ಬೆಂಗಳೂರು: ರಾಜ್ಯ ವಿಧಾನಪರಿಷತ್ಗೆ ವಿಧಾನಸಭೆಯಿಂದ ನಡೆಯುತ್ತಿರುವ ಚುನಾವಣೆ ಸಂಬಂಧ ಇಂದು ಮತದಾನ ನಡೆದಿದೆ.
7 ಸ್ಥಾನಗಳಿಗೆ ನಡೆಯುತ್ತಿರುವ ಈ ಚುನಾವಣೆಯಲ್ಲಿ ಶಾಸಕರು ಉತ್ಸಾಹದಿಂದ ಬಂದು ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬೆಳಿಗ್ಗೆ 9 ಗಂಟೆಯಿAದ ಆರಂಭವಾಗಿರುವ ಮತದಾನ ಸಂಜೆ 4 ಗಂಟೆಯವರೆಗೂ ನಡೆಯಲಿದೆ. ಆನಂತರ ಮತ ಎಣಿಕೆ ನಡೆದು 6ಗಂಟೆ ವೇಳೆಗೆ ಫಲಿತಾಂಶ ಹೊರಬೀಳಲಿದೆ.
ವಿಧಾನಸೌಧದ ಮೊದಲನೇ ಮಹಡಿಯ ಕೊಠಡಿ ಸಂಖ್ಯೆ 106ರಲ್ಲಿ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ವಿಧಾನಸೌಧದ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇಂದು ಬೆಳಿಗ್ಗೆ 8.30ರ ಸುಮಾರಿಗೆ ವಿಧಾನಸೌಧಕ್ಕೆ ಆಗಮಿಸಿದ ಬಿಜೆಪಿ ಶಾಸಕರು ತಮ್ಮ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಒಟ್ಟಿಗೆ ಸೇರಿ ಉಪಹಾರ ಸೇವನೆ ನಂತರ ಒಬ್ಬೊಬ್ಬರಾಗಿ ತೆರಳಿ ಮತಚಲಾಯಿಸಿದ್ದಾರೆ. 10.30ರ ವೇಳೆಗೆ 62 ಶಾಸಕರ ಪೈಕಿ ಬಿಜೆಪಿಯ 60 ಶಾಸಕರು ತಮ್ಮ ಮತ ಚಲಾವಣೆ ಮಾಡಿದ್ದಾರೆ. ಬಾಲ ಚಂದ್ರ ಜಾರಕಿಹೊಳಿ ಹಾಗೂ ಎಚ್.ಕೆ.ಸುರೇಶ್ ಅವರ ಮತ ಚಲಾವಣೆ ಮಾತ್ರ ಬಾಕಿಉಳಿದಿತ್ತು. 10.30ರ ನಂತರದ ವೇಳೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಪ್ರಿಯಾಂಕ್ಖರ್ಗೆ ಅವರು ಒಂದೇ ಕಾರಿನಲ್ಲಿ ವಿಧಾನಸೌಧಕ್ಕೆ ಬಂದಿಳಿದರು.ಮತ ಚಲಾವಣೆ ಮಾಡಿದ ಬಿಜೆಪಿ ಉಚ್ಛಾಟಿತ ಶಾಸಕರಾದ ಎಸ್.ಟಿ. ಸೋಮಶೇಖರ್ ಹಾಗೂ ಶಿವರಾಮ್ ಹೆಬ್ಬಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ತಾವು ತಮ್ಮ ಆತ್ಮಸಾಕ್ಷಿಗೆಅನುಗುಣವಾಗಿ ಮತ ಚಲಾಯಿಸಿದ್ದೇವೆ. ನಮ್ಮನ್ನು ನಿನ್ನೆ ರಾತ್ರಿಯವರೆಗೂ ಜೆಡಿಎಸ್ನವರಾಗಲಿ ಬಿಜೆಪಿಯವರಾಗಲೀ ಸೌಜನ್ಯಕ್ಕೂ ಮಾತನಾಡಿಸಿಲ್ಲ. ನಿನ್ನೆ ಸಂಜೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೂರವಾಣಿ ಕರೆ ಮಾಡಿ ರೆಸಾರ್ಟ್ಗೆ ಕರೆಸಿ ಮಾತನಾಡಿದ್ದಾರೆ. ಆ ಸಂದರ್ಭದಲ್ಲಿ ನೀವು ನಮ್ಮ ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಗೆ ಸಹಕರಿಸಿದರೆ ನಾವು ನಿಮಗೆ ಸಹಕರಿಸುತ್ತೆವೆ ಎಂದು ತಿಳಿಸಿದರು. ಅದರಂತೆ ನಮ್ಮ ಆತ್ಮಸಾಕ್ಷಿಯಂತೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ಚಲಾಯಿಸಿರುವುದಾಗಿ ಹೇಳಿದರು. ಈ ಮಧ್ಯೆ ಎನ್ಡಿಎ ಅಭ್ಯರ್ಥೀಯಾಗಿ ಕಣಕ್ಕಿಳಿದಿರುವ ಗೋವಿಂದರಾಜು ಮಾಧ್ಯಮದವರೊಂದಿಗೆ ಮಾತನಾಡಿ, ಈ ಚುನಾವಣೆಯನ್ನೇನು ನಾವು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ ಎಂದರಲ್ಲದೆ ಜಿ.ಟಿ.ದೇವೇಗೌಡ ಅವರು ತಮಗೆ ಮತ ಚಲಾಯಿಸಿರುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ನವರು ತಾವೇಲ್ಲಾ ವಾಸ್ತವ್ಯ ಹೂಡಿದ್ದ ಬಿಡದಿ ಬಳಿಯ ರೆಸಾರ್ಟ್ನಿಂದ ಐದು ಬಸ್ಗಳಲ್ಲಿ ಮತದಾನಕ್ಕೆ ವಿಧಾನಸೌಧದತ್ತ ಪ್ರಯಾಣ ಬೆಳೆಸಿ ಮತದಾನದಲ್ಲಿ ಪಾಲ್ಗೊಂಡರು.
ಅನಾರೋಗ್ಯದಿಂದ ಚೇತರಸಿಕೊಳ್ಳುತ್ತಿರುವ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಈಗ ಆರೋಗ್ಯವಾಗಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಬಂದು ಮತದಾನದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.
ಈ ಎಲ್ಲರ ಮಧ್ಯೆ ಬಿಜೆಪಿಯ ಉಚ್ಛಾಟಿತ ಶಾಸಕ ಬಸವನಗೌಡ ಯತ್ನಾಳ್ ಅವರು ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸುವುದಾಗಿ ತಿಳಿಸಿದ್ದಾರೆ. ಅವರು ಈ ಸಂಬAಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಅವರಿಗೆ ಪತ್ರ ಬರೆದು ತಮ್ಮ ಹೋರಾಟ ಪಕ್ಷದ ವಿರುದ್ಧವಲ್ಲ ಕುಟುಂಬ ರಾಜಕಾರಣವಿರುದ್ಧ ಎಂದೇ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಲಾಗಿದೆ.
ಎನ್ಡಿಎ ಪಾಲುದಾರ ಪಕ್ಷವಾದ ಬಿಜೆಪಿ ತನ್ನ ಮತ ಗಳಲ್ಲಿ 2 ಮತಗಳನ್ನು ತನ್ನ ಮಿತ್ರಪಕ್ಷ ಜೆಡಿಎಸ್ ಅಭ್ಯರ್ಥಿಗೆ ಬಿಟ್ಟುಕೊಟ್ಟು ಉಳಿದಂತೆ ಎರಡನೇ ಪ್ರಾಶಸ್ತ ಮತಗಳನ್ನು
ಗೆಲುವಿನ ಹುರುಪು ಮೇಲ್ಮನೆ ಚುನಾವಣೆ: ಉತ್ಸಾಹದಿಂದ ಶಾಸಕರ ಮತಚಲಾವಣೆ



