ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು, ಮಾನವ ಹಕ್ಕುಗಳ ಮತ್ತು ಮಾಹಿತಿ ಹಕ್ಕು ವಿಭಾಗದ ಕಾರ್ಯದರ್ಶಿಯಾಗಿ ಖ್ಯಾತ ವಕೀಲರಾದ ಡಾ||ಅಮರನಾಥ್ ಬಿ.ಆರ್.ನೇಮಕರಾದರು, ರಾಜ್ಯಾಧ್ಯಕ್ಷರು, ಶಾಸಕರಾದ ಎ.ಎಸ್.ಪೊನ್ನಣ್ಣರವರು ಆದೇಶ ಪತ್ರ ನೀಡಿದರು.
ಡಾ||ಬಿ.ಆರ್.ಅಮರನಾಥ್ ರವರು ಮಾತನಾಡಿ ಕಾಂಗ್ರೆಸ್ ಪಕ್ಷ ಬಡವರ, ಶೋಷಿತರ ಮತ್ತು ದೀನದಲಿತರ ಪರ ಹೋರಾಟ ಮಾಡುವ ಪಕ್ಷ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರು, ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರು ಜನತೆಗೆ ನೀಡಿದ 5ಗ್ಯಾರಂಟಿ ಯೋಜನೆಗಳು ರಾಜ್ಯದ ಪ್ರತಿ ಕುಟುಂಬಗಳಿಗೆ ತಲುಪಿದೆ.
ರಾಜ್ಯದ ಪ್ರತಿಯೊಬ್ಬ ನಾರಿಕರಿಗೂ ಸರಿಸಮಾನವಾಗಿ ಬಾಳಿ ಬದುಕುವ ಹಕ್ಕು ಇದೆ.
ಕಾನೂನು, ಮಾನವ ಹಕ್ಕುಗಳ ಉಲ್ಲಂಘನೆಯಾದರೆ ನಮ್ಮ ಹೋರಾಟ ನಿರಂತರ ಬಡವರಿಗೆ ನ್ಯಾಯ ಒದಗಿಸುವ ಕಾರ್ಯ ನಮ್ಮದು. 5ಗ್ಯಾರಂಟಿ ಯೋಜನೆಗಳನ್ನು ಪ್ರತಿ ಮನೆಗಳಿಗೆ ತಲುಪಿಸುವುದು ಮತ್ತು ಪರಿಶೀಲನೆ ಮಾಡವುದು.ಅರ್ಹ ಫಲಾ ನುಭವಿಗಳನ್ನು ಗುರುತಿಸಿ, ಸರ್ಕಾರದ ಯೋಜನೆ ಲಾಭ ತಲುವಂತೆ ಮಾಡಲಾಗುವುದು.ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತ್ಯಧಿಕ ಲೋಕಸಭಾ ಕ್ಷೇತ್ರ ಗೆಲುವು ಸಾಧಿಸಲು ಶ್ರಮಿಸುವುದಾಗಿ ಎಂದು ಹೇಳಿದರು.