ಕೋಲಾರ: ಬದಲಾದ ಆಹಾರಪದ್ದತಿಯಿಂದ ವಿವಿಧ ರೋಗಗಳಿಗೆ ತುತ್ತಾಗುತ್ತಿರುವ ಈ ಸಂದರ್ಭದಲ್ಲಿ ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯ ರಕ್ಷಣೆಗೆ ಸಹಕಾರಿಯಾಗಿವೆ ಎಂದು ಕರ್ನಾಟಕ ಪ್ಯಾರಾ ಒಲಂಫಿಕ್ಸ್ ಅಸೋಷಿಯೇಷನ್ ಜಿಲ್ಲಾಧ್ಯಕ್ಷ ಕೆ.ಜಯದೇವ್ ತಿಳಿಸಿದರು.ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಗುರುವಾರ ಕರ್ನಾಟಕ ಅಥ್ಲೇಟಿಕ್ ಅಸೋಸಿಯೇಷನ್ ಕೋಲಾರ ಘಟಕದಿಂದ ಹಮ್ಮಿಕೊಂಡಿದ್ದ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡುತ್ತಿದ್ದರು.ಪೋಷಕರು ಮಕ್ಕಳನ್ನು ಅಂಕ ಗಳಿಸುವ ಯಂತ್ರಗಳನ್ನಾಗಿಸಿ ಕ್ರೀಡೆಗಳಿಂದ ದೂರ ಮಾಡುವುದು ಸರಿಯಲ್ಲ ಎಂದ ಅವರು, ಕ್ರೀಡೆಗಳಿಂದಲೂ ಬದುಕು ಉಜ್ವಲವಾಗುತ್ತದೆ ಎಂದು ತಿಳಿಸಿ, ಉನ್ನತ ಶಿಕ್ಷಣ, ಉದ್ಯೋಗದಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ ಇದೆ ಎಂದು ತಿಳಿಸಿದರು.ಪಠ್ಯದಿಂದ ಮಾತ್ರವೇ ಸಾಧನೆ ಸಾಧ್ಯ ಎಂಬ ಮಾತು ಬೇಡ, ಕ್ರೀಡೆಗಳಲ್ಲೂ ಉತ್ತಮ ಸಾಧನೆಯೊಂದಿಗೆ ರಾಜ್ಯ,ರಾಷ್ಟ್ರ, ಅಂತರರಾಷ್ಟ್ರೀಯ ಖ್ಯಾತಿ ಗಳಿಸಿರುವ ಅನೇಕ ಕ್ರೀಡಾಪಟುಗಳು ನಮ್ಮ ಮುಂದೆ ಇದ್ದಾರೆ ಎಂದು ತಿಳಿಸಿದರು.ಅಥ್ಲೇಟಿಕ್ಸ್ನಲ್ಲಿ ಸಾಧನೆ ಸುಲಭದ ಮಾತಲ್ಲ, ಒಲಂಫಿಕ್ಸ್ನಲ್ಲಿ ಯಾವ ದೇಶ ಎಷ್ಟು ಚಿನ್ನದ ಪದಕ ಗಳಿಸುತ್ತದೆ ಎಂಬುದನ್ನು ಕಾತರದಿಂದ ನೋಡುತ್ತೇವೆ, ಆದರೆ ನಮ್ಮ ದೇಶ ಇಲ್ಲಿನ ಜನಸಂಖ್ಯೆಗೆ ತಕ್ಕಂತೆ ನಿರೀಕ್ಷಿತ ಸಾಧನೆ ಮಾಡುತ್ತಿಲ್ಲ ಎಂಬ ನೋವು ಇದೆ ಎಂದರು.ಅಥ್ಲೇಟಿಕ್ಸ್ ಅಸೋಸಿಯೇಷನ್ನಿಂದ ಏ.15 ರಿಂದ ಆರಂಭವಾzದೀ ಬೇಸಿಗೆ ಶಿಬಿರದಲ್ಲಿ 22 ದಿನಗಳ ಅಥ್ಲೆಟಿಕ್ಸ್ನಲ್ಲಿ ಸಾಧಕರಾಗಲು ಇಚ್ಚೆಇರುವ ಮಕ್ಕಳನ್ನು ಪ್ರೋತ್ಸಾಹಿಸಿ ಸಿದ್ದಗೊಳಿಸುವ ಕೆಲಸ ಮಾಡಿದ್ದು, ಬೇಸಿಗೆ ರಜೆಯಲ್ಲಿ ಕಾಲಹರಣ ಮಾಡುವ ಬದಲಿಗೆ ನೀವು ಬಂದು ಇಲ್ಲಿ ಕ್ರೀಡಾ ಕಲಿಕೆಯಲ್ಲಿ ಭಾಗವಹಿಸಿದ್ದೀರಿ ಎಂದು ಅಭಿನಂದಿಸಿದರು.ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳು ಉತ್ತಮ ಕ್ರೀಡಾ ಸಾಧಕರಾಗಿ ಒಲಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸುವ ಶಕ್ತಿ, ಅದೃಷ್ಟ ಪಡೆದುಕೊಳ್ಳಿ, ನಿಮ್ಮ ಕ್ರೀಡಾ ಅಭ್ಯಾಸ ನಿರಂತರವಾಗಿ ಮುಂದುವರೆಸಿ ಎಂದು ಹಾರೈಸಿದರು.ಕರ್ನಾಟಕ ಅಥ್ಲೇಟಿಕ್ಸ್ ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ, ನಿಮ್ಮ ಶಿಕ್ಷಣಕ್ಕೆ ಯಾವುದೇ ಚ್ಯುತಿ ಬಾರದ ರೀತಿಯಲ್ಲಿ ಅಥ್ಲೇಟಿಕ್ಸ್ ಕ್ರೀಡಾಪಟುಗಳಾಗಿ ಹೊರಹೊಮ್ಮಬಹುದು, ನಿತ್ಯ ಬೆಳಗ್ಗೆ ವ್ಯಾಯಾಮ ಮಾಡುವ ನೀವು ನಿಮಗಿಷ್ಟವಾದ ಕ್ರೀಡೆಯಲ್ಲಿ ಆ ಸಮಯವನ್ನು ತೊಡಗಿಸಿಕೊಳ್ಳಿ ನಿರಂತರ ಅಭ್ಯಾಸ ಮಾಡಿ ಸಾಧಕರಾಗಿ ಹೊರಹೊಮ್ಮಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಥ್ಲೇಟಿಕ್ಸ್ ಅಸೋಸಿನೇಷನ್ ಅಧ್ಯಕ್ಷ ಜಗನ್ನಾಥ್, ಗುಂಪು ಆಟಗಳಿಗಿಂತ ಹೆಚ್ಚು ಪ್ರಾಧಾನ್ಯತೆಯನ್ನು ಅಥ್ಲೆಟಿಕ್ಸ್ ಹೊಂದಿದೆ, ಇದರ ಅಭ್ಯಾಸವನ್ನು ನೀವೇ ಏಕಾಂಗಿಯಾಗಿಯೂ ನಿತ್ಯ ಮುಂದುವರೆಸಬಹುದು ಆದರೆ ಗುಂಪು ಕ್ರೀಡೆಗಳಿಗೆ ಒಂದಷ್ಟು ಕ್ರೀಡಾಪಟುಗಳ ಸಹಕಾರ ಅಗತ್ಯವಿರುತ್ತದೆ ಎಂದು ತಿಳಿಸಿ, ನಿರಂತರ ಅಭ್ಯಾಸ ಮಾಡಿದರೆ ಖಂಡಿತಾ ನೀವು ರಾಜ್ಯ,ರಾಷ್ಟ್ರ,ಅಂತರರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಬಹುದು ಎಂದರು.
22 ದಿನಗಳ ಅಥ್ಲೇಟಿಕ್ಸ್ ಬೇಸಿಗೆ ಶಿಬಿರದಲ್ಲಿ ಶಿಬಿರಾರ್ಥಿಗಳು ಹಾಗೂ ಪೋಷಕರು ತಮ್ಮ ಅನಿಸಿಕೆ ಹಂಚಿಕೊAಡು ಜಿಲ್ಲಾ ಕೇಂದ್ರದಲ್ಲಿ ಇದೊಂದು ಉತ್ತಮ ಬೆಳವಣಿಗೆಯಾಗಿದೆ, ಅಥ್ಲೇಟಿಕ್ಸ್ನಲ್ಲಿಸಾಧನೆ ಮಾಡುವ ಬಯಕೆ ಇರುವ ಮಕ್ಕಳಿಗೆ ಈ ಶಿಬಿರ ನೆರವಾಗಿದೆ ಎಂದು ತಿಳಿಸಿ ಧನ್ಯವಾದ ತಿಳಿಸಿದರು.ಇದೇ ಸಂದರ್ಭದಲ್ಲಿ ಶಿಬಿರದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಯಿತು.ಸಮಾರೋಪ ಸಮಾರಂಭದಲ್ಲಿ ಕ್ರೀಡಾಪಟು ಗೌಸ್ಖಾನ್,ರಾಜೇಶ್,ಇಸ್ಮೈಲ್, ನಾಗೇಶ್,ನಾರಾಯಣಸ್ವಾಮಿ, ರವಿ ಎಂಟರ್ಪ್ರೈಸಸ್ ನಾಗರಾಜ್,ಗೋಪಾಲಕೃಷ್ಣ, ಡೋಮನಿಕ್,ರಾಮು,ರಾಜೇಶ್, ಟಿವಿ ಕ್ಯಾಮರಾಮನ್ ಮದನ್ ಮತ್ತಿತರರರಿದ್ದರು.
ಅಥ್ಲೇಟಿಕ್ಸ್ ಅಸೋಸಿಯೇಷನ್ನ ಬೇಸಿಗೆ ಶಿಬಿರದ ಸಮಾರೋಪ ಕ್ರೀಡೆಗಳಿಂದ ಮಾನಸಿಕ,ದೈಹಿಕ ಆರೋಗ್ಯ ವೃದ್ದಿ ಸಾಧ್ಯ-ಕೆ.ಜಯದೇವ್



