ವಿಶ್ವದ ಅತ್ಯಂತ ಶ್ರೀಮಂತ ಕ್ರೀಡೆಗಳಲ್ಲಿ ಒಂದಾದ ಫಿಫಾ ವಿಶ್ವಕಪ್ (Fifa World Cup 2026) ಕ್ರೀಡಾಕೂಟ, ಮೂರು ದೇಶಗಳ ಸಹಭಾಗಿತ್ವದಲ್ಲಿ ಆರಂಭವಾಗಿದೆ. ಅಮೆರಿಕ, ಮೆಕ್ಸಿಕೋ ಮತ್ತು ಕೆನಡಾದಲ್ಲಿ ಈ ಪ್ರತಿಷ್ಠಿತ ಟೂರ್ನಿ ಸದ್ಯ ಚಾಲ್ತಿಯಲ್ಲಿದೆ. 48 ದೇಶಗಳು ಭಾಗವಹಿಸಿರುವ ಈ ಟೂರ್ನಿಯಲ್ಲಿ ತಂಡಗಳನ್ನು, 12 ಗ್ರೂಪ್ಗಳನ್ನಾಗಿ ಮಾಡಲಾಗಿದೆ. ಈ ನಡುವೆ, ಬಾಬಾ ವಂಗಾ ಈ ಬಗ್ಗೆ ಭವಿಷ್ಯ ನುಡಿದಿದ್ದಾರಾ ಎನ್ನುವುದು ಚರ್ಚೆಯ ವಿಷಯವಾಗಿದೆ.
ಜೂನ್ ಹನ್ನೊಂದರಿಂದ ಆರಂಭವಾಗಿರುವ ಈ ಕ್ರೀಡಾಕೂಟದ ಫೈನಲ್ ಪಂದ್ಯ, ಜುಲೈ ಹತ್ತೊಂಬತ್ತರAದು ನಡೆಯಲಿದೆ. ತಂಡಗಳು ಇದುವರೆಗಿನ ಸಾಧನೆ, ಪ್ರಮುಖ ಆಟಗಾರರ ಫಿಟ್ನೆಸ್, ಮಿಡ್ ಫೀಲ್ಡ್ನಲ್ಲಿ ಪ್ರಾಬಲ್ಯ, ಇದನ್ನೆಲ್ಲಾ ಆಧರಿಸಿ, 48 ತಂಡಗಳ ಪೈಕಿ, 5 ತಂಡವನ್ನು ಕಪ್ ಗೆಲ್ಲುವ ಫೆವರೇಟ್ ಎಂದು ಹೇಳಲಾಗುತ್ತಿದೆ. ಬಲ್ಗೇರಿಯಾದ ಅಂಧ ಮಹಿಳೆ ಬಾಬಾ ವಂಗಾ ಅವರ ಯಾವ ಭವಿಷ್ಯವು, ಫಿಫಾ ವಿಶ್ವಕಪ್ಗೆ ಸಂಬAಧಿಸಿದAತೆ, ಉಲ್ಲೇಖವಾಗಿಲ್ಲ. ಆದರೂ, ಅವರ ಹೆಸರು ಮುನ್ನಲೆಗೆ ಬರುತ್ತಿದೆ. ಕಪ್ ಗೆಲ್ಲಬಹುದಾದ ಟಾಪ್ ಐದು ತಂಡಗಳು ಯಾವುದು?
ಜಗತ್ತಿನ ಪ್ರಮುಖ ವಿದ್ಯಮಾನಗಳು ನಡೆದಾಗಲೆಲ್ಲಾ, ಬಾಬಾ ವಂಗಾ ಹಿಂದೆ ಭವಿಷ್ಯ ನುಡಿದಿದ್ದರು ಎಂದು ಅವರ ಭವಿಷ್ಯವಾಣಿಗೆ ಸಿಕ್ಕಾಪಟ್ಟೆ ಮೈಲೇಜ್ ಸಿಗುತ್ತದೆ. ಅಸಲಿಗೆ, ಆದರೆ ಭವಿಷ್ಯ ನುಡಿದಿದ್ದರು ಎನ್ನುವುದಕ್ಕೆ ಯಾವುದೇ ದಾಖಲೆಗಳಾಗಲಿ, ಪುರಾವೆಯಾಗಲಿ ಲಭ್ಯವಿಲ್ಲ. ಜನರ ಗಮನ ಸೆಳೆಯಲು ಮತ್ತು ಭವಿಷ್ಯವಾಣಿಯ ವಿಚಾರಕ್ಕೆ ಸಂಬAಧಿಸಿದAತೆ, ಒಂದಷ್ಟು ಜನರಿಗೆ ಬಹಳ ಆಸಕ್ತಿ ಇರುವ ಹಿನ್ನಲೆಯಲ್ಲಿ, ಇವರು ನುಡಿದಿದ್ದಾರೆ ಎನ್ನುವ ಭವಿಷ್ಯ ಆಗಿಂದಾಗ್ಯೆ ಮುನ್ನಲೆಗೆ ಬರುತ್ತಿದೆ. ಅದು, ಇತ್ತೀಚಿನ ಪಶ್ಚಿಮ ಏಷ್ಯಾ ಬಿಕ್ಕಟ್ಟು ಇರಬಹುದು, ಅಯತೊಲ್ಲಾ ಆಲಿ ಖಮೇನಿ ಇರಬಹುದು, ಇವರ ಭವಿಷ್ಯವನ್ನು ತಾಳೆಹಾಕಲಾಗುತ್ತದೆ.
ಇನ್ನು, ಫಿಫಾ ವಿಶ್ವಕಪ್ ಗೆಲ್ಲುವ ಫೆವರೇಟ್ ಟೀಂ ಯಾವುದು ಎನ್ನುವ ಬಾಬಾ ವಂಗಾ ಅವರ ಭವಿಷ್ಯ ಎಲ್ಲೂ ಉಲ್ಲೇಖವಾಗಿಲ್ಲ. ಆದರೂ, ಸಾಮಾಜಿಕ ಜಾಲತಾಣದಲ್ಲಿ ಇದು ಚರ್ಚೆಯ ವಿಷಯವಾಗಿದೆ. ವಾಸ್ತವಾಗಿ, ಫಿಫಾ ಯಾರು ಗೆಲ್ಲುತ್ತಾರೆ ಎನ್ನುವುದನ್ನು ಭವಿಷ್ಯವಾಣಿಯ ಮೂಲಕ ನಿರ್ಧರಿಸಲು ಸಾಧ್ಯವಿಲ್ಲ. ಬದಲಿಗೆ, ಆಟಗಾರರ ಫಾರ್ಮ್ ಮತ್ತು ಫಿಟ್ನೆಸ್, ತಾಂತ್ರಿಕ ಕಾರ್ಯತಂತ್ರ, ತಂಡದಲ್ಲಿನ ಸಾಮರಸ್ಯ, ಈ ಮುಂತಾದ ಅಂಶಗಳ ಆಧಾರದ ಮೇಲೆ, ಯಾವ ತಂಡ ಗೆಲ್ಲುತ್ತೆ ಎನ್ನುವುದನ್ನು ನಿರ್ಧರಿಸಬಹುದು ಎಂದು ಹಲವರು ಅಭಿಪ್ರಾಯ ಪಡುತ್ತಿದ್ದಾರೆ.
ಕಪ್ ಗೆಲ್ಲುವ ಫೇವರೆಟ್ 5 ತಂಡಗಳು ಯಾವುವು ?



