ನವದೆಹಲಿ: ದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಅಧಿಕೃತವಾಗಿ ಪ್ರಕಟಿಸಿದೆ. ಚಲನಚಿತ್ರ ನಿರ್ಮಾಪಕ ಜಯರಾಜ್ ನೇತೃತ್ವದ 11 ಸದಸ್ಯರ ತೀರ್ಪುಗಾರರ ಸಮಿತಿಯು ದೇಶಾದ್ಯಂತ ಬಂದ ನಮೂದುಗಳನ್ನು ಪರಿಶೀಲಿಸಿ ವಿಜೇತರನ್ನು ಆಯ್ಕೆ ಮಾಡಿದೆ. 2024ರ ಜನವರಿ 1ರಿಂದ ಡಿಸೆಂಬರ್ 31ರ ನಡುವೆ ಸೆನ್ಸಾರ್ ಮಂಡಳಿಯಿಂದ ಪ್ರಮಾಣೀಕರಿಸಲ್ಪಟ್ಟ ಚಲನಚಿತ್ರಗಳನ್ನು ಈ ಪ್ರಶಸ್ತಿಗಾಗಿ ಪರಿಗಣಿಸಲಾಗಿದೆ.ಪ್ರಮುಖ ಪ್ರಶಸ್ತಿಗಳ ವಿವರ: ವೈಶಿಷ್ಟ÷್ಯಪೂರ್ಣ ಚಲನಚಿತ್ರಗಳ ವಿಭಾಗದಲ್ಲಿ `ಆರ್ಟಿಕಲ್ 370′ ಅತ್ಯುತ್ತಮ ಚಲನಚಿತ್ರವಾಗಿ ಹೊರಹೊಮ್ಮಿದೆ. ಇದೇ ಚಿತ್ರದ ಅಭಿನಯಕ್ಕಾಗಿ ಯಾಮಿ ಗೌತಮ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ‘ಚಂದು ಚಾಂಪಿಯನ್’ ಚಿತ್ರಕ್ಕಾಗಿ ಕಾರ್ತಿಕ್ ಆರ್ಯನ್ ಮತ್ತು ‘ಭ್ರಮಯುಗಂ’ ಚಿತ್ರದ ನಟನೆಗಾಗಿ ಮಮ್ಮುಟ್ಟಿ ಜಂಟಿಯಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ‘ಅಮರನ್’ ಚಿತ್ರದ ನಿರ್ದೇಶನಕ್ಕಾಗಿ ರಾಜ್ಕುಮಾರ್ ಪೆರಿಯಸಾಮಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರೆ, ಇದೇ ಚಿತ್ರದ ಹಿನ್ನೆಲೆ ಸಂಗೀತಕ್ಕಾಗಿ ಅತ್ಯುತ್ತಮ ಸಂಗೀತ ನಿರ್ದೇಶನ ಪ್ರಶಸ್ತಿಯೂ ಸಂದಿದೆ ಮನರಂಜನಾ ವಿಭಾಗದಲ್ಲಿ `ಕಲ್ಕಿ 2898 ಎಡಿ’ ಅತ್ಯುತ್ತಮ ಜನಪ್ರಿಯ ಚಿತ್ರವಾಗಿ ಆಯ್ಕೆಯಾಗಿದ್ದು, ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ ಪ್ರಶಸ್ತಿಯನ್ನೂ ಪಡೆದಿದೆ. ರಾಷ್ಟ್ರೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಸಾರುವ ಅತ್ಯುತ್ತಮ ಚಿತ್ರವಾಗಿ `ಕ್ಯಾಪ್ಟನ್ ಮಿಲ್ಲರ್’ ಆಯ್ಕೆಯಾಗಿದ್ದು, ನಟ ಧನುಷ್ ವಿಶೇಷ ಉಲ್ಲೇಖ ಗೌರವಕ್ಕೆ ಪಾತ್ರರಾಗಿದ್ದಾರೆ. ‘ಪುಷ್ಪ 2’ ಚಿತ್ರಕ್ಕಾಗಿ ಸುಕುಮಾರ್ ಅತ್ಯುತ್ತಮ ಚಿತ್ರಕಥೆಗಾರ ಪ್ರಶಸ್ತಿ ಪಡೆದರೆ, ದೀಪಾಲಿ ನೂರ್ ಮತ್ತು ಶೀತಲ್ ಶರ್ಮಾ ಅತ್ಯುತ್ತಮ ಉಡುಪು ವಿನ್ಯಾಸ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ‘ಮಹಾರಾಜ’ ಚಿತ್ರದ ಸಾಹಸ ನಿರ್ದೇಶನಕ್ಕಾಗಿ ಅನ್ಲ್ ಅರಸು ಮತ್ತು ಪೋಷಕ ನಟಿ ಪ್ರಶಸ್ತಿಯನ್ನು ಸಚನಾ ನಮಿದಾಸ್ ಪಡೆದಿದ್ದಾರೆ. ಮತ್ತೊಬ್ಬ ಪೋಷಕ ನಟಿ ಪ್ರಶಸ್ತಿ ‘ಮಿಥ್ಯ’ ಚಿತ್ರದ ರೂಪಶ್ರೀ ವರ್ಕಾಡಿ ಪಾಲಾಗಿದ್ದರೆ, ‘ಭಕ್ಷಕ್’ ಚಿತ್ರಕ್ಕಾಗಿ ಸಂಜಯ್ ಮಿಶ್ರಾ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಗೆದ್ದಿದ್ದಾರೆ.ಕನ್ನಡ ಚಿತ್ರರಂಗಕ್ಕೆ ಈ ಬಾರಿ ಉತ್ತಮ ಗೌರವ ಸಿಕ್ಕಿದ್ದು, ‘ಮಿಥ್ಯ’ ಚಿತ್ರವು ಅತ್ಯುತ್ತಮ ಕನ್ನಡ ಚಿತ್ರವಾಗಿ ಆಯ್ಕೆಯಾಗಿದೆ. ಚಿತ್ರರಂಗದ ಕುರಿತಾದ ಅತ್ಯುತ್ತಮ ಪುಸ್ತಕ ವಿಭಾಗದಲ್ಲಿ ಕೆಂಚನೂರು ಪ್ರದೀಪ್ ಕುಮಾರ್ ಶೆಟ್ಟಿ ಅವರು ಬರೆದ ‘ನಾನಿರುವುದೆ ನಿಮಗಾಗಿ ನಾಡಿರುವುದೆ ನನಗಾಗಿ: ಕನ್ನಡ ಸಿನಿಮಾದ ತತ್ವ ಮತ್ತು ರಾಜಕೀಯ’ ಕೃತಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ತುಳು ಭಾಷೆಯ ‘ಇಂಬು’ ಚಿತ್ರ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದಿದೆ. ತಮಿಳಿನ ‘ರಾಯನ್’, ತೆಲುಗಿನ ‘ಕಮಿಟಿ ಕರ್ರೊಳ್ಳು’, ಹಿಂದಿಯ ‘ಶ್ರೀಕಾಂತ್’, ಮಲಯಾಳಂನ ‘ಫೆಮಿನಿಚಿ ಫಾತಿಮಾ’ ಮತ್ತು ಮರಾಠಿಯ ‘ಮುಕ್ಕಾಂ ಪೋಸ್ಟ್ ಬೊಂಬಿಲವಾಡಿ’ ಆಯಾ ಭಾಷೆಗಳ ಅತ್ಯುತ್ತಮ ಪ್ರಾದೇಶಿಕ ಚಿತ್ರಗಳಾಗಿ ಹೊರಹೊಮ್ಮಿವೆ.ಫೀಚರೇತರ ಮತ್ತು ಇತರ ಪ್ರಶಸ್ತಿಗಳು: ಫೀಚರೇತರ ವಿಭಾಗದಲ್ಲಿ ಸುಮೀರಾ ರಾಯ್ ನಿರ್ಮಾಣ ಮತ್ತು ನಿರ್ದೇಶನದ ‘ಭಂಗಾರ್’ ಅತ್ಯುತ್ತಮ ಚಿತ್ರವಾಗಿ ಆಯ್ಕೆಯಾಗಿದೆ.ಆನಂದ್ ಎಲ್. ರೈ ಅವರು ‘ಸ್ಟಾ÷್ಯಟ್ಯೂ ಆಫ್ ಯೂನಿಟಿ – ಏಕತಾ ಕಾ ಪ್ರತೀಕ್’ ಚಿತ್ರಕ್ಕಾಗಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಸಂಜೀವ್ ಶ್ರೀವಾಸ್ತವ ಅತ್ಯುತ್ತಮ ಚಲನಚಿತ್ರ ವಿಮರ್ಶಕ ಪ್ರಶಸ್ತಿ ಪಡೆದರೆ, ‘ರಾಮ್-ನಾಮಿ’ ಅತ್ಯುತ್ತಮ ಸಾಕ್ಷ÷್ಯಚಿತ್ರವಾಗಿ ಹೊರಹೊಮ್ಮಿದೆ. ‘ಪಿಪ್ಲಾಂತ್ರಿ: ಎ ಟೇಲ್ ಆಫ್ ಎಕೋ ಫೆಮಿನಿಸಂ’ ಸಾಮಾಜಿಕ ಮತ್ತು ಪರಿಸರ ಮೌಲ್ಯಗಳನ್ನು ಉತ್ತೇಜಿಸುವ ಅತ್ಯುತ್ತಮ ನಾನ್-ಫೀಚರ್ ಚಿತ್ರ ಪ್ರಶಸ್ತಿ ಪಡೆದಿದೆ. ಅನಿಮೇಷನ್ ವಿಭಾಗದಲ್ಲಿ ‘ಟಚ್ಡ್ ಆಸ್ ವಾಟರ್’ ಚಿತ್ರಕ್ಕೆ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ಪಡೆದ ಸಿನಿಮಾಗಳು ಮತ್ತು ಅವರು ಲಭ್ಯವಿರುವ ಒಟಿಟಿ
ತೀರ್ಪುಗಾರರ ವಿಶೇಷ ಆಯ್ಕೆ-ಮೇಯಳಗನ್- ನಟ್ಫ್ಲಿಕ್ಸ್
ಅತ್ಯುತ್ತಮ ನಟ ತೀರ್ಪುಗಾರರ ಆಯ್ಕೆ- ಕ್ಯಾಪ್ಟನ್ ಮಿಲ್ಲರ್ (ಧನುಶ್)
ಅತ್ಯುತ್ತಮ ಆಕ್ಷನ್ -ಮಹಾರಾಜ- ನೆಟ್ಫ್ಲಿಕ್ಸ್
ಅತ್ಯುತ್ತಮ ಕೊರಿಯೋಗ್ರಫಿ- ಸ್ತ್ರೀ 2- ಅಮೆಜಾನ್ ಪ್ರೈಮ್ ವಿಡಿಯೋ
ಅತ್ಯುತ್ತಮ ಸಂಗೀತ- ಅಮರನ್ (ತಮಿಳು)- ನೆಟ್ಫ್ಲಿಕ್ಸ್
ಅತ್ಯುತ್ತಮ ಹಾಡು- ಆರ್ಟಿಕಲ್ 370 (ಹಿಂದಿ)- ನೆಟ್ಫ್ಲಿಕ್ಸ್ ಮತ್ತು ಜಿ5
ಅತ್ಯುತ್ತಮ ಪ್ರಸಾಧನ- ಕಮಿಟಿ ಕರ್ರೋಳ್ಳು-ಇಟಿವಿ ವಿನ್
ಅತ್ಯುತ್ತಮ ವಸ್ತ್ರವಿನ್ಯಾಸ- ಪುಷ್ಪ 2- ನೆಟ್ಫ್ಲಿಕ್ಸ್
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್- ಕಲ್ಕಿ 2898 ಎಡಿ ( ತೆಲುಗು)- ಅಮೆಜಾನ್ ಪ್ರೈಮ್ ವಿಡಿಯೋ
ಅತ್ಯುತ್ತಮ ಸಂಕಲನ- ಅಮರನ್ (ತಮಿಳು)- ನೆಟ್ಫ್ಲಿಕ್ಸ್
ಅತ್ಯುತ್ತಮ ಧ್ವನಿ ವಿನ್ಯಾಸ- ಭೂಲ ಭುಲಯ್ಯ (ಹಿಂದಿ)- ನೆಟ್ಫ್ಲಿಕ್ಸ್
ಅತ್ಯುತ್ತಮ ಸಂಭಾಷಣೆ- ಲಕ್ಕಿ ಭಾಸ್ಕರ್ (ತೆಲುಗು)- ನೆಟ್ಫ್ಲಿಕ್ಸ್
ಅತ್ಯುತ್ತಮ ಅಡಾಪ್ಟೆಡ್ ಚಿತ್ರಕತೆ -ಸ್ವರಗಂಧರ್ವ (ಮರಾಠಿ)- ಅಮೆಜಾನ್ ಪ್ರೈಮ್ ವಿಡಿಯೋ
ಅತ್ಯುತ್ತಮ ಚಿತ್ರಕತೆ-ಪುಷ್ಪ 2 (ಸುಕುಮಾರ್)- ನೆಟ್ಫ್ಲಿಕ್ಸ್
ಅತ್ಯುತ್ತಮ ಸಿನಿಮಾಟೊಗ್ರಫಿ- ಬ್ರಮಯುಗಂ (ಮಲಯಾಳಂ)- ಸೋನಿ ಲಿವ್
ಅತ್ಯುತ್ತಮ ಗಾಯಕಿ- ಎಆರ್ಎಂ (ವೈಕೋಂ ವಿಜಯಲಕ್ಷ್ಮೀ)- ಜಿಯೋ ಹಾಟ್ಸ್ಟಾರ್
ಪೋಷಕ ನಟ- ಭಕ್ಷಕ್-ಸಂಜಯ್ ಮಿಶ್ರಾ- ನೆಟ್ಫ್ಲಿಕ್ಸ್
ಅತ್ಯುತ್ತಮ ನಟಿ- ಆರ್ಟಿಕಲ್ 370-ಯಾಮಿ ಗೌತಮ್- ನೆಟ್ಫ್ಲಿಕ್ಸ್ ಮತ್ತು ಜೀ6
ಅತ್ಯುತ್ತಮ ನಟ- ಚಂದು ಚಾಂಪಿಯನ್ (ಕಾರ್ತಿಕ್ ಆರ್ಯನ್)- ಅಮೆಜಾನ್ ಪ್ರೈಮ್ ವಿಡಿಯೋ
ಅತ್ಯುತ್ತಮ ನಿರ್ದೇಶಕ- ಅಮರನ್ (ರಾಜಕುಮಾರ ಪರ್ರಿಸ್ವಾಮಿ)- ನೆಟ್ಫ್ಲಿಕ್ಸ್
ಅತ್ಯುತ್ತಮ ಮಕ್ಕಳ ಸಿನಿಮಾ- 35 ಚಿನ್ನ ಕದು ಕಾದು-ಅಮೆಜಾನ್ ಪ್ರೈಮ್ ಮತ್ತು ಆಹಾ
ಅತ್ಯುತ್ತಮ ಸಾಮಾಜಿಕ ಮೌಲ್ಯ ಸಿನಿಮಾ- ಕ್ಯಾಪ್ಟನ್ ಮಿಲ್ಲರ್- ಅಮೆಜಾನ್ ಪ್ರೈಮ್
ಅತ್ಯುತ್ತಮ ಮನೊರಂಜನಾ ಸಿನಿಮಾ- ಕಲ್ಕಿ 2898 ಎಡಿ- ಪ್ರೈಮ್ ವಿಡಿಯೋ
ಅತ್ಯುತ್ತಮ ಡೆಬ್ಯೂ ಸಿನಿಮಾ- ಸ್ವಾತಂತ್ರ್ಯ ವೀರ ಸಾವರ್ಕರ್- ಜೀ5 ಮತ್ತು ಜಿಯೋ ಟಿವಿ



