ಬೆಂಗಳೂರು: ಖಂಡಿತ ನಮ್ಮ ಮೂರು ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೆಲ್ಲುವ ವಿಶ್ವಾಸವಿದೆ ಹಾಗಾಗಿಯೇ ಲವಲವಿಕೆಯಿಂದ ಇದ್ದೇವೆ. ಹೆಚ್ಚುವರಿ ಮತಗಳನ್ನು ಯಾರು ಹಾಕಬೇಕು ಅನ್ನೋದನ್ನು ಈಗ ಡಿಸೈಡ್ ಮಾಡ್ತಾರೆ ಎಂದಿದ್ದಾರೆ.ಹೊರಗಡೆ ಒಂದು ನಡೆಯುತ್ತೆ , ಒಳಗಡೆ ಒಂದು ನಡೆಯುತ್ತೆ. ಬಿಜೆಪಿಯಿಂದ ಯಾವುದೇ ಅಡ್ಡಮತದಾನ ನಡಯಲ್ಲ. ಕಾಂಗ್ರೆಸ್ ನಲ್ಲಿ ಅಸಮಧಾನ ವಿದೆ, ಅವರಲ್ಲಿ ಅಡ್ಡಮತದಾನ ನಡೆಯಬಹುದುಕಾಂಗ್ರೆಸ್ ನಲ್ಲಿರುವಷ್ಟು ಅಸಮಧಾನ ನಮ್ಮಲ್ಲಿ ಇಲ್ಲ. ಬಿಜೆಪಿಯಿಂದ ಉಚ್ಚಾಟಿತ ಶಾಸಕರು, ಎನ್ ಡಿಎ ಅಭ್ಯರ್ಥಿಗೆ ಮತದಾನ ಮಾಡಲಿದ್ದಾರೆ ಅವರ ಜೊತೆ ನಮ್ಮ ವರಿಷ್ಠರು ಮಾತನಾಡಿದ್ದಾರೆ.



