ಚಳ್ಳಕೆರೆ: ಮಳೆ ಕೊರತೆಯಿಂದ ಬೆಳೆ ಕಳೆದುಕೊಂಡು ಕಂಗಾಲಾಗಿರುವ ರೈತರಿಗೆ,ಸೂಕ್ತ ಬೆಳೆ ವಿಮೆ ಹಾಗೂ ಪರಿಹಾರ ಒದಗಿಸುವಲ್ಲಿ ಸರ್ಕಾರ ದ ಸಂಪೂರ್ಣ ವಿಫಲವಾಗಿದೆ.ಮತ್ತು ರಸಗೊಬ್ಬರ ಮಳಿಗೆಗಳಲ್ಲಿ ರೈತ ರನ್ನು ಹಗಲು ದರೋಡೆ ಮಾಡುತ್ತಿರುವುದನ್ನು ಖಂಡಿಸಿ,ನಗರದ ಪ್ರವಾ ಸಿ ಮಂದಿರದ ಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ರೆಡ್ಡಿ ಹಳ್ಳಿ ವೀರಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮಳೆಯಿಲ್ಲದೆ ಬೈಲುಸೀಮೆಯಲ್ಲಿ ಶೇಂಗಾ,ತೊಗರಿ ಸೇರಿದಂತೆ ಅಪಾರ ಪ್ರಮಾಣದ ಬೆಳೆಗಳು ನೆಲಕಚ್ಚಿವೆ. ಬೆಳೆ ವಿಮೆ ಮತ್ತು ನಷ್ಟ ಪರಿಹಾರ ಕ್ಕಾಗಿ ಆಗ್ರಹಿಸಿ ಕಳೆದ ಒಂದೂವರೆ, ಎರಡು ತಿಂಗಳಿಂದ ತಾಲೂಕು ಕ ಚೇರಿಗಳ ಮುಂದೆ ಧರಣಿ, ಉಪವಾಸ ಸತ್ಯಾಗ್ರಹಗಳನ್ನು ನಡೆಸಿ ಮನ ವಿ ಸಲ್ಲಿಸಲಾಗುತ್ತಿದೆ. ಆದರೂ ಅಧಿಕಾರಿಗಳಾಗಲಿ,ಜನ ಪ್ರತಿನಿಧಿಗಳಾ ಗಲಿ ರೈತರ ಕೂಗಿಗೆ ಸ್ಪಂದಿಸುತ್ತಿಲ್ಲ.ಇನ್ನೊAದೆಡೆ ದೇವನಹಳ್ಳಿ ತಾಲೂಕಿ ನಲ್ಲಿ 2846 ಎಕರೆ ಭೂಮಿಯನ್ನು ಅಕ್ರಮವಾಗಿ ವಶಪಡಿಸಿ ಕೊಳ್ಳಲು ಮುಂದಾಗಿದ್ದು,ಅಲ್ಲಿನ ರೈತರು ಯುಗಾದಿ ಹಬ್ಬವನ್ನು ಬೀದಿಯಲ್ಲೇ ಆ ಚರಿಸಿ,ಎರಡು ತಿಂಗಳಿAದ ಹೋರಾಟಮಾಡುತ್ತಿದ್ದರೂ ಸಹ ಸರ್ಕಾರದ ಕಣ್ಣು ತೆರೆದಿಲ್ಲ ಎಂದು ಕಿಡಿಕಾರಿದರು.
ರಾಜ್ಯದಲ್ಲಿ ಅನ್ನದಾತರ ಸ್ಥಿತಿ ಶೋಚನೀಯವಾಗಿದೆ. 2022-23ನೇ ಸಾಲಿನಲ್ಲಿ 1049, 2023-24ರಲ್ಲಿ 1257, 2024-25ರಲ್ಲಿ 13 94 ಹಾಗೂ 2025-26ನೇ ಸಾಲಿನಲ್ಲಿ 681 ಸೇರಿದಂತೆ ಕೇವಲ ನಾ ಲ್ಕು ವರ್ಷದ ಅವಧಿಯಲ್ಲಿ ಬರೋಬ್ಬರಿ 4,171 ರೈತರು ಸಾಲಬಾಧೆ ಹಾಗೂ ಬೆಳೆ ನಷ್ಟದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಷ್ಟು ದೊಡ್ಡ ಮ ಟ್ಟದಲ್ಲಿ ರೈತರು ಪ್ರಾಣ ಕಳೆದುಕೊಂಡು ಅವರ ಕುಟುಂಬಗಳು ಬೀದಿ ಪಾಲಾಗುತ್ತಿದ್ದರೂ,ಆತ್ಮಹತ್ಯೆ ತಡೆಯುವ ಶಕ್ತಿ ಇಲ್ಲದ ಈ ಸರ್ಕಾರಗಳಿ ಗೆ ಇಲ್ಲ.ಯಾವ ಪುರುಷಾರ್ಥಕ್ಕೆ ಸರ್ಕಾರಗಳು ಇವೆ ಎಂದು ಖಾರವಾಗಿ ಪ್ರಶ್ನಿಸಿದರು.
36,766 ಜನ ರೈತರು ಬೆಳೆ ವಿಮೆ ಕಟ್ಟಿದ್ದಾರೆ. ಪ್ರಸ್ತುತ ಮುಂಗಾರು ಸ ಮೀಪಿಸುತ್ತಿದ್ದು, ರೈತರು ಮುಂದಿನ ಕೃಷಿ ಚಟುವಟಿಕೆಗಳಿಗೆ ಸಿದ್ಧತೆ ಮಾ ಡಿಕೊಳ್ಳಬೇಕಿದೆ. ವಿಮೆ ಕಟ್ಟಿರುವ ರೈತರು ಪರಿಹಾರಕ್ಕಾಗಿ ಚಾತಕ ಪಕ್ಷಿಗ ಳಂತೆ ಕಾಯುತ್ತಿದ್ದಾರೆ. ದೇಶದ ಆಹಾರ ಭದ್ರತೆ ಕಾ ಪಾಡಲು ಅನ್ನದಾತ ಬದುಕಬೇಕು. ಹೀಗಾಗಿ ಸರ್ಕಾರ ಕೂಡಲೇ ಬೆಳೆ ನಷ್ಟ ಪರಿಹಾರ ಬಿಡು ಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಒಂದೆಡೆ ಪ್ರಕೃತಿ ಮುನಿಸಿಕೊಂಡಿದ್ದರೆ, ಮತ್ತೊಂದೆಡೆ ರಸಗೊಬ್ಬರ ಮಳಿ ಗೆಗಳು ರೈತರನ್ನು ಅಕ್ಷರಶಃ ಸುಲಿಯುತ್ತಿವೆ. ಪ್ರತಿ ರಸಗೊಬ್ಬರ ಪ್ಯಾಕೆಟ್ ಗೆ ನಿಗದಿತ ದರಕ್ಕಿಂತ 70 ರಿಂದ 80 ರೂಪಾಯಿ ಹೆಚ್ಚುವರಿಯಾಗಿ ವ ಸೂಲಿ ಮಾಡಲಾಗುತ್ತಿದೆ. ಈ ಕುರಿತು ಕೃಷಿ ಇಲಾಖೆ ಅಧಿಕಾರಿಗಳ ಗಮ ನಕ್ಕೆ ತರಲಾಗಿದ್ದು,ರೈತರಿಂದ ಅಕ್ರಮವಾಗಿ ಪಡೆದ,ಹೆಚ್ಚುವರಿಯಾಗಿ ಪ ಡೆದ ಹಣವನ್ನು ಅವರ ಮನೆಗೇ ತೆರಳಿ ವಾಪಸ್ ಕೊಡಿಸಬೇಕು. ಇಲ್ಲ ವಾದಲ್ಲಿ ಅಂತಹ ಅಂಗಡಿಗಳಿಗೆ ನಾವೇ ಬೀಗಮುದ್ರೆ ಹಾಕುತ್ತೇವೆ.
ಬಹುತೇಕ ರಸಗೊಬ್ಬರ ಅಂಗಡಿಗಳ ಮುಂದೆ ದರಪಟ್ಟಿ ಅಳವಡಿಸಿಲ್ಲ. ಇದರಿಂದ ಮುಗ್ಧ ರೈತರಿಗೆ ನಿರಂತರವಾಗಿ ವಂಚನೆಯಾಗುತ್ತಿದೆ. ಕಂದಾ ಯ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು,ಮುಂದಿನ ಒಂದು ವಾರದೊಳಗೆ ಕಡ್ಡಾಯವಾಗಿ ಎಲ್ಲಾ ಮಳಿಗೆಗಳ ಮುಂದೆ ದರಪಟ್ಟಿ ಅಳವಡಿಸುವಂತೆ ಕಠಿಣ ಕ್ರಮ ಕೈಗೊಳ್ಳಬೇಕು.ತಪ್ಪಿದಲ್ಲಿ ಮುಂಬರುವ ದಿನಗಳಲ್ಲಿ ರೈತರು ಹಾಗೂ ಕಾರ್ಮಿಕರು ಒಗ್ಗೂಡಿ ಬೃಹ ತ್ ಮಟ್ಟದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚ ರಿಕೆ ನೀಡಿದರು.
ಈ ಸುದ್ದಿಘೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಹಿರಿಯ ಉಪಾಧ್ಯಕ್ಷ ರೆ ಡ್ಡಿಹಳ್ಳಿ ವೀರಣ್ಣ,ಕೆ.ಆರ್.ಎಸ್ ಪಕ್ಷದ ಮಹೇಶ್,ಮಾರುತಿ, ತಾಲೂಕು ಅಧ್ಯಕ್ಷ ರಾಜಣ್ಣ,ಪ್ರಧಾನ ಕಾರ್ಯದರ್ಶಿ ಬಂಡೆ ತಿಪ್ಪೇಸ್ವಾಮಿ,ಚನ್ನಕೇಶ ವ ತಿಪ್ಪೇಸ್ವಾಮಿ,ವರವಿ ನಾಗರಾಜ,ಪರಮಾತ್ಮ ಸ್ವಾಮಿ,ಬೊಮ್ಮಣ್ಣ, ಈ ರಸ್ವಾಮಿ,ಜಯಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಳೆ ಪರಿಹಾರ ವಿಳಂಬ ರಸಗೊಬ್ಬರ ಅಂಗಡಿಗಳಿಂದ ಸುಲಿಗೆ:ಸರ್ಕಾರದ ವಿರುದ್ಧ ರೈತರ ಆಕ್ರೋಶ



