ಕೋಲಾರ: ಮಾವಿಗೆ ಇಂದು ಅಥವಾ ನಾಳೆ ಬೆಂಬಲ ಬೆಲೆ ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಸಂಸದ ಮಲ್ಲೇಶ್ ಬಾಬು ತಿಳಿಸಿದ್ದಾರೆ.
ಮಾವಿಗೆ ಬೆಂಬಲ ಬೆಲೆ ಆಗ್ರಹಿಸಿ ನಡೆದ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ ಅವರು, ತಾವು ಹಾಗೂ ತಮ್ಮ ಪಕ್ಷದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಾವಿಗೆ ಬೆಂಬಲ ನೀಡುವಂತೆ ಬೇಡಿಕೆಯಿಟ್ಟು ಮನವಿ ಮಾಡಿದ್ದೆವು. ಅದರಂತೆ ಇಂದು ಅಥವಾ ನಾಳೆ ಒಳಗಾಗಿ ಬೆಂಬಲ ಬೆಲೆ ಘೋಷಿಸಲಾಗುವುದು. ಕೇಂದ್ರ ಕೃಷಿ ಸಚಿವರು ಭೂಪಾಲ್ಗೆ ಹೋಗಿದ್ದಾರೆ. ಅಲ್ಲಿಂದ ಮರಳಿದ ಕೂಡಲೇ ಬೆಲೆ ಘೋಷಿಸುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಮಾವಿಗೆ ಇಂದು ಅಥವಾ ನಾಳೆ ಬೆಂಬಲ ಬೆಲೆ ಘೋಷಣೆ



