ಬೇಲೂರು ಪುರಸಭೆ ಸದಸ್ಯ ಎ.ಆರ್. ಅಶೋಕ್ ಅವರನ್ನು ಅನರ್ಹಗೊಳಿಸಿ ಜಿಲ್ಲಾಧಿಕಾರಿ ನ್ಯಾಯಾಲಯ ನೀಡಿದ್ದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿರುವ ಹಿನ್ನೆಲೆಯಲ್ಲಿ ಅವರು ಪುರಸಭಾ ಸದಸ್ಯರಾಗಿ ಮುಂದುವರಿಯಲಿದ್ದಾರೆ.
ಕೆಲವು ಆಡಳಿತಾತ್ಮಕ ಹಾಗೂ ಕಾನೂನು ಸಂಬAಧಿತ ವಿಚಾರಗಳ ಹಿನ್ನೆಲೆ ಜಿಲ್ಲಾಧಿಕಾರಿ ನ್ಯಾಯಾಲಯವು ಎ.ಆರ್. ಅಶೋಕ್ ಅವರ ಸದಸ್ಯತ್ವವನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಅಶೋಕ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ ಹೈಕೋರ್ಟ್, ಡಿಸಿ ಕೋರ್ಟ್ ನೀಡಿದ್ದ ಅನರ್ಹತೆ ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿ ಮುಂದಿನ ವಿಚಾರಣೆವರೆಗೆ ಹಳೆಯ ಸ್ಥಿತಿ ಮುಂದುವರಿಯುವAತೆ ಸೂಚಿಸಿದೆ. ಇದರಿಂದ ಎ.ಆರ್. ಅಶೋಕ್ ಅವರು ಪುರಸಭಾ ಸದಸ್ಯರಾಗಿ ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ದೊರೆತಿದೆ.
ಹೈಕೋರ್ಟ್ ಆದೇಶ ಹೊರಬಿದ್ದ ಬಳಿಕ ಅಶೋಕ್ ಬೆಂಬಲಿಗರಲ್ಲಿ ಸಂತಸ ಮನೆಮಾಡಿದ್ದು ಪುರಸಭೆ ಮುಂಭಾಗ ಪಟಾಕಿ ಸಿಡಿಸಿ ಸಿಹಿ ಹಂಚಿ ಪರಸ್ಪರ ಅಭಿನಂದನೆ ಸಲ್ಲಿಸಿಕೊಂಡರು.
*ಇವತ್ತು ಸತ್ಯಕ್ಕೆ ಜಯ ಸಿಕ್ಕಿದೆ ಅನ್ನೋದಕ್ಕೆ ಇದು ಒಂದು ದೊಡ್ಡ ಉದಾಹರಣೆ” ಎಂದು ಪುರಸಭೆ ನಿಕಟಪೂರ್ವ ಅಧ್ಯಕ್ಷ ಎ ಆರ್ ಅಶೋಕ್ ಹೇಳಿದರು.*
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ತಮ್ಮ ವಿರುದ್ಧ ಡಿ.ಸಿ ಕೋರ್ಟ್ನಲ್ಲಿ ಸದಸ್ಯತ್ವ ರದ್ದುಪಡಿಸಲಾಗಿತ್ತು. ಆದರೆ ಇದೀಗ ಘನ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿ, ಪುರಸಭಾ ಸದಸ್ಯತ್ವವನ್ನು ಮುಂದುವರಿಸಬಹುದು ಎಂದು ಆದೇಶ ನೀಡಿರುವುದಾಗಿ ತಿಳಿಸಿದರು. ಹೈಕೋರ್ಟ್ ಆದೇಶವನ್ನು ಪುರಸಭೆ ಮುಖ್ಯಾಧಿಕಾರಿಗಳಿಗೆ ಸಲ್ಲಿಸಿರುವುದಾಗಿ ಹೇಳಿದ ಅವರು, ಮೇ 11ರಂದು ನಡೆಯಲಿರುವ ಪುರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ದೊರೆತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ತಮ್ಮ ವಿರುದ್ಧ ಕೆಲವರು ಪಿತೂರಿ ಮಾಡಿ ಸದಸ್ಯತ್ವ ತಪ್ಪಿಸಲು ಯತ್ನಿಸಿದರು. ಒಂದು ವರ್ಷದ ಕಾಲ ತೊಂದರೆ ನೀಡಿ ಮಾನಸಿಕ ಒತ್ತಡಕ್ಕೆ ಒಳಪಡಿಸಿದರು. “ಎಲ್ಲಿ ಹೋದರೂ, ಬಂದರೂ ತೊಂದರೆ ಕೊಟ್ಟರು. ಆದರೆ ಶ್ರೀ ಚನ್ನಕೇಶವ ಸ್ವಾಮಿಯ ಕೃಪೆಯಿಂದ ಇವತ್ತು ಮತ್ತೆ ಜಯಶೀಲನಾಗಿ ಪುರಸಭಾ ಸದಸ್ಯನಾಗಿ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿದೆ” ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಬೇಲೂರಿನ ಜನರ ಪರವಾಗಿ ಉತ್ತಮ ಕೆಲಸಗಳನ್ನು ಮಾಡಿಕೊಂಡು ಹೋಗುವುದಾಗಿ ತಿಳಿಸಿದ ಅವರು, “ನನಗೆ ಬಂದಿರುವ ಹೈಕೋರ್ಟ್ ಆದೇಶವನ್ನು ಎಲ್ಲರೂ ಸ್ವಾಗತಿಸಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುತ್ತೇನೆ” ಎಂದರು.
ಈ ವೇಳೆ ಬಿ.ಶಿವರಾಂ ವಿರುದ್ಧ ವಾಗ್ದಾಳಿ ನಡೆಸಿದ ಅಶೋಕ್, “ನನ್ನನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅವಿಶ್ವಾಸ ತಂದು ತೇಜೋವಧೆ ಮಾಡಿದರು. ನನ್ನ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿಸಿದರು. ಬಸವೇಶ್ವರ ವೃತ್ತದಲ್ಲಿ ಮೈಕ್ ಹಿಡಿದು ನನ್ನನ್ನು ಭ್ರಷ್ಟ ಎಂದು ಕರೆದರು. ನಾನು ಯಾವತ್ತೂ ಶಾಸಕನ ಜೊತೆ ಸೇರಿಕೊಂಡಿಲ್ಲ. ಶಾಸಕರು ನನ್ನ ಕಾರ್ಯವೈಖರಿಯನ್ನು ಮೆಚ್ಚಿ ಶ್ಲಾಘನೆ ಮಾಡಿದ್ದರು ಅಷ್ಟೇ” ಎಂದು ಹೇಳಿದರು.
“ಒಂದು ವರ್ಷದ ಕಾಲ ಹಗಲು ರಾತ್ರಿ ಕೋರ್ಟ್ ಕಚೇರಿಗಳ ಸುತ್ತಲೇ ತಿರುಗುವ ಪರಿಸ್ಥಿತಿ ನಿರ್ಮಾಣ ಮಾಡಿದರು. 80ನೇ ವಯಸ್ಸಿನಲ್ಲಿ ಜನರಿಗೆ ಈ ರೀತಿಯ ತೊಂದರೆ ಕೊಡೋದು ಸರಿಯೇ ಇನ್ನೊಬ್ಬರ ಮೇಲೆ ಕೇಸ್ ಹಾಕು, ಜೈಲಿಗೆ ಕಳುಹಿಸು ಅನ್ನೋದು ರಾಜಕಾರಣ ಅಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ವಿರುದ್ಧ ಕೊಲೆ ಯತ್ನದ ಪ್ರಕರಣ ದಾಖಲಿಸುವಂತೆ ಮಾಡಲಾಗಿದೆ ಎಂದು ಆರೋಪಿಸಿದ ಅವರು, “ಗಿರೀಶ್ ಅವರ ಕೈಯಲ್ಲಿ, ಅವರ ತಾಯಿ ತಂದೆಯ ಮೂಲಕ ದೂರು ಕೊಡಿಸಿ, ಕತ್ತಿ ಹಿಡಿದು ಬಂದ, ಕಾರು ಗುದ್ದಿಸಲು ಯತ್ನಿಸಿದ ಎಂದು ಎಫ್ಐಆರ್ ದಾಖಲಿಸಿದರು. ವಾಟ್ಸಪ್ ಚಾಟ್ಗಳ ಮೂಲಕ ನನ್ನ ಅವಹೇಳನ ಮಾಡಿಸಿದರು. ನಾನು ನಿಮಗೆ ಏನು ತಪ್ಪು ಮಾಡಿದ್ದೆ ” ಎಂದು
ಪ್ರಶ್ನಿಸಿದರು.
ತಾವು ಕಾಂಗ್ರೆಸ್ ಪಕ್ಷದ ಪರವಾಗಿ ಹಿಂದಿನ ಚುನಾವಣೆಯಲ್ಲಿ ದುಡಿದು 17 ಸದಸ್ಯರನ್ನು ಗೆಲ್ಲಿಸಲು ಶ್ರಮಿಸಿದ್ದಾಗಿ ಹೇಳಿದ ಅವರು, “ರಾತ್ರಿ 3 ಗಂಟೆಯವರೆಗೂ ಫೋನ್ ಮಾಡಿ ಕಾರ್ಯಕರ್ತರನ್ನು ಎಬ್ಬಿಸಿ ಕೆಲಸ ಮಾಡಿಸಿದ್ದೇನೆ. ಒಂದೊAದು ವಾರ್ಡಿನಲ್ಲಿ ಕಾರ್ಯಕರ್ತರ ಬಳಗ ನಿರ್ಮಿಸಿದ್ದೇವೆ. ನೀವು ಒಬ್ಬರೇ ಕಾರಣ ಅಲ್ಲ, ನಮ್ಮ ಶ್ರಮವೂ ಇದೆ” ಎಂದು ಹೇಳಿದರು.
“ಇನ್ನಾದರೂ ಒಳ್ಳೆಯ ಬುದ್ಧಿ ಕಲಿಯಿರಿ. ಇನ್ನೊಬ್ಬರಿಗೆ ತೊಂದರೆ ಕೊಡಬೇಡಿ. ನಿಮ್ಮ ಸಹಚರರಿಗೆ ಬುದ್ಧಿ ಹೇಳಿ. ಇನ್ನೂ ಏನಾದರೂ ಚಾಲೆಂಜ್ ಇದ್ದರೆ ಮಾಡಿ, ಅದನ್ನು ಎದುರಿಸಲು ನಾನು ಸಿದ್ಧನಿದ್ದೇನೆ” ಎಂದು ಎಚ್ಚರಿಕೆ ನೀಡಿದರು.
“ಹಿಂದೆಯೂ ಇದೇ ಮಾತು ಹೇಳಿದ್ದೆ. ಯಾವ ಕಾನೂನು ಹೋರಾಟ ಬಂದರೂ ಫೇಸ್ ಮಾಡಲು ಸಿದ್ಧನಿದ್ದೇನೆ. ಈಗಲೂ ಓಪನ್ ಚಾಲೆಂಜ್ ಕೊಡುತ್ತೇನೆ. ಏನು ಮಾಡಬೇಕೋ ಮಾಡಿ, ಅದಕ್ಕೆ ಉತ್ತರ ಕೊಡುತ್ತೇನೆ” ಎಂದರು.
ಮುAದಿನ ದಿನಗಳಲ್ಲಿ ವಾರ್ಡ್ ಸಮಸ್ಯೆಗಳು ಹಾಗೂ ಬೇಲೂರು ನಗರದ ಸಣ್ಣಪುಟ್ಟ ಸಮಸ್ಯೆಗಳ ಪರಿಹಾರಕ್ಕೆ ಹಗಲು ರಾತ್ರಿ ಶ್ರಮಿಸುವುದಾಗಿ ಹೇಳಿದರು.
.ಅಕ್ರಮ್ ಅವರನ್ನು ಅಧ್ಯಕ್ಷರನ್ನಾಗಿ ಮಾಡ್ತೀವಿ ಎಂದು ಹಿಂದೆಯೇ ಹೇಳಿದ್ದೇವೆ. ಶಿವರಾಮಣ್ಣವರ ಅವಶ್ಯಕತೆ ಇಲ್ಲದೇನೇ ಅಕ್ರಮ್ ಅಧ್ಯಕ್ಷರಾಗುತ್ತಾರೆ. ಮುಂದಿನ ಸೋಮವಾರ ಅವರಿಗೆ ನಾವು ಸಂಪೂರ್ಣ ಬೆಂಬಲ ಕೊಡುತ್ತೇವೆ. ಅವರಿಗಾಗಿ ನಾನು ಹಾಕಿದ್ದ ಕೇಸನ್ನೂ ವಾಪಸ್ ಪಡೆದಿದ್ದೇನೆ. ನಮ್ಮ ಸ್ನೇಹಿತ ಅಕ್ರಮ್ ಅಧ್ಯಕ್ಷರಾಗಬೇಕು ಅನ್ನೋದೇ ನಮ್ಮ ಉದ್ದೇಶ.”
ಇದು ಶಿವರಾಮಣ್ಣವರ ವಿರುದ್ಧದ ರಾಜಕೀಯ ಹೋರಾಟ. ಒಂದು ವರ್ಷದಿಂದ ಅದನ್ನೇ ಮಾಡುತ್ತಿದ್ದೇವೆ. ಅವರು ಹಿರಿಯರು ಎಂದು ಗೌರವದಿಂದ ಸಮಾಧಾನವಾಗಿದ್ದೇವೆ. ಆದರೆ ಇವತ್ತಿನವರೆಗೂ ಕರೆದು ಎರಡು ಮಾತು ಆಡಿಲ್ಲ. ಅವರ ಸಹವಾಸವೂ ಬೇಡ. ಅವರು ಏನು ಮಾಡ್ತಾರೋ ಅದಕ್ಕೆ ಉತ್ತರ ಕೊಡುತ್ತೇವೆ.”
ನನ್ನ ಐದು ವರ್ಷದ ಅವಧಿಯವರೆಗೆ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ. ನಂತರ ಯಾವ ದಾರಿ ಸರಿಯೆಂದು ವಾರ್ಡ್ನ ಸ್ನೇಹಿತರು, ಬೆಂಬಲಿಗರು ಏನು ಹೇಳ್ತಾರೋ ಅದನ್ನು ಗಮನಿಸಿ ನಿರ್ಧಾರ ಮಾಡುತ್ತೇನೆ. ನಾಲ್ಕೈದು ತಿಂಗಳ ನಂತರ ಅದರ ಬಗ್ಗೆ ತೀರ್ಮಾನ ಮಾಡುತ್ತೇನೆ.”ಎಂದರು.
ಹೈಕೋರ್ಟ್ ತಡೆಯಾಜ್ಞೆಯಿಂದ ಸತ್ಯಕ್ಕೆ ಜಯ: ಪುರಸಭೆ ನಿಕಟಪೂರ್ವ ಅಧ್ಯಕ್ಷ ಎ ಆರ್ ಅಶೋಕ್



