ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯಕ್ಕೆ ಇದೀಗ ಲಖನೌನಲ್ಲಿ ವೇದಿಕೆ ಸಿದ್ಧವಾಗಿದೆ. ಧರ್ಮಶಾಲಾದಲ್ಲಿ ನಡೆದ ಮಳೆಬಾಧಿತ ಮೊದಲ ಪಂದ್ಯದ ನಂತರ, ಈಗ ಉಭಯ ತಂಡಗಳು ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಮೊದಲ ಪಂದ್ಯದಲ್ಲಿ ರಹಮಾನುಲ್ಲಾ ಗುರ್ಬಾಜ್ ಅವರ ಬಿರುಸಿನ 102 ರನ್ಗಳ ಶತಕದ ಹೊರತಾಗಿಯೂ ಅಫ್ಘಾನಿಸ್ತಾನ ತಂಡ 7 ವಿಕೆಟ್ ಗಳಿಂದ ಪರಾಭವಗೊಂಡಿತ್ತು.
ಮೊದಲ ಪಂದ್ಯದಲ್ಲಿ ಸೋಲಿನ ಕಹಿಯನ್ನುಂಡಿದ್ದರೂ ದೈತ್ಯ ಸಂಹಾರಿ ಎಂದೇ ಹೆಸರಾಗಿರುವ ಅಫ್ಘಾನಿಸ್ತಾನ ತಂಡ ಜೂವ್ 17ರ ಬುಧವಾರದಂದು ನಡೆಯಲಿರುವ 2ನೇ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲಗೊಳಿಸಲು ತನ್ನೆಲ್ಲಾ ಪ್ರಯತ್ನಗಳನ್ನು ನಡೆಸಲಿದೆ. ಇದೇವೇಳೆ ಭಾರತ ತಂಡ ನಿರಂತರ 2ನೇ ಪಂದ್ಯ ಗೆಲ್ಲುವ ಮೂಲಕ ಸರಣಿ ಕೈವಶ ಮಾಡಿಕೊಳ್ಳುವ ಗುರಿ ಹೊಂದಿದೆ.
ಅದ್ಭುತ ಫಾರ್ಮ್ ನಲ್ಲಿ ನಾಯಕ
ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರು ಕಳೆದ ಪಂದ್ಯದಲ್ಲಿ ಕೇವಲ 66 ಎಸೆತಗಳಲ್ಲಿ ಅಜೇಯ 84 ರನ್ ಗಳಿಸಿದ್ದರು. ಕೆಎಲ್ ರಾಹುಲ್ ಮತ್ತು ಇಶಾನ್ ಕಿಶನ್ ಅವರಿಂದಲೂ ಉಪಯುಕ್ತ ಕೊಡುಗೆ ಬಂದಿದೆ. ಹೀಗಾಗಿ ಭಾರತದ ಬ್ಯಾಟಿಂಗ್ ವಿಭಾಗದ ಬಗ್ಗೆ .ಯಾವುದೇ ಚಿಂತೆ ಇಲ್ಲ. ಆದರೆ ಕಳೆದ ಪಂದ್ಯದಲ್ಲಿ ರನೌಟ್ ಗೊಳಗಾಗಿದ್ದ ಮಾಜಿ ನಾಯಕ ರೋಹಿತ್ ಶರ್ಮಾ ಅವರಿಂದ ಅಭಿಮಾನಿಗಳು ಈ ಬಾರಿ ದೊಡ್ಡ ಇನ್ನಿಂಗ್ಸ್ ಅನ್ನು ನಿರೀಕ್ಷಿಸುತ್ತಿದ್ದಾರೆ.
ಇನ್ನು ಬೌಲಿಂಗ್ ವಿಭಾಗಕ್ಕೆ ಬಂದರೆ ಹರ್ಷ್ ದುಬೆ ಮತ್ತು ಗುರ್ನೂರ್ ಬ್ರಾರ್ ಅವರು ತಾವಾಡಿದ ಮೊದಲ ಪಂದ್ಯದಲ್ಲೇ ತಲಾ ಮೂರು ವಿಕೆಟ್ ಕಬಳಿಸಿ ಗಮನ ಸೆಳೆದಿದ್ದಾರೆ. ಹೀಗಾಗಿ 2ನೇ ಪಂದ್ಯಕ್ಕೆ ಪ್ಲೇಯಿಂಗ್ ಇಲೆವೆನ್ ಆಯಲು ತಂಡದ ಮ್ಯಾನೇಜ್ ಮೆಂಟ್ ಗೆ ತಲೆನೋವು ಎದುರಾಗುವುದು ಖಚಿತ. ಯಾಕೆಂದರೆ ಪ್ರಮುಖ ಸ್ಪಿನ್ನರ್ ಕುಲದೀಪ್ ಯಾದವ್ ಅವರು ಸಹ ಆಡಲು ಸಿದ್ಧವಾಗಿರುವುದರಿಂದ ಯಾವ ನಿರ್ಧಾರಕ್ಕೆ ಬರಲಿದೆ ಎಂಬುದು ಕುತೂಹಲದ ಸಂಗತಿಯಾಗಿದೆ.
ಇನ್ನು ಮತ್ತೊಂದೆಡೆ ಅಫ್ಘಾನಿಸ್ತಾನ ತಂಡವು ಮೊದಲ ಪಂದ್ಯದಲ್ಲಿ ಅದ್ಬುತ ಶತಕ ಬಾರಿಸಿದ ರಹಮಾನುಲ್ಲಾ ಗುರ್ಬಾಜ್ ಅವರನ್ನೇ ಹೆಚ್ಚು ನೆಚ್ಚಿಕೊಂಡಿದೆ. ಇಬ್ರಾಹಿಂ ಜದ್ರಾನ್, ಸೆದಿಕುಲ್ಲಾ ಅಟಲ್ ಅವರು ಸಹ ಪಂದ್ಯದ ಗತಿಯನ್ನೇ ಬದಲಾಯಿಸಬಲ್ಲ ಬ್ಯಾಟರ್ ಗಳಾಗಿರುವುದರಿಂದ ಭಾರತದ ಬೌಲರ್ ಗಳು ಮೈಮರೆಯುವಂತಿಲ್ಲ. ಇನ್ನು ನಿಧಾನಗತಿಯ ಲಖನೌನ ಸ್ಪಿನ್ ಸ್ನೇಹಿ ಪಿಚ್ ನಲ್ಲಿ ರಶೀದ್ ಖಾನ್ ಮೇಲೆ ಕುದುರಿಕೊಂಡಲ್ಲಿ ಪ್ರಪಂಚದ ಯಾವ ಬ್ಯಾಟರ್ ಸಹ ನೆಲೆ ಕಂಡುಕೊಳ್ಳುವುದು ಕಷ್ಟ. ಗುರ್ನಾರ್ ಬ್ರಾರ್ ಅವರು ಕಳೆದ ಪಂದ್ಯದಲ್ಲಿ ಯಶಸ್ವಿಯಾಗಿದ್ದರೂ ಏಕನಾ ಪಿಚ್ ನಲ್ಲಿ ಭಾರತ ತಂಡ ರಿಸ್ಟ್ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.
ಲಖನೌನಲ್ಲಿ ಭಾರತ ಗಿs ಅಫ್ಘಾನಿಸ್ತಾನ 2ನೇ ಫೈಟ್!



