ಕೆ.ಆರ್.ನಗರ: ಪಟ್ಟಣದ ಗರುಡಗಂಭಕ್ಕೆ 92 ವರ್ಷಗಳು ತುಂಬಿದ ಅಂಗವಾಗಿ ಗರುಡಗಂಭ ಸಂವೇದನ ಸಂಘದ ವತಿಯಿಂದ ಮಂಗಳವಾರ ವಾರ್ಷಿಕೋತ್ಸವನ್ನು ರಾಷ್ಟ್ರೀಯ ಅಹಿಂದ ಸಂಘಟನೆ ರಾಜ್ಯ ಉಪಾಧ್ಯಕ್ಷ ಗರುಡಗಂಭ ಮಂಜುನಾಥ್ ನೇತೃತ್ವದಲ್ಲಿ ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.ಈ ವೇಳೆ ಕಾರ್ಯಕ್ರಮವನ್ನು ಕುರಿತು ಮಾತನಾಡಿದ ತಾಲ್ಲೂಕು ರೈತ ಯುವ ವೇದಿಕೆ ಅಧ್ಯಕ್ಷ ಅರ್ಜುನಹಳ್ಳಿ ರಾಮ್ಪ್ರಸಾದ್ ಮಾತನಾಡಿ, ಇಡೀ ಜಗತ್ತಿಗೆ ಮಾದರಿ ಆಡಳಿತ ನೀಡಿದ, ಸುಖಿ ರಾಜ್ಯದ ಕಲ್ಪನೆಯ ಮೂಲಕ ಅಭಿವೃದ್ಧಿ ಮಾಡಿದ ಮೈಸೂರು ಮಹರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರಿಂದ ಸ್ಥಾಪನೆಯಾದ ಗರುಡಗಂಭಕ್ಕೆ 92 ವರ್ಷಗಳು ತುಂಬಿರುವುದು ಎಲ್ಲರಿಗು ಸಂತಸ ದಿನವಾಗಿದೆ ಎಂದರು.
ಕರ್ನಾಟಕದಲ್ಲಿಯೇ ವಿದೇಶಿ ಇಂಜಿನಿಯರ್ ರವರ ಮೂಲಕ ನಗರ ನಿರ್ಮಾಣದ ನಕ್ಷೆ ತಯಾರಿಸಿ ವ್ಯವಸ್ಥಿತವಾಗಿ ನಿರ್ಮಾಣವಾಗಿರುವ ಪಟ್ಟಣ ನಮ್ಮ ಕೃಷ್ಣರಾಜನಗರವಾಗಿದೆ. ಅದರ ನಿರ್ಮಾಣಕ್ಕೆ ಶಂಕು ಸ್ಥಾಪನೆಯಾಗಿ ಪುರಪ್ರವೇಶ ದ್ವಾರದಲ್ಲಿ ನಿರ್ಮಿಸಲಾದ ಕಂಬವೇ ಗರಡುಗಂಭವಾಗಿದೆ. ನಂತರ ಇದೊಂದು ವೃತ್ತವಾಗಿ ಇಂದಿಗು ಕೂಡ ಪ್ರಯಾಣಿಕರ ಮನ ಸೂರೆಗೊಳ್ಳುತ್ತಿದೆ ಎಂದರು.ರಾಜ್ಯ ಸರ್ಕಾರ ತುಂಡು ಭೂಮಿ ಕಾಯ್ದೆ ತಂದAತಹ ಸಂದರ್ಭದಲ್ಲಿ ರೈತ ಚಳುವಳಿಯಲ್ಲಿ ಭಾಗವಹಿಸಿದ್ದ ಕೆ.ಎಲ್.ಸ್ವಾಮಿ ರವರು ಗರುಡಗಂಭವನ್ನು ಏರಿ ಪ್ರತಿಭಟಿಸುವ ಮೂಲಕ ಜೈಲು ಸೇರಿದರು. ಅಂದಿನಿAದ ಅವರು ಗರುಡಗಂಭಸ್ವಾಮಿಯಾಗಿ ಹೆಸರು ವಾಸಿಯಾಗಿದ್ದು ಅವರೇ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಜಯಂತಿ ಮತ್ತು ಗರುಡ ಗಂಭದ ವಾರ್ಷಿಕೋತ್ವವನ್ನು ಸಾಮಾಜಿಕ ಕಾರ್ಯಕ್ರಮಗಳು, ಕಾಯಕ ಪ್ರಶಸ್ತಿ ನೀಡುವ ಮೂಲಕ ಅರ್ಥ ಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದು ಅವರ ವಯೋವೃದ್ಧರಾಗಿರುವ ಕಾರಣ ಅವರ ಪುತ್ರ ಗರುಡಗಂಭ ಮಂಜುನಾಥ್ ಇಂತಹ ಕಾರ್ಯಕ್ರಮಗಳನ್ನು ಮುಂದುವರೆಸಿಕೊAಡಿ ಹೋಗುತ್ತಿರುವುದು ಉತ್ತಮ ಸೇವಾ ಕಾರ್ಯ ವಾಗಿದೆ ಎಂದರು.ದಕ್ಷ ಆಡಳಿತಗಾರರು, ಅಭಿವೃದ್ಧಿಯ ಹರಿಕಾರರು, ಸ್ವಾತಂತ್ರ್ಯ ಪೂರ್ವದಲ್ಲಿಯೇ ಸಾಮಾಜಿಕ ನ್ಯಾಯ, ನೂರಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಜಾರಿಗೆ ತಂದು ಕೃಷ್ಣರಾಜನಗರದ ನಿರ್ಮಾತೃ ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತಿ ಮತ್ತು ಗರುಡಗಂಭದ ವಾರ್ಷಿಕೋತ್ಸವವನ್ನು ಪುರಸಭೆಯ ವತಿಯಿಂದ ಆಚರಿಸಬೇಕಾಗಿತ್ತು ಆದರೇ ಅವರು ನಿರ್ಲಕ್ಷ ವಹಿಸಿಕೊಂಡು ಬರುತ್ತಿರುವುದು ಎಷ್ಟು ಸರಿ ಎಂದು ಆಕ್ರೋಶ ವ್ಯಕ್ತ ಪಡಿಸಿದರು.ಮುಂದಿನ ದಿನಗಳಲ್ಲಾದರು ಇಂತಹ ಆಚರಣೆಗಳನ್ನು ಸ್ಥಳೀಯ ಸಂಸ್ಥೆಯಿಂದ ಆಚರಿಸುವ ಜತೆಗೆ ಜನಪ್ರತಿನಿಧಿಗಳು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಒತ್ತಾಯಿಸಿದ ರಾಮ್ ಪ್ರಸಾದ್ ಮೈಸೂರು ಮಹಾರಾಜರ ಅಭಿವೃದ್ಧಿ ಮತ್ತು ಆಡಳಿತದ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕೆಂದರು.ಕಾರ್ಯಕ್ರಮಕ್ಕೂ ಮುನ್ನ ಗರಡುಗಂಭ ವೃತ್ತದ ಪಕ್ಕದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಆ ನಂತರ ಗರುಡಗಂಭಕ್ಕೆ ಪುಷ್ಪಾರ್ಚನೆ ನೇರವೇರಿಸಿ. ಸಿಹಿ ವಿತರಿಸಿ ಸಂಭ್ರಮಿಸಿದರು.
ಈ ವೇಳೆ ರಾಷ್ಟ್ರೀಯ ಅಹಿಂದ ಸಂಘಟನೆ ರಾಜ್ಯ ಉಪಾಧ್ಯಕ್ಷ ಗರುಡಗಂಭ ಮಂಜುನಾಥ್, ತಾಲೂಕು ಸಂಘದ ಕಾನೂನು ಸಲಹೆಗಾರ ಎಸ್.ಶಿವರಾಜ್, ಹಿಂದುಳಿದ ವರ್ಗದ ಘಟಕದ ತಾಲೂಕು ಅಧ್ಯಕ್ಷ ಕೋಳಿಶಶಿ, ಮುಖಂಡರಾದ ಸ್ಪೀಟ್ ಮಂಜುನಾಥ್, ಯೋಗೇಶ್, ದಿವಾಕರ್, ಶಿವಕುಮಾರ್, ಕೆ.ಎನ್.ಕುಮಾರ್, ಪುಟ್ಟಸ್ವಾಮಿ, ಪಿ.ಮಹದೇವ್, ಚೌಕಹಳ್ಳಿಮೋಹನ, ನಾಗಣಚಾರಿ, ರಾಜು, ಅರುಣ್, ಸೇರಿದಂತೆ ಇನ್ನಿತರರು ಹಾಜರಿದ್ದರು.
ನಾಲ್ವಡಿ ಕೃಷ್ಣರಾಜ ಒಡೆಯರ್ರಿಂದ ಸ್ಥಾಪನೆಗೊಂಡ ಗರುಡಗಂಭಕ್ಕೆ 92 ವರ್ಷ



