ಚಾಮರಾಜನಗರ : ಬೂದಗಟ್ಟಿ ದೊಡ್ಡಿ ಅರಣ್ಯ ಪ್ರದೇಶದಲ್ಲಿ ಮಾನವನ ಅಸ್ಥಿಪಂಜರ ಪತ್ತೆಯಾಗಿದೆ. ಮಲೆ ಮಹದೇಶ್ವರ ವನ್ಯಜೀವಿ ಧಾಮದ ಬೂದಗಟ್ಟಿ ಅರಣ್ಯ ಪ್ರದೇಶದಲ್ಲಿ ಇದೀಗ ಮಾನವನ ಅಸ್ತಿ ಪಂಜರ ಪತ್ತೆಯಾಗಿದ್ದು, ಫಾರೆಸ್ಟ್ ವಾಚರ್ಸ್ ಬೀಟ್ಸ್ ಗೆ ಹೋಗಿದ್ದ ಸಂದರ್ಭದಲ್ಲಿ ಘಟನೆ ಬೆಳಕಿಗೆ ಬಂದಿದೆ.ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಜಾಗೆರಿ ವ್ಯಾಪ್ತಿಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ಹೊರತುಪಡಿಸಿ ಸಾಮಾನ್ಯರಿಗೆ ತೆರಳಲು ಅನುಮತಿ ಇಲ್ಲ. ದುರ್ಗಮ ಕಾಡಿನ ಕಾವೇರಿ ನದಿಯ ತಟದ ಪಕ್ಕದಲ್ಲಿಯೇ ಮಾನವನ ಅಸ್ತಿ ಪಂಜರ ಪತ್ತೆಯಾಗಿದೆ.
ಕೊಳ್ಳೇಗಾಲ ಗ್ರಾಮಾಂತರ ಪೊಲೀಸರು ಮತ್ತು ಸೊಕೊ ಟೀಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಸದ್ಯ ಅಸ್ತಿಪಂಜರ ಗುರುತು ಪತ್ತೆ ಕಾರ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ. ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೂದಗಟ್ಟಿ ಅರಣ್ಯ ಪ್ರದೇಶದಲ್ಲಿ ಮಾನವನ ಅಸ್ತಿ ಪಂಜರ ಪತ್ತೆ



