ಕೆರೆಯಲ್ಲಿ ಕತ್ತಿನ ವರೆಗೆ ಕೂತು ಹೋರಾಟ ಮಾಡಿದ್ದರು. ಇಂದು ನಿಮ್ಮ ಸಾಧನೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಬಳಿ ಉತ್ತಮ ಭವಿಷ್ಯದ ಮೊದಲ ಬಾಗಿಲು ತೆರೆದುಕೊಳ್ಳುತ್ತದೆ. ಈ ದಾರಿಯಲ್ಲಿ ನಿಮ್ಮ ಪಯಣ ಸಾಧನೆಯ ಚಿತ್ತದಲ್ಲಿ ಹರಿದರೆ ಮಾತ್ರ ನೀವು ಏನಾದರೂ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳು ಹೆಚ್ಚು ಸಾಧನೆಗೆ ಚಲದಿಂದ ಮುನ್ನುಗ್ಗಬೇಕು ಎಂದರು
ವೇದಿಕೆ ರಾಜ್ಯಾಧ್ಯಕ್ಷ ರಮೇಶ್ಗೌಡರು ಪ್ರಾಸ್ತಾವಿಕವಾಗಿ ಮಾತನಾಡಿ, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದು ಸಾಧನೆ ಮಾಡಿದ್ದು ಅದರಲ್ಲೂ ಹೆಣ್ಣುಮಕ್ಕಳೆ ಹೆಚ್ಚು ಸಾಧನೆ ಮಾಡಿರುವುದು ಶ್ಲಾಘನೀಯವಾಗಿದೆ. ಹೆಣ್ಣು ಎಂದರೆ ಬಹಳ ಹಿಂದೆ ಕೀಳರಿಮೆಯಿಂದ ನೋಡುತ್ತಿದ್ದ ಕಾಲ ಹೋಗಿ ಇಂದು ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಉತ್ತಮ ಸ್ಥಾನಗಳು ಸಿಗುತ್ತಿದ್ದು ಎಲ್ಲಾ ಕ್ಷೇತ್ರದಲ್ಲೂ ಹೆಣ್ಣುಮಕ್ಕಳು ಸಾಧನೆ ಮಾಡುತ್ತಿದ್ದಾರೆ ಎಂಬುದು ಪೋಷಕರು ಮತ್ತು ಶಿಕ್ಷಣ ಸಂಸ್ಥೆ ಸೇರಿದಂತೆ ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ. ಇಂದು ಸನ್ಮಾನ ಸ್ವೀಕರಿಸಿರುವವರು ಮುಂದಿನ ದಿನಗಳಲ್ಲಿ ಶಿಕ್ಷಣದಲ್ಲಿ ಮತ್ತಷ್ಟು ಸಾಧನೆ ಮಾಡಿ ನಿಮ್ಮ ಪೋಷಕರ ಗೌರವ ಹೆಚ್ಚಿಸಿ ಎಂದು ಕಿವಿಮಾತು ಹೇಳಿದರು.
ಡಾ. ಟಿ.ವಿ. ಶಂಕರ್ಅವರು ಮಾತನಾಡಿ, ಯುವ ಜನತೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸದೆ ಆಕಸ್ಮಿಕವಾಗಿ ಸಾವುಗಳು ಹೆಚ್ಚಾಗಿದ್ದು, ವಿದ್ಯಾರ್ಥಿ ದಿಸೆಯಲ್ಲೇ ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳು ಮತ್ತು ವ್ಯಾಯಾಮಗಳನ್ನು ಅಳವಡಿಸಿಕೊಂಡರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.
ಇಂದಿನ ಯುವ ಜನತೆ ಹೆಚ್ಚಾಗಿ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದು ಇದಕ್ಕೆ ವಿಷಯುಕ್ತ ಆಹಾರ ಸೇವನೆಯಿಂದ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗುತ್ತಿದ್ದು, ಇದನ್ನು ಕಡಿಮೆ ಮಾಡಲು ದಿನಕ್ಕೆ ಹತ್ತದಿನೈದು ಕಿ.ಮೀ. ಸೈಕಲ್ ತುಳಿಯುವ ಅಭ್ಯಾಸ ಮಾಡಿಕೊಂಡರೆ ಇದರಿಂದ 200 ಕ್ಯಾಲರಿಸ್ (ಕೊಬ್ಬು) ಕರಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಆಗಾಗ ಸೈಕಲ್ ಸವಾರಿ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನಮ್ಮ ಆರೋಗ್ಯ ಕಾಪಾಡುವ ಜೊತೆಗೆ ಪರಿಸರವನ್ನು ಸಹ ಸಂರಕ್ಷಣೆ ಮಾಡಲು ಕೈ ಜೋಡಿಸಬಹುದು ಎಂದು ವಿದ್ಯಾರ್ಥಿಗಳಿಗೆ ಡಾ. ಟಿ.ವಿ. ಶಂಕರ್ ಕಿವಿಮಾತು ಹೇಳಿದರು
ಇದೇ ವೇಳೆ ಅವರು ಸೈಕಲ್ ಜಾಥಾ ಮೂಲಕ ಶ್ರೀಲಂಕಾ ಪ್ರವಾಸ ಮಾಡಿದ ಬಗ್ಗೆ ಅವರ ಅನುಭವ ಹಂಚಿಕೊAಡು ಅಲ್ಲಿನ ದೇವಸ್ಥಾನ, ಗ್ರಂಥಾಲಯ, ರಸ್ತೆಗಳು, ಅಲ್ಲಿನ ಜೀವನ ಶೈಲಿಯ ವಿಶೇಷತೆಗಳನ್ನು ತಿಳಿಸಿದರು.
ನಗರಸಭಾ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ವಾಸಿಲ್ ಅಲಿಖಾನ್ ಮಾತನಾಡಿ, ವಿದ್ಯಾರ್ಥಿಗಳು ಶ್ರಮದಿಂದ ಕಟ್ಟಪಟ್ಟು ಉತ್ತಮ ಫಲಿತಾಂಶ ಪಡೆದಿದ್ದು ನೀವು ಮುಂದಿನ ವಿದ್ಯಾಭ್ಯಾಸದಲ್ಲಿ ಸಹ ಇದೇ ರೀತಿ ಸಾಧನೆ ಮಾಡಿ ನಮ್ಮ ತಾಲೂಕಿಗೆ, ದೇಶಕ್ಕೆ ಕೀರ್ತಿ ತರುವ ನಿಟ್ಟಿನಲ್ಲಿ ಸಮಾಜದಲ್ಲಿ ಉತ್ತಮ ಪ್ರಜೆ
ಯಾಗಿ ರೂಪುಗೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಪಟ್ಟಣದ ಸ್ವಚ್ಚತೆ ಮತ್ತು ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪ್ಲಾ÷್ಯಸ್ಟಿಕ್ ಬಳಕೆ ನಿಷೇಧಕ್ಕಾಗಿ ನಗರಸಭೆಯಿಂದ ಪಟ್ಟಣದ ಮನೆಗಳಿಗೆ ಎರಡು ಬಟ್ಟೆ ಬ್ಯಾಗ್ಗಳನ್ನು ವಿತರಣೆ ಮಾಡಲಾಗಿದೆ. ಆದರೆ ಆ ಬಟ್ಟೆ ಬ್ಯಾಗ್ಗಳನ್ನು ಸಾರ್ವಜನಿಕರು ಬಳಕೆ ಮಾಡದೆ ಮತ್ತೆ ಪ್ಲಾ÷್ಯಸ್ಟಿಕ್ ಕವರ್ಗಳನ್ನೇ ಬಳಸುತ್ತಿದ್ದಾರೆ. ಇದರಿಂದ ಪಟ್ಟಣದ ಸ್ವಚ್ಚತೆಯ ಜೊತೆಗೆ ಜನರ ಆರೋಗ್ಯ ಸಹ ಹಾಳಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಈ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಿ ಸಾರ್ವಜನಿಕರು ಪ್ಲಾ÷್ಯಸ್ಟಿಕ್ ನಿಷೇಧಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.
ಕಕಜ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್ಗೌಡ ಮಾತನಾಡಿ, ಪೋಷಕರ ಎಷ್ಟೇ ಬಡತನ ಇದ್ದರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಅವರನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಕಾಣಬೇಕು ಎಂದು ಹೊಟ್ಟೆಬಟ್ಟೆ ಕಟ್ಟಿ 12 ವರ್ಷಗಳ ಕಾಲ ನಿಮ್ಮ ಕನಸಿಗೆ ನೀರೆರೆದು ವಿದ್ಯಾಭ್ಯಾಸ ಕೊಡಿಸುತ್ತಾರೆ. ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನೀವು ಮುಂದಿನ ವಿದ್ಯಾಭ್ಯಾಸದಲ್ಲಿ ಹೆಚ್ಚು ಶ್ರಮದಿಂದ ಶಿಕ್ಷಣ ಪಡೆದು ನಿಮ್ಮ ಪೋಷಕರಿಗೆ ಹಾಗೂ ನಿಮಗೆ ವಿದ್ಯಾ ನೀಡಿದ ಶಿಕ್ಷಣ ಸಂಸ್ಥೆಗಳಿಗೆ ಕೀರ್ತಿ ತರಲು ಶ್ರಮಿಸಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಮುದ್ದುಕೃಷ್ಣ ಡಾ. ಮಲವೇಗೌಡ, ಸಂಘಟನಾ ಕಾರ್ಯದರ್ಶಿ ಜಗದಾಪುರ ಕೃಷ್ಣೇಗೌಡ, ಕ.ಕ.ಜ.ವೇದಿಕೆ ಸುಮ ಮಹಿಳಾ ಘಟಕ, ಜೆಡಿಎಸ್ ಮುಖಂಡ ಜೆಸಿಬಿ ಲೋಕೇಶ್, ಜ್ಞಾನಸರೋವರ ಕಾಲೇಜಿನ ಪ್ರಾಂಶುಪಾಲರಾದ ಹೇಮಲತಾ, ಹೊಲಸಾಳಯ್ಯ, ಕಲಾವಿದರಾದ ಚೌ.ಪು.ಸ್ವಾಮಿ, ನೀಲಕಂಠನಹಳ್ಳಿ ಭರತ್, ಮಂಗಳವಾರಪೇಟೆ ಕೃಷ್ಣಪ್ರಸಾದ್, ನೀಲಸಂದ್ರ ಸಿದ್ದರಾಮು, ಬೇವೂರು ಸಿದ್ದರಾಮೇಶ್ವರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಆರ್.ಪಿ. ಮಂಜುನಾಥ್, ವಿನೋದ್, ಶಶಿಕಲಾ, ಯೋಗ, ಚಿಕ್ಕೇನಹಳ್ಳಿ ಸಿದ್ದಪ್ಪಾಜಿ, ಮೆಣಸಿಗನಹಳ್ಳಿ ರಾಮಕೃಷ್ಣಪ್ಪ, ಹುಚ್ಚಪ್ಪ, ಕಲಾವಿದ ಗೋವಿಂದು, ಬ್ಯಾನರ್ ವೆಂಕಿ, ಸಬ್ ಇನ್ಸಸಪೆಕ್ಟರ್ ಶಿವಲಿಂಗಯ್ಯ, ತಾಲ್ಲೂಕು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು.
2025-26 ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದು ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆಯಿಂದ ಸನ್ಮಾನ



