ಬೆಂಗಳೂರು: ಪ್ರತಿಷ್ಠಿತ ಬ್ರಾಂಡ್ಗಳ ನಕಲು ಮಾಡಿ ಬಟ್ಟೆ ತಯಾರಿಸುತ್ತಿದ್ದ ಕಾರ್ಖಾನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ದಾಳಿ ನಡೆಸಿ ಪ ರಿಶೀಲನೆ ನಡೆಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ನಕಲಿ ಬ್ರಾಂಡ್ ಬಟ್ಟೆಗಳನ್ನು ಜಪ್ತಿ ಮಾಡಿದ್ದಾರೆ.
ಸುಮಾರು 1,50 ಕೋಟಿ ರೂಪಾಯಿ ಮೌಲ್ಯದ ಜನಪ್ರಿಯ ಬ್ರಾಂಡ್ ಗಳಾದ ಲೆವಿಸ್, ಲ್ಯಾಕೋಸ್ಟ್, ಆರ್ಎಲ್-ಪೋಲೊ, ಗ್ಯಾಂಟ್, ಪೆಪೆ ಜೀನ್ಸ್ ಮತ್ತು ಯುಎಸ್ ಪೋಲೋಗಳ 6.500 ನಕಲಿ ಉಡುಪು ಗಳನ್ನು ವಶಪಡಿಸಿಕೊಂಡಿದ್ದಾರೆ. ಪಟೇಲ್ಎಕ್ಸ್ ಪೋರ್ಟ್ ಮತ್ತು ಆರ್ ಬಿ ಗಾರ್ಮೆಂಟ್ಸ್ ಮಾಲೀಕ ಭರತ್ ಹಾಗೂ ಉಳಿದ ಮಾಲೀಕರ ಮೇಲೆ ಎಫ್ಐಆರ್ ದಾಖಲಾಗಿದೆ.
ಭರತ್ನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಕಲಿ ಬಟ್ಟೆಗಳನ್ನ ಅರ್ಮನಿ, ಬರ್ಬರಿ, ಗ್ಯಾಂಟ್ ಸೇರಿ ದಂತೆ ಪ್ರತಿಷ್ಠಿತ ಬ್ರಾಂಡ್ಗಳ ಅಸಲಿ ಎಂದು ಶೋ ರೂಮ್ ಸೇರಿದಂತೆ ಬಟ್ಟೆ ಮಳಿಗೆಗಳಿಗೆ ಆರೋಪಿಗಳು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.