ಇದು ಹಳೆಯ ಧಾರಾವಾಹಿಯ ಮುಂದುವರಿದ ಭಾಗವಲ್ಲ; ಬದಲಿಗೆ ಇಂದಿನ ತಲೆಮಾರಿನ ಯುವಮನಸ್ಸುಗಳ ಅಹಂಕಾರ ಮತ್ತು ಸ್ವಾಭಿಮಾನದ ನಡುವೆ ನಡೆಯುವ ಹೈ-ವೋಲ್ಟೇಜ್ ಕಥೆಯಾಗಿದೆ.
“ಇಬ್ಬರು ಕಣ್ಣುಂದೆ ಬಂದ್ರೆ ಸಹಿಸೋಕಾಗಲ್ಲ, ಕಾಣದೇ ಹೋದ್ರೆ ಬದುಕೋಕೇ ಆಗಲ್ಲ!” ಎಂಬ ವಿಶಿಷ್ಟ ಪ್ರೇಮಬಂಧದ ಎಳೆ ಈ ಕಥೆಯಲ್ಲಿದೆ.
ಈ ಬಾರಿಯ ‘ಅಗ್ನಿಸಾಕ್ಷಿ’ ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿತ್ವಗಳ ಎರಡು ಧ್ರುವಗಳ ನಡುವಿನ ಸಂಘರ್ಷ. ಪೋಸ್ಟರ್ಗಳಲ್ಲಿ ಅನಾವರಣಗೊಂಡಿರುವAತೆ ಪಾತ್ರಗಳ ಧೀಮಂತಿಕೆ ಹೀಗಿದೆ:
ಅಗ್ನಿ (ನಾಯಕ)
ಅವನು ಎಲ್ಲವನ್ನೂ ಧ್ವಂಸ ಮಾಡೋ ಬಿರುಗಾಳಿ ಅಷ್ಟೇ ಅಲ್ಲ, ತನ್ನ ಅಹಂಗೆ ಎದುರು ನಿಂತರೆ ‘ಅವನು ಎಲ್ಲವನ್ನೂ ಸುಟ್ಟು ಹಾಕೋ ಬೆಂಕಿ’ ಸಂಪತ್ತು ಮತ್ತು ವಿಪರೀತ ಗರ್ವದ ಹಿನ್ನೆಲೆಯುಳ್ಳ ಈ ಹಠಮಾರಿ ಉದ್ಯಮಿಯ ಪಾತ್ರಕ್ಕೆ ಗಾಯಕ ಹಾಗೂ ನಟ ಶಮಂತ್ ಬ್ರೋ ಗೌಡ ಜೀವ ತುಂಬಿದ್ದಾರೆ.
ಸಾಕ್ಷಿ (ನಾಯಕಿ)
ಅವಳು ಎಲ್ಲವನ್ನೂ ತಂಪಾಗಿಸೋ ತಂಗಾಳಿ ಆದರೆ ಅನ್ಯಾಯದ ವಿರುದ್ಧ ನಿಲ್ಲುವಾಗ, ಕತ್ತಲ ಹಾದಿಗೆ ‘ಅವಳು ದಾರಿ ತೋರಿಸೋ ಬೆಳಕು’. ಎಷ್ಟೇ ಕಷ್ಟ ಬಂದರೂ ತನ್ನ ಆತ್ಮಗೌರವವನ್ನು ಬಿಟ್ಟುಕೊಡದ ಈ ಧೀಮಂತ ಯುವತಿಯ ಪಾತ್ರದಲ್ಲಿ ನಟಿ ವರ್ಷಿಣಿ ಗೌಡ ನಟಿಸುತ್ತಿದ್ದಾರೆ. ಹಸೆಮಣೆಯಲ್ಲಿ ಇವರಿಬ್ಬರ ಹಣೆಬರಹ ಹೇಗೆ ಒಂದಾಗಲಿದೆ, ಈ ಬೆಂಕಿ ಮತ್ತು ತಂಗಾಳಿಯ ನಡುವಿನ ಅಹಂ ಹಾಗೂ ಆದರ್ಶಗಳ ಹೋರಾಟ ಎತ್ತ ಸಾಗಲಿದೆ ಎನ್ನುವುದೇ ಇಡೀ ಸರಣಿಯ ಜೀವಾಳ.
ತಾಂತ್ರಿಕ ವರ್ಗ ಮತ್ತು ಪ್ರಸಾರದ ವಿವರ
ಈ ಹಿಂದಿನ ಸೂಪರ್ ಹಿಟ್ `ಅಗ್ನಿಸಾಕ್ಷಿ’ ಧಾರಾವಾಹಿಯ ಬರಹಗಾರರಾದ ಹ್ಯಾರಿಸ್ ಅವರೇ ಈ ಕಥೆಯನ್ನು ಬರೆಯುತ್ತಿದ್ದಾರೆ. ಇನ್ನು ಈ ಧಾರಾವಾಹಿಯು ಅತ್ಯುನ್ನತ ಮೇಕಿಂಗ್ ಹಾಗೂ ಶ್ರೀಮಂತ ದೃಶ್ಯವೈಭವದಿಂದ ಕೂಡಿರಲಿದೆ.
ಕಲರ್ಸ್ ಕನ್ನಡ `ಅಗ್ನಿಸಾಕ್ಷಿ’!`ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಜೂನ್ 8ರಿಂದ ಸಂಜೆ 7:00 ಗಂಟೆಗೆ `ಅಗ್ನಿಸಾಕ್ಷಿ’ ಪ್ರಸಾರ



