ಬೆಂಗಳೂರು: ಶನಿವಾರ ನಿಧನರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ಸಂಜೆ ವೇಳೆಗೆ ನಡೆಯಲಿದೆ.
ನಿನ್ನೆ ರಾತ್ರಿಯೇ ಬೆಂಗಳೂರಿನಿAದ ಚೆನ್ನಮ್ಮ ಅವರ ಪಾರ್ಥೀವ ಶರೀರವನ್ನು ಹೊಳೆನರಸೀಪುರದ ಅವರ ಪುತ್ರ ಎಚ್.ಡಿ. ರೇವಣ್ಣ ಅವರ ನಿವಾಸಕ್ಕೆ ತರಲಾಗಿತ್ತು. ಇಂದು ಬೆಳಿಗ್ಗೆ 10ಗಂಟೆ ವರೆಗೂ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾಕಷ್ಟು ಮಂದಿ ಗಣ್ಯರು ಸುತ್ತಮುತ್ತಲಿನ ಗ್ರಾಮಸ್ಥರು, ಚೆನ್ನಮ್ಮ ಅವರ ಅಂತಿಮ ದರ್ಶನ ಪಡೆದ ನಂತರ 10 ಗಂಟೆ ಸುಮಾರಿಗೆ ಅವರ ಪಾರ್ಥೀವ ಶರೀರವನ್ನು ಹರದನಹಳ್ಳಿಗೆ ಕೊಂಡೊಯ್ಯಲು ಸಿದ್ಧತೆ ನಡೆಸಲಾಯಿತು. ಹರದನಹಳ್ಳಿಯಲ್ಲಿ ಸುಮಾರು ಹೊತ್ತು ಪೂಜೆ ವಿಧಿವಿಧಾನಗಳನ್ನು ನೆರವೇರಿಸಿ ಅವರ ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯುವ ವ್ಯವಸ್ಥೆ ಮಾಡಲಾಯಿತು. ಮಧ್ಯಾಹ್ನದವರೆಗೂ ಅವರ ಮೆರವಣಿಗೆ ನಡೆಸಿ 2 ಗಂಟೆ ನಂತರ ಅಂತ್ಯಸAಸ್ಕಾರದ ವಿಧಿವಿಧಾನಗಳು ಆರಂಭವಾಗಲಿವೆ.
ಕೇಂದ್ರ ಸರ್ಕಾರದ ಇಬ್ಬರು ಮೂವರು ಮಂತ್ರಿಗಳು ಹಾಗೂ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಅನೇಕ ಗಣ್ಯರು ಹಾಗೂ ಸಾವಿರಾರು ಮಂದಿ ಚೆನ್ನಮ್ಮ ಅವರ ಹಾಗೂ ದೇವೇಗೌಡರ ಕುಟುಂಬದ ಅಭಿಮಾನಿಗಳು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ. 4 ಗಂಟೆ ಸುಮಾರಿಗೆ ಒಕ್ಕಲಿಗರ ಸಂಪ್ರದಾಯದಂತೆ ಅವರ ಅಂತ್ಯಸAಸ್ಕಾರ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಸಂಜೆ ವೇಳೆಗೆ ಚೆನ್ನಮ್ಮ ಅಂತ್ಯಕ್ರಿಯೆ



