ಕೋಲಾರ: ದಲಿತ ಸಮುದಾಯದ ಏಳಿಗೆಗಾಗಿ ಹಿರಿಯ ದಲಿತ ಮುಖಂಡರ ಚಳುವಳಿಯ ಹೆಜ್ಜೆಗುರುತುಗಳನ್ನು ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಬೇಕು. ಅವರು ನಡೆದು ಬಂದ ದಾರಿಯಲ್ಲಿ ನಾವು ಎಲ್ಲರೂ ನಡೆಯಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ತಿಳಿಸಿದರು
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ದಲಿತ ಸಂಘಟನೆಗಳ ಸಂಯುಕ್ತ ರಂಗದ ವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತ ಹಾಗೂ ಹಿರಿಯ ದಲಿತ ಮುಖಂಡ ಡಾ ಎಂ ಚಂದ್ರಶೇಖರ್ ರವರ ಸಾಧನೆಯ 25 ನೇ ವರ್ಷದ ಬೆಳ್ಳಿ ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ದಲಿತ ಸಮುದಾಯದ ವಿರುದ್ದ ನಡೆದ ದೌರ್ಜನ್ಯ ದಬ್ಬಾಳಿಕೆಗಳು ಸೇರಿದಂತೆ ತುಳಿತಕ್ಕೆ ಒಳಗಾಗಿರುವ ಸಮುದಾಯದ ಧ್ವನಿಯಾಗಿ ರಾಜ್ಯಾದ್ಯಂತ ಸುತ್ತಿ ಸಂಘಟನೆಯನ್ನು ಕಟ್ಟಿದ್ದಾರೆ ಅವರ ಆಶಯಗಳನ್ನು ಯುವಕರು ಹಾಗೂ ಇವತ್ತಿನ ದಲಿತ ಸಂಘಟನೆಗಳ ನಾಯಕರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಜಿಲ್ಲೆಯಲ್ಲಿ ಸುಮಾರು 90ರ ದಶಕದಲ್ಲಿ ಒಡೆದು ಹೋಗಿದ್ದ ದಲಿತ ಸಂಘಟನೆಗಳನ್ನು ಒಂದೇ ವೇದಿಕಗೆ ತರುವ ನಿಟ್ಟಿನಲ್ಲಿ 1995 ರಲ್ಲಿ ದಲಿತ ಸಂಘಟನೆಗಳ ಸಂಯುಕ್ತ ರಂಗವನ್ನು ಸ್ಥಾಪಿಸಲಾಯಿತು ಅದರ ಮೂಲಕ ಹಕ್ಕುಗಳಿಗಾಗಿ ಹೋರಾಟ ರೂಪಿಸಲಾಗಿದೆ ಎಂ ಚಂದ್ರಶೇಖರ್ ಸಹ ಸಮುದ್ರದ ಅಲೆಗಳ ವಿರುದ್ದ ದಿಕ್ಕಿನಲ್ಲಿ ಚಲಿಸುವಂತೆ ಸಮಾಜದಲ್ಲಿನ ವಿರೋಧದ ನಡುವೆಯೂ ವಿರುದ್ದ ದಿಕ್ಕಿನಲ್ಲಿ ಸಂಘಟನೆಯನ್ನು ಕಟ್ಟಿದ್ದಾರೆ ಹೋರಾಟ ಜೊತೆಗೆ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕವೂ ಕಾಂತ್ರಿಯನ್ನು ಸೃಷ್ಟಿಸಿದ್ದಾರೆ ಎಂದರು
ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಮಾತನಾಡಿ ಸಮಾಜದಲ್ಲಿ ದಲಿತರ ನೋವುಗಳ ಚಿತ್ರಣ ಜಾಸ್ತಿಯಾಗಿದೆ. ನಲುವುಗಳ ಬಗ್ಗೆ ಹೆಚ್ಚು ತೋರಿಸಬೇಕಾಗಿದೆ. ಪ್ರತಿ ಹೋರಾಟದಲ್ಲಿ ಬದ್ದತೆ ಇದ್ದರೆ ಅಷ್ಟೇ ಭವಿಷ್ಯವನ್ನು ಕಾಣಬಹುದಾಗಿದೆ. ಸಮಾಜದ ಬಗ್ಗೆ ಯೋಚನೆ ಮಾಡಿ ಹತ್ತು ಜನರ ಕಣ್ಣೀರು ಒರೆಸುವ ಕೆಲಸವಾಗಬೇಕು. ತಮ್ಮೊಳಗಿನ ಸಣ್ಣತನವನ್ನು ಮುಕ್ತಗೊಳಿಸಿ ಸಮಾಜದಲ್ಲಿ ಬದಲಾವಣೆ ತರಬೇಕಾಗಿದೆ. ಘನತೆಯುಕ್ತ ಬದುಕು ನಮ್ಮದಾಗಬೇಕು. ಅವಕಾಶಗಳಿವೆ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಭಿನ್ನಾಭಿಪ್ರಾಯ, ತಾರತಮ್ಯವನ್ನು ಬಿಟ್ಟು ಸಂಘಟಿತ ಹೋರಾಟಕ್ಕೆ ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಐಎಎಸ್ ಅಧಿಕಾರಿ ಡಿ.ತಂಗರಾಜ್ ವಹಿಸಿದ್ದರು. ಡಯಟ್ ಪ್ರಾಂಶುಪಾಲ ನಾರಾಯಣಸ್ವಾಮಿ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನಾ ಬಂಗಾರಪೇಟೆ ವೃತ್ತದಿಂದ ರಂಗಮAದಿರದ ವರೆಗೂ ಎಂ ಚಂದ್ರಶೇಖರ್ ಅವರನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ಮೂಲಕ ಕರೆತರಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಎಸ್ ವೆಂಕಟೇಶ್, ಮಾಜಿ ಸದಸ್ಯ ಅರುಣ್ ಪ್ರಸಾದ್, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕಿ ವಿಜಯಲಕ್ಷ್ಮೀ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ದಲಿತ ಸಂಘಟನೆಗಳ ಮುಖಂಡರಾದ ಡಿಪಿಎಸ್ ಮುನಿರಾಜು, ಮೇಡಿಹಾಳ ಮುನಿಅಂಜಿನಪ್ಪ, ಸಾಹುಕಾರ್ ಶಂಕರಪ್ಪ, ಖಾದ್ರಿಪುರ ಬಾಬು ಭಾಗವಹಿಸಿದ್ದರು.
ದಲಿತ ಮುಖಂಡರ ಹೆಜ್ಜೆ ಗುರುತುಗಳು ಯುವ ಸಮುದಾಯಕ್ಕೆ ಮಾದರಿಯಾಗಬೇಕು: ಎಂ.ಎಲ್.ಸಿ ಅನಿಲ್ ಕುಮಾರ್ ಸಲಹೆ



