ಕನಕಪುರ: ಈ ಭಾರತ ದೇಶದಲ್ಲಿ ವರ್ಷದ 365 ದಿನ ಮತ್ತು ಪ್ರತಿಕ್ಷಣವೂ ಯಾವುದಾದರೂ ಒಂದು ರೂಪದಲ್ಲಿ ಚರ್ಚಿಸಲ್ಪಡುವ ವ್ಯಕ್ತಿ ವಿಶ್ಲೇಷಣೆಗೆ ಒಳಪಡುವ ವ್ಯಕ್ತಿ ಎಂದರೆ ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ಎಂದು ನಗರದ ದಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಹೇಳಿದರು. ನಗರದ ತಮ್ಮ ಟ್ರಸ್ಟ್ ಕಛೇರಿಯಲ್ಲಿ ಆಯೋಜಿಸಿದ್ದ ಡಾ. ಬಾಬಾ ಸಾಹೇಬ್ ರ ಜಯಂತಿ ಆಚರಣೆಯಲ್ಲಿ ಬಾಬಾ ಸಾಹೇಬ್ ರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿದ ಅವರು ನಮ್ಮ ದೇಶದ ಪ್ರಜೆಗಳು ಪ್ರಜಾ ಪ್ರಭುತ್ವವಿಲ್ಲದೆ ರಾಜಪ್ರಭುತ್ವದ ಆಳ್ವಿಕೆಯಲ್ಲಿ 694 ಸಂಸ್ಥಾನಗಳಾಗಿ ಹರಿದು ಹಂಚಿ ಹೋಗಿ ತಮಗೆ ಯಾವುದೇ ಗುರುತು ಹೆಗ್ಗು ರುತುಗಳಿಲ್ಲದೆ ಬಳಲುತ್ತಿದ್ದ ಸಂದರ್ಭದಲ್ಲಿ ಇಡೀ ದೇಶದಲ್ಲಿದೆ ಎಲ್ಲಸಂಸ್ಥಾನಗಳನ್ನು ಒಟ್ಟುಗೂಡಿಸಿ ಸಂವಿಧಾನದಅಡಿಯಲ್ಲಿ ತಂದು ಭಾರತದ ಸಂವಿಧಾನದ ಪೂರ್ವ ಪೀಠಿಕೆಯ ಮೊದಲ ಸಾಲಿನಲ್ಲಿ ಭಾರತದ ಪ್ರಜೆಗಳು ನಾವುಎಂಬ ಪದವನ್ನಉದ್ಘೋಷಿಸಿ ಭಾರತೀಯ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳಿಗೆ ಸರ್ವೋಚ್ಚ ಸ್ಥಾನವನ್ನು ಕಲ್ಪಿಸಿ ಕೊಟ್ಟವರು ಡಾ ಅಂಬೇಡ್ಕರ್ ಅವರು ಎಂದರು. ಜಾಗತಿಕ ಮಟ್ಟದಲ್ಲಿ ನೂರ ತೊಂಬತ್ತೆರಡು ರಾಷ್ಟ್ರಗಳ ಪೈಕಿ ಯಾವುದೇ ದೇಶದ ದಾಸ್ಯಕ್ಕೆ ಒಳಪಡದಂತೆ ಗುಲಾಮಗಿರಿಗೆ ಭಾರತ ದೇಶ ಸಿಲುಕದಂತೆ ನಮ್ಮ ದೇಶ ವನ್ನುಸಾರ್ವಭೌಮ ಸ್ವಾತಂತ್ರ÷್ಯದ ನಾಡನ್ನಾಗಿಸಿದವರು ಡಾ. ಅಂಬೇಡ್ಕರ್ ಇಂತಹ ಮೇರು ವ್ಯಕ್ತಿತ್ವವನ್ನು ಜಗತ್ತಿನ ಮೂಲಭೂತವಾದಿ ರಾಷ್ಟ್ರಗಳು ಸಹ ಅದರ ಪರಮೋಚ್ಚ ನಾಯಕರುಗಳಾದ ಉತ್ತರ ಕೋರಿಯಾದ ಕಿಂಗ್ ಜಾನ್ ಎಂಬ ನಾಯಕರು ಸಹ ಜಗತ್ತಿನ ನೈಜ ಪ್ರಜಾಪ್ರಭುತ್ವ ವಾದಿಯಾದ ಅಂಬೇಡ್ಕರ್ ರವರ ಪಾದವನ್ನು ನನ್ನ ಕಣ್ಣೀರಿನಿಂದ ತೊಳೆಯಬೇಕೆಂದು ಎನಿಸಿದೆ ಎಂದು ಬಣ್ಣಿಸಿರುವ ರೀತಿ ಅಚ್ಚರಿ ಮೂಡಿಸುವಂಥದ್ದುಹಾಗೆಯೇ ಅಂಬೇಡ್ಕರ್ ಹುಟ್ಟಿದ ದಿನ ಏಪ್ರಿಲ್ 14 ನ್ನ ಅಮೆರಿಕ ದೇಶದ ನ್ಯೂಯಾರ್ಕ್ ನಗರ ಡಾ.ಅಂಬೇಡ್ಕರ್ ದಿನವೆಂದು ಘೋಷಿಸಿದೆ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಅವರ ಪುತ್ತಳಿ ನಿರ್ಮಿಸಿ ಜ್ಞಾನದ ದಿನವೆಂದು ಘೋಷಿಸಿದೆ ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವವಾದಿ ನೆಲ್ಸನ್ ಮಂಡೇಲಾ ರವರು ಅಂಬೇಡ್ಕರ್ ಅವರನ್ನು ಕುರಿತು ಭಾರತದ ಮಟ್ಟಿಗೆ ಇಬ್ಬರು ಸೂರ್ಯರಿದ್ದಾರೆ ಒಬ್ಬ ಸೂರ್ಯ ಬೆಳಿಗ್ಗೆಯಿಂದ ಸಂಜೆಯವರೆಗೂ ಬೆಳಗಿದರೆ ಅದರಾಚೆಗೆ ರಾತ್ರಿ ಯೂ ಕೂಡ ಎಚ್ಚರವಾಗಿ ಭಾರತ ದೇಶವನ್ನು ಅಲ್ಲಿನ ದುರ್ಬಲ ಜನರ ಬದುಕನ್ನು ಕಾರ್ಮಿಕರ ಬಾಳನ್ನು ಮಹಿಳೆಯರು ಮತ್ತು ನೊಂದ ಜನರಿಗೆ ನ್ಯಾಯ ಒದಗಿಸಿ ಭಾರತದ ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ಪತ್ರಿಕ ರಂಗ ಮತ್ತು ಪ್ರತಿ ಪ್ರಜೆಯ ಬದುಕನ್ನು ಬೆಳಗುತ್ತಿರುವ ಸೂರ್ಯ ಎಂಬುದಾಗಿ ಅಭಿಪ್ರಾಯಸಿದ್ದಾರೆಅಂಬೇಡ್ಕರ್ ಅವರ ಜ್ಞಾನ ವಾದ ಆರ್ಥಿಕ ನೀತಿ ಸಾಮಾಜಿಕ ನೀತಿ ವಿದೇಶಾಂಗ ನೀತಿ ನ್ಯಾಯಾಂಗ ನೀತಿಗಳು ಧಾರ್ಮಿಕ ನೀತಿ ಕೈಗಾರಿಕೆ ಕೃಷಿ ವಿದ್ಯುತ್ ನೀತಿ ಆಹಾರ ಭದ್ರತೆ ಕಾರ್ಮಿಕ ಕಲ್ಯಾಣ ಮಹಿಳಾ ಸುಭದ್ರತೆ ಇತ್ಯಾದಿ ನೀತಿಗಳನ್ನು ಅಳವಡಿಸಿಕೊಳ್ಳದಿರುವುದರಿಂದ ದೇಶವು ಸರ್ವ ಕ್ಷೇತ್ರಗಳಲ್ಲೂ ಹಿನ್ನಡೆ ಹೊಂದಿದೆ ಇನ್ನೂ ಸಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ 137ನೇ ಸ್ಥಾನ ದಲ್ಲಿ ನಿಂತಿರುವುದು ಅಪಮಾನಕರ ವಾಗಿದೆ ಎಂದರು. ಗೀತಾ ಮಲ್ಲಿಕಾರ್ಜುನ್, ಕಾನ್ಸಿ ರಾಮ್ ರೈತ ಸಂಘಟನೆ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಅನು ಕುಮಾರ್ ರೈತ ಸಂಘಟನೆ ನಾರಾಯಣಗೌಡ, ಡಿಕೆ ಭರತ್ ಕುಮಾರ್ ರಾಜೇಶ್,
ಪೈಲ್ವಾನ್ ಮುತ್ತುರಾಜು ಸುಪ್ರೀತಾ, ಹೊನ್ನಪ್ಪ ಸವಿತಾ ಸಮಾಜದ ಪದಾಧಿಕಾರಿ ಪ್ರೇಮ್ ಕುಮಾರ್ ತಿಗಳ ಸಮುದಾಯದ ಸಂಘಟಕಿ ಪದಾಧಿಕಾರಿ ಗಾಯಿತ್ರಿ ಲಕ್ಷಿ÷್ಮ ಶಿವಮ್ಮ ಆನಂದ ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.
`ಡಾ. ಅಂಬೇಡ್ಕರ್ ಚರ್ಚಿಸಲ್ಪಡುವ ವ್ಯಕ್ತಿ ವಿಶ್ಲೇಷಣೆಗೆ ಒಳಪಡುವ ವ್ಯಕ್ತಿ’



