ದೇವನಹಳ್ಳಿ; ಅಂಬೇಡ್ಕರವರು ಹಾಕಿಕೊಟ್ಟ ಮಾರ್ಗಗಳನ್ನು ನಾವೆಲ್ಲರೂ ಅನುಸರಿಸಬೇಕು. ಜೊತೆಗೆ ಮುಂದಿನ ಪೀಳಿಗೆಗೂ ಪರಿಚಯಿಸಬೇಕು. ಅವರ ವಿಚಾರಧಾರೆಯನ್ನು ಅರ್ಥೆಸಿಕೊಂಡು ಮೆಲಕು ಹಾಕುವಂತಾಗಬೇಕು ಎಂದು ಅಣ್ಣೇಶ್ವರ ಪಿ ಡಿ ಓ ಗಂಗರಾಜು ತಿಳಿಸಿದರು. ದೇವನಹಳ್ಳಿ ತಾಲೂಕಿನ ಅಣ್ಣೇಶ್ವರ ಗ್ರಾಮ ಪಂಚಾಯಿತಿಯಲ್ಲಿ ಬಾಬಾ ಸಾಹೇಬ್ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಂಬೇಡ್ಕರ್ ರವರು ಸಂವಿಧಾನ ಪ್ರಮುಖ ಶಿಲ್ಪಿಯಾಗಿದ್ದಾರೆ. ಇವರು ಕಾನೂನು ತಜ್ಞರಾಗಿ, ಬರವಣಿಗೆ ಗಾರರಾಗಿ, ಸ್ಕಾಲರ್ ಹಾಗೆ ಸಂಪಾದಕರಾಗಿ ತತ್ವ ಜ್ಞಾನಿಯಾಗಿ ಹೀಗೆ ಅನೇಕ ವಿಷಯಗಳಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿದವರಾಗಿದ್ದಾರೆ. ಅಂಬೇಡ್ಕರ್ ಅವರು ತಮ್ಮದೇ ಆದಂತಹ ಅನುಭವವನ್ನು ಹೊಂದಿದ್ದರು. ಸುಮಾರು 50,000 ಪುಸ್ತಕದ ಭಂಡಾರವನ್ನು ಹೊಂದಿದ್ದ ಪ್ರಪಂಚದ ಏಕೈಕ ವ್ಯಕ್ತಿ ಯಾಗಿದ್ದಾರೆ. ಬಡತನದ ಕುಲುಮೆಯಲ್ಲಿ ಬೆಂದು ಕಷ್ಟಪಟ್ಟು ತನ್ನ ಸ್ವಂತ ಪರಿಶ್ರಮದಿಂದ ಓದಿ ಇಡೀ ವಿಶ್ವವೇ ಕ್ಷೀರವಾಗಿ ನಮಿಸುವ ಸಂವಿಧಾನವನ್ನು ರಚಿಸಿದ ಮಹಾನ್ ವ್ಯಕ್ತಿ ಯನ್ನು ಪಡೆದಿರುವ ಭಾರತೀಯರಾದ ನಾವು ಪುಣ್ಯವಂತರು ಎಂದು ಹೇಳಿದರು. ಈ ವೇಳೆಯಲ್ಲಿ ಅಣ್ಣೇಶ್ವರ ಗ್ರಾಪಂ ಮಾಜಿ ಅಧ್ಯಕ್ಷೆ ಉಮಾ ಮುನಿರಾಜು, ಉಪಾಧ್ಯಕ್ಷ ಮುನಿರಾಜಪ್ಪ, ಸದಸ್ಯರಾದ ಚಂದ್ರಶೇಖರ್, ವೆಂಕಟೇಶ್, ಹಾಗೂ ಅಣ್ಣೇಶ್ವರ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಇದ್ದರು.



