ಮಾಜಿ ಸಚಿವ, ಹಾಲಿ ಶಾಸಕ ಮುನಿರತ್ನ ಅವರು ಅತ್ಯಾಚಾರ ಪ್ರಕರಣದಲ್ಲಿ ಸೆರೆವಾಸ ಅನುಭವಿಸಿ, ಈಗ ಜಾಮೀನಿನ ಮೇಲೆ ಹೊರಗಿದ್ದಾರೆ ಎಂಬ ವಿಚಾರ ಗೊತ್ತಿರುವುದೇ. ಅವರು ಪ್ರಭಾವಿ ಶಾಸಕರಾಗಿ,ಮಾಜಿ ಸಚಿವರಾಗಿ ನನ್ನ ವಿರುದ್ಧವಾಗಿ ಷಡ್ಯಂತ್ರ ಮಾಡುತ್ತಿದ್ದಾರೆ, ರಾಜಕೀಯವಾಗಿ ತೇಜೋವಧೆ ಮಾಡುತ್ತಿದ್ದಾರೆ ಎಂದು ಎಷ್ಟೇ ಬಾರಿ ತಿಳಿಸಿದ್ರೂ, “ಬೆಂಕಿ ಇಲ್ಲದೇ ಹೊಗೆ ಆಡಲು ಸಾಧ್ಯವೇ ಇಲ್ಲ” ಎಂಬ ಗಾದೆ ಮಾತಿನಂತೆ ಒಂದಲ್ಲ ಒಂದು ದಿನ ಎಲ್ಲವೂ ಜಗಜ್ಜಾಹೀರು ಆಗಲೇಬೇಕು ಅಲ್ಲವೇ? ಈಗ ನಾವು ಹೇಳಲು ಹೊರಟಿರುವುದು ಕೂಡ ಅದೇ ವಿಚಾರವನ್ನೇ.
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರು ಮಹಿಳೆಯೊಬ್ಬರಿಗೆ ತಾವು ಸಚಿವರಾಗಿದ್ದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪವನ್ನು ಎದುರಿಸಿದ್ದರು. ಬೆಂಗಳೂರಿನ ವಿಕಾಸಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ಅವರು ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರೂ ಎಂಬ ಆರೋಪ ಮಾಡಿದ್ದ ಮಹಿಳೆಯನ್ನು ಪೊಲೀಸರು ಸ್ಥಳ ಪರಿಶೀಲನೆಗೆಂದು ಕರೆತಂದಿದ್ರು. ಅಂದು ಅದೇ ಪ್ರಕರಣದಲ್ಲಿ ಸಚಿವ ಮುನಿರತ್ನರ ಗನ್ಮ್ಯಾನ್ ಆಗಿದ್ದ ವಿಜಯ್ಕುಮಾರ್ ಎಂಬಾತನ ಮೇಲೂ ಎಫ್ಐಆರ್ ಆಗಿತ್ತು. ವಿಜಯ್ಕುಮಾರ್ ಪ್ರಕರಣದಲ್ಲಿ ಆರೋಪಿ 5 ನೇ ಸ್ಥಾನದಲ್ಲಿದ್ದರು. ಪ್ರಕರಣದಲ್ಲಿ ಸಚಿವರಾಗಿದ್ದ ಮುನಿರತ್ನ ಬಂಧನವಾದ್ರೆ, ವಿಜಯ್ಕುಮಾರ್ ಅವರು ತಲೆ ಮರೆಸಿಕೊಂಡಿದ್ದರು. ಇತ್ತ ಜಾಮೀನು ಸಿಗುವವರೆಗೂ ಯಾರ ಕೈ ಗೂ ಸಿಗದೇ ತಪ್ಪಿಸಿಕೊಂಡಿದ್ದರು. ಜಾಮೀನು ಸಿಕ್ಕ ಕೂಡಲೇ ಪ್ರತ್ಯಕ್ಷವಾಗಿದ್ದ ವಿಜಯ್ಕುಮಾರ್ಗೆ ಪೊಲೀಸ್ ಇಲಾಖೆ ಪ್ರಕರಣದ ತನಿಖೆ ಎದುರಿಸುತ್ತಜರುವ ಕಾರಣ ಅಮಾನತ್ತಿನ ಶಿಕ್ಷೆಯನ್ನು ಸಹ ನೀಡಿತ್ತು.
ಅದರೆ, ಇದೆಲ್ಲದರ ಮಧ್ಯೆ ಇದೀಗ ಪ್ರಕರಣ ಮಾಸುತ್ತಿರುವ ಬೆನ್ನಲ್ಲೇ ದಿಢೀರ್ ಎಂದು ಬೆಳವಣಿಗೆಯೊಂದು ನಡೆದಿದ್ದು, ಮುನಿರತ್ನರ ಬಳಿ ಗನ್ಯಮ್ಯಾನ್ ಆಗಿದ್ದ ವಿಜಯ್ಕುಮಾರ್ ಅವರು ಬೆಂಗಳೂರಿನ ಆರ್ಎಸ್ಎಸ್ ಪ್ರಧಾನ ಕಚೇರಿ ಕೇಶವ ಕೃಪಾಗೆ ಮುಖ್ಯ ಭದ್ರತಾ ಸಿಬ್ಬಂದಿಯಾಗಿ ನಿಯೋಜನೆಗೊಂಡಿದ್ದಾರೆ. ಆರ್ಎಸ್ಎಸ್ನ ಬಹುಪಾಲು ನಿರ್ಣಯಗಳು, ನಿರ್ಧಾರಗಳು ಆಗುವುದೇ ಈ ಕೇಶವ ಕೃಪಾದ ಕಚೇರಿಯಲ್ಲಿ. ಬಹಳ ಭದ್ರತೆ ಇರುವಂತಹ ಈ ಸ್ಥಳಕ್ಕೆ ವಿಜಯ್ಕುಮಾರ್ ಬಂದಿದ್ದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದ್ದು, ಒಂದೇ ಕಲ್ಲಿನಲ್ಲಿ ಎರಡೆರಡು ಹಕ್ಕಿ ಹೊಡೆಯಲು ಮುನಿರತ್ನರೇ ಮಾಸ್ಟರ್ಪ್ಲಾನ್ ಮಾಡಿದ್ರಾ ಎಂಬ ಅನುಮಾನ ಹುಟ್ಟು ಹಾಕಿದೆ.
ಮುನಿರತ್ನರ ಜೊತೆಗೆ ಗುರುತಿಸಿಕೊಂಡಿದ್ದ ವಿಜಯ್ಕುಮಾರ್, ಇದೀಗ ಅಮಾನತ್ತಿನ ಶಿಕ್ಷೆಯಿಂದ ಹೊರಬಂದಿದ್ದಾರೆ. ಪ್ರಕರಣದಲ್ಲಿ ಆರೋಪಿಯಾಗಿದ್ದ ವಿಜಯ್ಕುಮಾರ್ ಯಾರ ಕೃಪಾಕಟಾಕ್ಷದ ಮೇಲೆ ಈ ಸ್ಥಾನಕ್ಕೆ ಬಂದು ಕುಳಿತಿದ್ದಾರೆ ಎಂಬುದನ್ನು ಹುಡುಕುತ್ತಾ ಹೋದರೆ, ಅದಕ್ಕೆ ಶಾಸಕ ಮುನಿರತ್ನ ಅವರೇ ಶ್ರೀ ರಕ್ಷೆ ಕೊಟ್ಟಿರುವ ಸಾಧ್ಯತೆಗಳು ಹೆಚ್ಚಾಗಿದೆ.
ಒಂದು ಕಡೆ ತಮ್ಮ ಜೊತೆಗಿದ್ದ ಗನ್ಮ್ಯಾನ್ ಪ್ರಕರಣದಲ್ಲಿ ಸಿಲುಕಿಕೊಂಡು ಆತನನ್ನು ಬಿಡಿಸಿದಂತೆ ಆಗುತ್ತದೆ. ಇನ್ನೊಂದು ಕಡೆ ಆತನನ್ನ ಆರ್ಎಸ್ಎಸ್ ಪ್ರಧಾನ ಕಚೇರಿಗೆ ನಿಯೋಜನೆ ಮಾಡಿದ್ರೆ, ಸಂಘ ಪರಿವಾರದಲ್ಲಿ ಏನೇನು ಆಗುತ್ತದೆ?, ಕಚೇರಿಗೆ ಯಾರು ಬರುತ್ತಾರೆ?, ಯಾರು ಹೋಗುತ್ತಾರೆ? ಎಂಬ ವಿಚಾರಗಳು ತಮಗೆ ಬಹಳ ಸಲೀಸಾಗಿ ತಿಳಿಯುತ್ತದೆ. ಹೀಗೆ ಮಾಸ್ಟರ್ಪ್ಲಾನ್ ಮಾಡಿ, ಶಾಸಕ ಮುನಿರತ್ನ ತಮ್ಮ ಗನ್ಮ್ಯಾನ್ ಆಗಿದ್ದ ವಿಜಯ್ಕುಮಾರ್ ಅವರಿಗೆ ಈ ಸ್ಥಾನಕ್ಕೆ ಪ್ರಭಾವ ಬಳಸಿ ಕೂರಿಸಿದ್ದಾರೆ ಎಂಬ ಮಾತುಗಳು ಆರಂಭವಾಗಿದೆ.
ಇನ್ನು ಆರ್ಎಸ್ಎಸ್ ಹೇಳಿ ಕೇಳಿ ಶಿಸ್ತಿಗೆ ಹೆಸರುವಾಸಿ. ಒಬ್ಬ ಭದ್ರತಾ ಸಿಬ್ಬಂದಿ ಆಗಮನವಾಗುತ್ತದೆ ಎಂದರೆ ಅವರ ಪೂರ್ವಪರ ವಿಚಾರಿಸಬೇಕು ಅಲ್ಲವೇ?, ಹೀಗೆ ಕಳಂಕಿತ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಮಾಡಿಕೊಂಡರೆ, ಮುಂದೆ ಹೇಗೆ ಎಂಬ ಮಾತುಗಳು ಈಗ ಹುಟ್ಟಿಕೊಳ್ಳುತ್ತಿವೆ.
ಆರೋಪಿಯನ್ನೇ ಆರ್ಎಸ್ಎಸ್ ಕಚೇರಿಗೆ ಭದ್ರತಾ ಸಿಬ್ಬಂದಿ ಮಾಡಿದ್ದಾರಾ ಶಾಸಕ ಮುನಿರತ್ನ?



