ಮಳವಳ್ಳಿ: ಬಾಬು ಜಗಜೀವನರಾಮ್ ಅವರು ಸೃಷ್ಟಿಸಿದ ಹಸಿರು ಕ್ರಾಂತಿಯಿಂದ ದೇಶದಲ್ಲಿ ಬಡವರಿಗೆ ಆಹಾರದ ಕೊರತೆ ದೂರವಾಯಿತು. ಹಸಿರು ಕ್ರಾಂತಿಯ ಹರಿಕಾರ ಬಾಬೂಜಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಜೀವನಕ್ಕೂ ಆದ್ಯತೆ ಕೊಟ್ಟಿದ್ದರಿಂದ ಇಂದು ಸಮಾಜದಲ್ಲಿ ಆಹಾರ ಪದಾರ್ಥಗಳ ಕೊರತೆಯಿಲ್ಲ ಎಂದು ಶಾಸಕ ನರೇಂದ್ರಸ್ವಾಮಿ ರವರು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಪಕ್ಷದಲ್ಲಿ ಆಯೋಜನೆ ಮಾಡಲಾಗಿದ್ದ ಡಾ.ಬಾ ಬು ಜಗಜೀವನರಾಮ್ ಜಯಂತಿಉದ್ಘಾಟಿಸಿ ಮಾತನಾಡಿ, ಅಧಿಕಾರ ಮತ್ತು ಆಸ್ತಿಯಿಂದ ಗಳಿಸಲಾಗದ ಕೀರ್ತಿಯನ್ನು ಸೇವೆ ಹಾಗೂ ತ್ಯಾಗದಿಂದ ಗಳಿಸಬಹುದೆಂದು ಬಾಬು ಜಗಜೀವನರಾಮ್ರ ಬದುಕು ತಿಳಿಸಿ ಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜು ಟೌನ್ ಅಧ್ಯಕ್ಷ ದೊಡ್ಡಯ್ಯ ಮಾಜಿ ಟೌನ್ ಅಧ್ಯಕ್ಷ ದೇವರಾಜು ಪುರಸಭೆ ಸದಸ್ಯರಾದ ಶಿವ ಸ್ವಾಮಿ ಮಾಜಿ ಪುರಸಭೆ ಸದಸ್ಯ ಕೃಷ್ಣ ಸಮುದಾಯದ ಮುಖಂಡರಾದ ಮಳವಳ್ಳಿ ಮಂಜುನಾಥ್ ಸತೀಶ್ ಪ್ರಮೀಳಾ ಕುಮಾರ್ ಬಾಗೋ ಕುಮಾರ್ ಮುಟ್ಟನಹಳ್ಳಿ ಅಚ್ಚಿತ್ ರಾಜಪ್ಪ ಬೀಜಿಪುರ ಮಂಜು ಸಿದ್ದರಾಜು ಆಣೆ ಕೋಪಲು ಚಿಕ್ಕಲಿಂಗಯ್ಯ ಹಲವರು ಪಾಲ್ಗೊಂಡಿದ್ದರು.