ದೆಹಲಿ: ನೀಟ್ ಪರೀಕ್ಷೆ ಅಕ್ರಮ ಕುರಿತು ಸಂಸತ್ನಲ್ಲಿ ಪ್ರತಿಪಕ್ಷಗಳು ತೀವ್ರವಾಗಿ ವಿರೋಧಿಸಿ ಚರ್ಚೆಗೆ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಇಂದು ಸಹ ಗದ್ದಲ ಮುಂದುವರಿದು ಉಭಯ ಕಲಾಪಗಳ ಸದನವನ್ನು ಕಲಾಪ ಮುಂದೂಡಲಾಗಿದೆ. ಇಂದು ಬೆಳಿಗ್ಗೆ ನಿಗಧಿತ ಸಮಯಕ್ಕೆ ಲೋಕಸಭೆ ಕಲಾಪ ಆರಂಭವಾಗುತ್ತಿದ್ದAತೆ ಸಭಾಧ್ಯಕ್ಷ ಓಂಬಿರ್ಲಾ ಅವರು ತಮ್ಮ ಪೀಠಕ್ಕೆ ಬರುತ್ತಿದ್ದಂತೆ ಕಪ್ಪುಪಟ್ಟಿ ಧರಿಸಿ ಬಂದಿದ್ದ ಕಾಂಗ್ರೆಸ್, ಎಸ್ಪಿ ಮತ್ತಿತರ ವಿಪಕ್ಷಗಳ ಸಂಸದರು ಸಭಾಧ್ಯಕ್ಷರ ಪೀಠದ ಮುಂದಿನ ಬಾವಿಗೆ ಬಂದು ಚರ್ಚೆಗೆ ಆಗ್ರಹಿಸಿ ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗತೊಡಗಿದರು.
ಈ ಸಂದರ್ಭದಲ್ಲಿ ಸಭಾಧ್ಯಕ್ಷ ಓಂಬಿರ್ಲಾ ಅವರು ವಿಪಕ್ಷಗಳ ಬೇಡಿಕೆಯಂತೆ ಚರ್ಚೆಗೆ ಸರ್ಕಾರ ಮುಂದಾಗಿದೆ. ತಾವು ಸಹ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ತಿಳಿಸಿದ ಅವರು, ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ಮಾಡಿಕೊಡಲು ಕೋರಿದರು. ಇದಕ್ಕೆ ಒಪ್ಪದ ಧರಣಿನಿರತರು ಮೊದಲಿಗೆ ತಮ್ಮ ಬೇಡಿಕೆಯಂತೆ ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿದರು. ತಮ್ಮ ಒತ್ತಾಯವನ್ನು ಸಡಿಲಿಸದ ವಿಪಕ್ಷ ಸದಸ್ಯರು ಚರ್ಚೆಗೆ ಅವಕಾಶ ಕೋರಿದಾಗ ಗದ್ದಲ ಜೋರಾದ ಪರಿಣಾಮ ಕಲಾಪವನ್ನು ಮಧ್ಯಾಹ್ನ 12ಗಂಟೆಗೆ ಮುಂದೂಡಲಾಯಿತು. ಇತ್ತ ರಾಜ್ಯಸಭೆಯಲ್ಲೂ ಇದೇ ವಿಷಯ ಪ್ರಸ್ತಾಪಿಸಿ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವಿದ್ಯಾರ್ಥಿಗಳ ಮೇಲೆ ನಡೆದ ಲಾಠಿಚಾರ್ಜ್ ವಿಷಯ ಪ್ರಸ್ತಾಪಿಸುತ್ತಿದ್ದಂತೆ ವಿಪಕ್ಷಗಳ ಸದಸ್ಯರು ಜೋರಾಗಿ ಕೂಗುತ್ತಾ ಗದ್ದಲವೆಬ್ಬಿಸಿದ್ದರಿಂದ ಕಲಾಪ 12ಗಂಟೆಗೆ ಮುಂದೂಡಲಾಯಿತು. ನಿನ್ನೆ ಮತ್ತು ಮೊನ್ನೆ ಇದೇ ವಿಷಯದ ಬಗ್ಗೆ ಚರ್ಚೆಗೆ ಅವಕಾಶವೂ ಕೋರಿ ಪ್ರತಿಪಕ್ಷಗಳು ಒತ್ತಾಯಿಸಿದ್ದರಿಂದ 2ದಿನಗಳ ಕಲಾಪವೂ ನಡೆಯಲಿಲ್ಲ. ಇಂದು ಸಹ ಅದೇ ಪರಿಸ್ಥಿತಿ ಮುಂದುವರಿಯುವುದು ನಿನ್ನೆ ಮತ್ತು ಇಂದು ವಿಪಕ್ಷಗಳ ಜತೆ ಸರ್ಕಾರ ನಡೆಸಿದ ಮಾತುಕಗೆ ಇದುವರೆಗೂ ಫಲಪ್ರದವಾಗಿಲ್ಲ. ಜಂತರ್ಮಂತರ್ ಬಳಿ ನಡೆದ ಲಾಠಿಚಾರ್ಜ್, ಅಶ್ರುವಾಯು ಘಟನೆಯನ್ನು ಖಂಡಿಸಿ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದ ಎದುರು ರಾಹುಲ್ ಸೇರಿದಂತೆ ಹಲವರು ಪ್ರತಿಭಟನೆ ನಡೆಸಿದರು. ಆ ಸಂದರ್ಭದಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರು ನಡುವೆ ನಡುವಿನ ನೂಕಾಟ ತಳ್ಳಾಟದಲ್ಲಿ ರಾಹುಲ್ ಅವರ ಮೂಗಿನಲ್ಲಿ ರಕ್ತಸೋರಿಕೆಯಾಗಿತ್ತು. ಈ ಬಗ್ಗೆಯೂ ಚರ್ಚೆಗೆ ಆಗ್ರಹಿಸಲಾಗಿದೆ. ಇಂದು ದೇಶದ್ಯಾಂತ ಕಾಂಗ್ರೆಸ್ ಕಾರ್ಯಕರ್ತರು ಈ ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದಾರೆ. ಸಂಸತ್ ಹೊರಗೆ ವಿಪಕ್ಷಗಳ ಬಹುತೇಕ ನಾಯಕರು ಮತ್ತು ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ಧರಣಿ ನಡೆಸಿದ್ದಾರೆ.
ಇಂದೂ ಗದ್ದಲಕ್ಕೆ ಕಲಾಪ ಬಲಿ ಸಂಸತ್ ಉಭಯ ಸದನಗಳ ಕಲಾಪ ಮುಂದೂಡಿಕೆ



