ಹಾಸನ: ಭಾರತ್ ಸ್ಕೌಟ್ಸ್ & ಗೈಡ್ಸ್ ಮಕ್ಕಳಲ್ಲಿ ನೈತಿಕ ಬೆಳವಣಿಗೆ, ಶೀಲಸಂವರ್ಧನೆ, ಕ್ರಿಯಾಶೀಲ ಪ್ರಜಾಪ್ರಭುತ್ವದ ಅರಿವು, ನಾಯಕತ್ವದ ತರಬೇತಿ, ಸಾಮುದಾಯಿಕ ಸೇವೆ, ಆತ್ಮಸ್ಥೈರ್ಯ ಹಾಗೂ ಸೇವಾ ಮನೋಭಾವನೆಯನ್ನು ಬೆಳಸುತ್ತದೆ ಎಂದು ಶಿಬಿರದ ನಾಯಕಿ ಬಿ.ಎಲ್. ಮಮತ ಅಭಿಪ್ರಾಯಪಟ್ಟರು.
ಅವರು ಭಾರತ್ ಜಿಲ್ಲಾ ಸಮುದಾಯ ಭವನದಲ್ಲಿ ಭಾರತ್ ಸ್ಕೌಟ್ಸ್ & ಗೈಡ್ಸ್ ಕರ್ನಾಟಕ ರಾಜ್ಯಸಂಸ್ಥೆ ಹಮ್ಮಿಕೊಂಡಿದ್ದ ಮುಂದುವರಿದ ತರಬೇತಿ ಶಿಬಿರದಲ್ಲಿ ಮಾತನಾಡಿ ಸ್ಕೌಟಿಂಗ್ ಚಳವಳಿಯ ಇತಿಹಾಸ, ಧ್ಯೇಯ, ಮೂಲಭೂತ ಉದ್ದೇಶ, ಸಿದ್ದಾಂತ ಹಾಗೂ ವಿಧಾನ, ಪ್ರತಿಜ್ಞೆ ಮತ್ತು ನಿಯಮದ ಒಂಭತ್ತು ಅಂಶಗಳು ಪ್ರವೇಶ ಶಿಕ್ಷಣದಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ವಿಶ್ವ ಸ್ಕೌಟ್ ಮತ್ತು ವಿಶ್ವ ಗೈಡ್ ಅಂಗಸAಸ್ಥೆಗಳು ತಮ್ಮದೇಯಾದ ಧ್ವಜಗಳನ್ನು ಹೊಂದಿದ್ದು ಇವು ವಿಶ್ವ ಭ್ರಾತೃತ್ವ, ಮುಕ್ತ ಪ್ರವೇಶದ ಸಂಕೇತಗಳಾಗಿವೆ. ಸ್ಕೌಟ್ಸ್ ಗೈಡ್ಸ್ ಚಳವಳಿ ಮಕ್ಕಳಿಗಾಗಲೀ ಅಥವಾ ಶಿಕ್ಷಕರಿಗಾಗಲೀ ವೈಯಕ್ತಿಕ ಮಾತ್ರ ಸೀಮಿತವಾಗದೇ ಕೌಟುಂಬಿಕ, ಸಾಮುದಾಯಿಕ, ಸಾಮಾಜಿಕ ಸ್ವಾಸ್ಥ್ಯತೆಯನ್ನು ಎತ್ತಿಹಿಡಿಯುತ್ತದೆ ಎಂದರು.
ಹಿರಿಯ ಗೈಡ್ ಶಿಕ್ಷಕಿ ಎಚ್.ಜಿ. ಕಾಂಚನಮಾಲ ಮಾತನಾಡಿ ಇಂಗ್ಲೆAಡಿನ ಮುಖ್ಯ ಸೇನಾಧಿಕಾರಿ ರಾಬರ್ಟ್ ಸ್ಟೀಫನ್ಸನ್ ಸ್ಮಿತ್ ಬೇಡನ್ ಪೊವೆಲ್ ಅವರು 1907 ರಲ್ಲಿ ಲಂಡನ್ನಿನಲ್ಲಿ ಮಕ್ಕಳಲ್ಲಿ ಶಿಸ್ತು, ದೇಶಪ್ರೇಮ, ನಾಯಕತ್ವದ ಗುಣಗಳನ್ನು ವೃದ್ಧಿಸಲು ಸ್ಕೌಟ್ಸ್ ಚಳವಳಿ ಆರಂಭಿಸಿದರು. 1909 ರಲ್ಲಿ ಬೇಡನ್ ಪೊವೆಲ್ ಅವರ ಸಹೋದರಿ ಆಗ್ನೇಸ್ ಬೇಡನ್ ಪೊವೆಲ್ ಅವರ ನಾಯಕತ್ವದಲ್ಲಿ ಹುಡುಗಿಯರಿಗಾಗಿ ಗರ್ಲ್ ಸ್ಕೌಟ್ ಪ್ರಾರಂಭಿಸಿ ತದನಂತರ ಅದು ಗರ್ಲೆ್ಗೈಡ್ ಆಗಿ ಜಾಗತಿಕವಾಗಿ ವಿಕಸನವಾಯಿತು ಎಂದರು. ಹಿರಿಯ ಫ್ಲಾಕ್ ಲೀಡರ್ ಸೋಫಿಯಾ ಫರ್ನಾಂಡೀಸ್ ಮಾತನಾಡಿ ರಾಷ್ಟ್ರಧ್ವಜವು ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳಿಂದ ಕೂಡಿದ್ದು, ಇವು ಶೌರ್ಯ, ಶಾಂತಿ ಹಾಗೈ ಸಮೃದ್ಧಿ, ನಡುವೆ 24 ಅರಗಳ ಕಡುನೀಲಿ ಅಶೋಕಚಕ್ರವಿದ್ದು ಇದು ಪ್ರಗತಿಯ ಸಂಕೇತವಾಗಿದೆ. ಭಾರತ್ ಸ್ಕೌಟ್ಸ್ ಗೈಡ್ ಧ್ವಜವು ಕಡು ನೀಲಿ ಬಣ್ಣದಿಂದ ಕೂಡಿದ್ದು ವಿಶ್ವ ಸಹೋದರತೆಯ ಸಂಕೇತವಾಗಿದೆ ಎಂದರು.
ಈ ಸಂಧರ್ಬದಲ್ಲಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ.ಪ್ರಿಯಾAಕ, ಜಿಲ್ಲಾ ಗೈಡ್ ಆಯುಕ್ತೆ ಜಯಾರಮೇಶ್, ಆಲೂರು ತಾಲ್ಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್.ಉಪ್ಪಾರ್ ಸೇರಿದಂತೆ ಹಲವರಿ ಉಪಸ್ಥಿತರಿದ್ದರ
ಭಾರತ್ ಸ್ಕೌಟ್ಸ್ & ಗೈಡ್ಸ್ ಮಕ್ಕಳಲ್ಲಿ ನೈತಿಕ ಬೆಳವಣಿಗೆ, ಶೀಲಸಂವರ್ಧನೆಯನ್ನುಂಟು ಮಾಡುತ್ತದೆ : ಶಿಬಿರದ ನಾಯಕಿ ಬಿ.ಎಲ್. ಮಮತ



