ಮುಳಬಾಗಿಲು: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು (ಟಿಎಪಿಸಿಎಂಎಸ್) ಕೇವಲ ಗೊಬ್ಬರ ಮಾರಾಟಕ್ಕಷ್ಟೇ ಸೀಮಿತವಾಗದೆ, ರೈತರ ಒಟ್ಟಾರೆ ಕೃಷಿ ಬದುಕಿಗೆ ಆಸರೆಯಾಗುವ ನಿಟ್ಟಿನಲ್ಲಿ ಸಮಗ್ರವಾಗಿ ನವೀಕರಣಗೊಳ್ಳಲಿದೆ ಎಂದು ಶಾಸಕ ಹಾಗೂ ಟಿಎಪಿಸಿಎಂಎಸ್ ಅಧ್ಯಕ್ಷ ಕೊತ್ತೂರು ಜಿ. ಮಂಜುನಾಥ್ ಭರವಸೆ ನೀಡಿದರು. ಮುಳಬಾಗಿಲಿನ ಟಿಎಪಿಸಿಎಂಎಸ್ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಆಡಳಿತ ಮಂಡಳಿ
ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸಂಸ್ಥೆಯನ್ನು ನಷ್ಟದಿಂದ ಲಾಭದತ್ತ ಮುನ್ನಡೆಸಲು ಹಾಗೂ ರೈತಸ್ನೇಹಿಯಾಗಿಸಲು ಕೈಗೊಂಡಿರುವ ಮಹತ್ವದ ತೀರ್ಮಾನಗಳನ್ನು ಹಂಚಿಕೊಂಡರು.ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ಸಂಸ್ಥೆಯ ಸ್ವಂತ ಸುಸಜ್ಜಿತ ಕಟ್ಟಡದ ನಿರ್ಮಾಣ
ಕಾರ್ಯಕ್ಕೆ ಈಗ ಕಾಲ ಕೂಡಿಬಂದಿದೆ. ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಮತ್ತು ಪದಾಧಿಕಾರಿಗಳು ಒಮ್ಮತದಿಂದ ಈ ಯೋಜನೆಗೆ ಒಪ್ಪಿಗೆ ಸೂಚಿಸಿದ್ದಾರೆ. ಪ್ರಸ್ತುತ ಆಷಾಢ ಮಾಸ ನಡೆಯುತ್ತಿರುವುದರಿಂದ, ಇದು ಮುಗಿದ ತಕ್ಷಣ (ಇನ್ನು ಒಂದು ತಿಂಗಳ ಒಳಗೆ) ಅಧಿಕೃತವಾಗಿ ಗುದ್ದಲಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಟಿಎಪಿಸಿಎಂಎಸ್ ದೊಡ್ಡ ಹೆಜ್ಜೆ ಇಟ್ಟಿದೆ. ಕೃಷಿ ಇಲಾಖೆಯಿಂದ ಈಗಾಗಲೇ ಅಗತ್ಯವಿರುವ ಎಲ್ಲಾ ಲೈಸೆನ್ಸ÷್ಗಳನ್ನು ಪಡೆದುಕೊಳ್ಳಲಾಗಿದೆ ಇನ್ಮುಂದೆ ತಾಲೂಕಿನ ರೈತರು ಬೆಳೆಯುವ ಭತ್ತ, ರಾಗಿ, ತೊಗರಿ ಹಾಗೂ ಜೋಳವನ್ನು ಸಂಸ್ಥೆಯ ವತಿಯಿಂದಲೇ ನೇರವಾಗಿ ಖರೀದಿಸಿ, ಮಾರಾಟ ಮಾಡಲಾಗುತ್ತದೆ. ಇದರಿಂದ ರೈತರಿಗೆ ಮಧ್ಯವರ್ತಿಗಳ ಕಾಟ ತಪ್ಪಲಿದ್ದು, ಯೋಗ್ಯ ಬೆಲೆ ಸಿಗಲಿದೆ ಎಂದರು. ರೈತರಿಗೆ ದೈನಂದಿನ ಕೃಷಿ ಚಟುವಟಿಕೆಗೆ ಬೇಕಾಗುವ ತೈಲ, ತಂಗುಸು ಸೇರಿದಂತೆ ಇನ್ನಿತರ ಸಾಮಗ್ರಿಗಳನ್ನು ಇಂದಿನಿAದಲೇ ಸಂಸ್ಥೆಯು ಸಗಟು ದರದಲ್ಲಿ ಖರೀದಿಸಿ ತಂದು ರೈತರಿಗೆ ವಿತರಿಸಲು ಆರಂಭಿಸಿದೆ ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಬ್ಯಾಂಕಿAಗ್ ವಲಯವನ್ನು ವಿಸ್ತರಿಸಲಾಗುತ್ತಿದೆ. ತಾಲೂಕಿನ ಸಣ್ಣ ರೈತರು, ಕುಶಲಕರ್ಮಿಗಳು ಹಾಗೂ ಪ್ರಮುಖವಾಗಿ ಬೀದಿಬದಿ ವ್ಯಾಪಾರಿಗಳ ವ್ಯಾಪಾರಕ್ಕೆ ಉತ್ತೇಜನ ನೀಡಲು ಟಿಎಪಿಸಿಎಂಎಸ್ ವತಿಯಿಂದಲೇ ಕಿರು ಸಾಲ ಸೌಲಭ್ಯವನ್ನು ನೀಡಲಾಗುವುದು. ಇದಕ್ಕಾಗಿ ದಿನನಿರತ ಉಳಿತಾಯ (ಪಿಗ್ಮಿ ಕಲೆಕ್ಷನ್) ಪ್ರಕ್ರಿಯೆಯನ್ನು ಇನ್ನಷ್ಟು ಚುರುಕುಗೊಳಿಸಿ, ಬ್ಯಾಂಕಿAಗ್ ವಹಿವಾಟನ್ನು ಗಣನೀಯವಾಗಿ ಹೆಚ್ಚಿಸಲಾಗುವುದು ಎಂದು ಶಾಸಕರು ವಿವರಿಸಿದರು.ಇತ್ತೀಚೆಗೆ ತಾಲೂಕಿನಲ್ಲಿ ತಲೆದೂರಿರುವ ರಸಗೊಬ್ಬರ ಅಭಾವದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಎದ್ದಿರುವ ಟೀಕೆಗಳಿಗೆ ಉತ್ತರಿಸಿದ ಅಧ್ಯಕ್ಷ ಕೊತ್ತೂರುಜಿ ಮಂಜುನಾಥ್ ಅವರು. ಗೊಬ್ಬರ ಸಿಗುತ್ತಿಲ್ಲ ಎನ್ನುವುದಕ್ಕೆ ಇಲ್ಲಿನ ರಾಜ್ಯ ಸರ್ಕಾರವಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಹೊಣೆಯಲ್ಲ. ಇರಾನ್, ಅಮೆರಿಕ (ಯುಎಸ್) ಮತ್ತು ಇಸ್ರೇಲ್ ದೇಶಗಳ ನಡುವೆ ನಡೆಯುತ್ತಿರುವ ಭೀಕರ ಯುದ್ಧದಿಂದಾಗಿ ಅಂತರರಾಷ್ಟಿçÃಯ ಮಟ್ಟದಲ್ಲಿ ಕಚ್ಚಾ ವಸ್ತುಗಳ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಹೀಗಾಗಿ ಗೊಬ್ಬರ ಉತ್ಪಾದನೆಯಲ್ಲಿ ಜಾಗತಿಕವಾಗಿ ಕುಂಠಿತವಾಗಿದೆ. ಲಭ್ಯವಿರುವ ಮಾಹಿತಿ ಪ್ರಕಾರ, ಇದೇ ತಿಂಗಳು 19ನೇ ತಾರೀಖಿನ ವೇಳೆಗೆ ಯುದ್ಧದ ಬಿಕ್ಕಟ್ಟು ಒಂದು ಹಂತಕ್ಕೆ ಮುಕ್ತಾಯವಾಗುವ ಸಾಧ್ಯತೆಯಿದ್ದು, ಅದಾದ ಬಳಿಕ ಗೊಬ್ಬರದ ಸಮಸ್ಯೆ ಸಂಪೂರ್ಣ ನಿವಾರಣೆಯಾಗಲಿದೆ. ರೈತರು ಆತಂಕಪಡುವ ಅಗತ್ಯವಿಲ್ಲ ಭರವಸೆ ನೀಡಿದರು.ಗೊಬ್ಬರ ವಿತರಣೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅರ್ಹ ಶೇರುದಾರ ರೈತರಿಗೆ ಮಾತ್ರವೇ ಗೊಬ್ಬರ ಸಿಗುವಂತೆ ಮಾಡಲು, ಆಧಾರ್ ಕಾರ್ಡ್ ಮತ್ತು ಹೆಬ್ಬೆರಳ ಗುರುತು ಕಡ್ಡಾಯಗೊಳಿಸಲಾಗಿದೆ. ನಂಗಲಿ ಭಾಗದಲ್ಲಿ ಇತ್ತೀಚೆಗೆ ಅಧಿಕಾರಿಗಳು ಜಪ್ತಿ ಮಾಡಿದ್ದ ಗೊಬ್ಬರದ ದಾಸ್ತಾನನ್ನು ಪ್ರಸ್ತುತ ಸಂಸ್ಥೆಯ ಗೋದಾಮಿನಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಇದರ ಸ್ಯಾಂಪಲ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಮೇಲಾಧಿಕಾರಿಗಳ ಆದೇಶದಂತೆ ಅದನ್ನು ರೈತರಿಗೆ ವಿತರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.ಸಭೆಯಲ್ಲಿ ಟಿಎಪಿಸಿಎಂಎಸ್ ಉಪಾಧ್ಯಕ್ಷರಾದ, ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿ
ಕಾರಿಗಳು ಉಪಸ್ಥಿತರಿದ್ದು, ಶಾಸಕರ ನಿರ್ಧಾರಗಳಿಗೆ ಸಂಪೂರ್ಣ ಬೆಂಬಲ ಸೂಚಿಸಿದರು.ಸಭೆಯಲ್ಲಿ ಉಪಾಧ್ಯಕ್ಷೆ ಸುಧಾ ಡನ್ ಸನ್ಯಾಸಹಳ್ಳಿ, ನಿರ್ದೇಶಕರುಗಳಾದ ವಿ ರಾಜಪ್ಪ, ಆರ್.ಅಮರನಾರಾಯಣಪ್ಪ, ಎಂಸುಬ್ರಮಣಿ, ಪಿಎಸ್ ರಮೇಶ್ ಬಾಬು, ಎಂಸಿ ಸರ್ವಜ್ಞಗೌಡ, ಆರ್ ಶಿವಶಂಕರ್, ಮಲ್ಲಕಾರ್ಜುನರೆಡ್ಡಿ, ಆರ್.ಆರ್ ರಾಜೇಂದ್ರಗೌಡ, ಕವಿತ ಎ. ನಾರಾಯಣಸ್ವಾಮಿ ಶ್ರೀನಿವಾಸ್, ಚೆನ್ನರಾಯಪ್ಪ,ಬಿ.ಆರ್ ಸಿವಶಂಕರ್, ಎನ್ ನವೀನ್ಎ.ಆರ್.ಸಿ ಎಸ್ ಉಪಸ್ಥಿತರಿದ್ದರು.
`ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘವು ಗೊಬ್ಬರ ಮಾರಾಟಕ್ಕಷ್ಟೇ ಸೀಮಿತವಾಗದಿರಲಿ’



