ಲಾರ್ಡ್್ಸ: ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಕಳೆದುಕೊಂಡ ಗೌರವವನ್ನು, ಭಾರತ ಕ್ರಿಕೆಟ್ ತಂಡ ಏಕದಿನ ಸರಣಿಯಲ್ಲಿ ಮತ್ತೆ ಗಳಿಸಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಲಾರ್ಡ್್ಸನಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ, ಭಾರತ ತಂಡವನ್ನು 27 ರನ್ಗಳಿಂದ ಮಣಿಸುವ ಮೂಲಕ, ಇಂಗ್ಲೆAಡ್ ಸರಣಿ ಕೈವಶ ಮಾಡಿಕೊಂಡಿದೆ. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆAಡ್ ತಂಡ, ನಿಗದಿತ 50 ಓವರ್ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ ಭರ್ಜರಿ 387 ರನ್ ಗಳಿಸಿತು. ಇದು ಏಕದಿನ ಮಾದರಿಯಲ್ಲಿ, ಲಾರ್ಡ್್ಸ ಮೈದಾನದಲ್ಲಿ ಗಳಿಸಿದ ಅತ್ಯಧಿಕ ಸ್ಕೋರ್ ಆಗಿತ್ತು. ಬೃಹತ್ ರನ್ಗಳ ಗುರಿ ಬೆನ್ನಟ್ಟಿದ ಭಾರತ 50 ಓವರ್ಗಲ್ಲಿ 7 ವಿಕೆಟ್ ನಷ್ಟಕ್ಕೆ 360 ರನ್ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು. ಇಂಗ್ಲೆಂಡ್ ನೀಡಿದ 388 ರನ್ಗಳ ಬೃಹತ್ ಮೊತ್ತದ ಬೆನ್ನತ್ತಿದ ಭಾರತ, ಆರಂಭದಲ್ಲೇ ಅಗ್ರೇಸಿವ್ ಆಟದ ಮೊರೆ ಹೋಯಿತು. ಆರಂಭಿಕ ಆಟಗಾರರಾದ ನಾಯಕ ಶುಭಮನ್ ಗಿಲ್ ಮತ್ತು ರೋಹಿತ್ ಶರ್ಮಾ ಆಟ ಆರಂಭಿಸುತ್ತಿದ್ದAತೇ, ಇಂಗ್ಲೆAಡ್ ಬೌಲರ್ಗಳನ್ನು ದಂಡಿಸಿದರು. ಗಿಲ್ 87 ಎಸೆತಗಳಲ್ಲಿ 77 ರನ್ ಬಾರಿಸಿದರೆ, ರೋಹಿತ್ ಶರ್ಮಾ 110 ಎಸೆತಗಳಲ್ಲಿ 138 ರನ್ ಸಿಡಿಸಿ ಅಬ್ಬರಿಸಿದರು. ಹಿಟ್ಮ್ಯಾನ್ 17 ಬೌಂಡರಿ ಮತ್ತು 5 ಸಿಕ್ಸರ್ ಬಾರಿಸಿ ಗಮನ ಸೆಳೆದರು.ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಲಾರ್ಡ್್ಸನಲ್ಲಿ ಏಕದಿನ ಮಾದರಿಯಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಪಾತ್ರಾದರು. ಆ ಬಳಿಕ ಪಂದ್ಯವನ್ನು ಗೆಲ್ಲಿಸುವ ಜವಾಬ್ದಾರಿ ಹೊತ್ತುಕೊಂಡ ವಿರಾಟ್ ಕೊಹ್ಲಿ, ತಮ್ಮ ಎಂದಿನ ಶೈಲಿಯ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದರು. ಆದರೆ ಪಂದ್ಯದ 45.2ನೇ ಓವರ್ನಲ್ಲಿ 60 ಎಸೆತಗಳಲ್ಲಿ 74 ರನ್ ಗಳಿಸಿ ಔಟಾದರು. ಇದಕ್ಕೂ ಮೊದಲು ಕ್ರೀಸ್ಗೆ ಬಂದಿದ ಇಶಾನ್ ಕಿಶನ್ 14 ರನ್) ಮತ್ತು ಶ್ರೇಯಸ್ ಅಯ್ಯರ್ (0), ಕೆ.ಎಲ್ ರಾಹುಲ್ (12) ತೀವ್ರ ನಿರಾಸೆ ಮೂಡಿಸಿದರು. ಅಂತಿಮವಾಗಿ ಭಾರತವು 50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 360 ರನ್ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆAಡ್ ತಂಡ, ನಿಗದಿತ 50 ಓವರ್ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ ಭರ್ಜರಿ 387 ರನ್ ಗಳಿಸಿತು. ಆರಂಭಿಕ ಆಟಗಾರರಾದ ಬೆನ್ ಡಕೆಟ್ ಮತ್ತು ಜೇಕಬ್ ಬೆಥೆಲ್ ಅವರ 191 ರನ್ಗಳ ಅಮೋಘ ಜೊತೆಯಾಟದ ನೆರವಿನಿಂದ, ಇಂಗ್ಲೆAಡ್ ಇಷ್ಟು ಬೃಹತ್ ಮೊತ್ತದ ರನ್ ಕಲೆ ಹಾಕಲು ಸಾಧ್ಯವಾಯಿತು. ಡಕೆಟ್ 135 ಎಸೆತಗಳಲ್ಲಿ 141 ರನ್ ಗಳಿಸಿ ಮಿಂಚಿದರೆ, ಬೆಥೆಲ್ 93 ಎಸೆತಗಳಲ್ಲಿ 91 ರನ್ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಆ ಬಳಿಕ ಬಂದ ಜೋ ರೂಟ್ ಕೂಡ, ಕೇವಲ 48 ಎಸೆತಗಳಲ್ಲಿ 74 ರನ್ ಸಿಡಿಸಿದರೆ, ಜಾಸ್ ಬಟ್ಲರ್ ಕೇವಲ 13 ಎಸೆತಗಳಲ್ಲಿ 41 ರನ್ ಗಳಿಸಿ ಭಾರತೀಯ ಬೌಲರ್ಗಳ ಬೆವರಿಳಿಸಿದರು.



