ಬೇಲೂರು: ಜಾತ್ರ ಮಹೋತ್ಸವದ ಪ್ರಯುಕ್ತ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಚಿನ್ನದ ಒಡವೆಗಳನ್ನು ತಾಲ್ಲೂಕು ಕಚೇರಿಯ ಖಜಾನೇಯಿಂದ ಬಿಗಿ ಭದ್ರತೆಯೊಂದಿಗೆ ತರಲಾಯಿತು,ಪ್ರತಿ ವರ್ಷದಂತೆ ಈ ವರ್ಷವೂ ದಿನಾಂಕ 12 ರಿಂದ 24 ರ ತನಕ ದೇವರ ಉತ್ಸವಗಳು ನಡೆಯುವುದರಿಂದ ನಾಳೆ ಯುಗಾದಿ ಹಬ್ಬದ ದಿನದಂದು ದೇವರಿಗೆ ಒಡವೆಗಳನ್ನು ಧರಿಸಲಾಗುತ್ತದೆ,
ದೇವಸ್ಥಾನದ ಕಾಯಾನಿರ್ವಾನಾಧಿಕಾರಿ ಯೋಗೇಶ್ ಮಾತನಾಡಿ ಪ್ರತಿ ವರ್ಷದಂತೆ ಈ ವರ್ಷವೂ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದು, ಬಿಸಿಲಿನ ತಾಪ ಜಾಸ್ತಿ ಇರುವುದರಿಂದ ನೀರಿನ ವ್ಯವಸ್ಥೆ ಯನ್ನು ನಾಲ್ಕು ಮೂಲೆಗಳಲ್ಲಿ ಮಾಡಲಾಗುತ್ತದೆ, ದೇವಸ್ಥಾನದ ಒಳಗಡೆ ನೆಲಕ್ಕೆ ಪಾದ ಸುಡದಂತೆ ಮ್ಯಾಟಗಳನ್ನು ಹಾಕಲಾಗುತ್ತದೆ, ದಿವ್ಯಾ ರಥೋತ್ಸವದ ದಿನ ಜಿಲ್ಲಾಡಳಿತ ಆದೇಶದಂತೆ ಕುರಾನ್ ಪಠನ ನಡೆಸಲಾಗುತ್ತದೆ, ಅದರ ಬಗ್ಗೆ ಇನ್ನೂ ಆದೇಶ ನೀಡಿಲ್ಲ, ಭಕ್ತಧಿಗಳಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುತ್ತದೆ ಎಂದರು,
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ ಈ ವರ್ಷ ವಿಶೇಶವಾಗಿ ನೆಹರು ನಗರದಿಂದ ದೇವಸ್ಥಾನದ ವರೆಗೆ ವಿದ್ಯುತ್ ದೀಪಲಂಕಾರ ಮಾಡಲಾಗುತ್ತಿದೆ, ಬರುವ ಭಕ್ತಾದಿಗಳಿಗೆ ದಾಸೋಹದಲ್ಲಿ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದೂ, ಶೌಚಾಲಯ, ಕುಡಿಯುವ ನೀರು, ದೇವಸ್ಥಾನದ ಸುತ್ತ ಮುತ್ತ ಸ್ವಚ್ಛತೆ ಬಗ್ಗೆ ಸಂಬಂಧ ಪಟ್ಟ ಇಲಾಖೆಗೆ ಸೂಚಿಸಲಾಗಿದೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ನಿರ್ವಹಿಸುತ್ತಿದ್ದು, ದೇವರ ಪೂಜೆಗೆ ಸರದಿ ಸಾಲಿನಲ್ಲಿ ಬರುವಂತೆ ಕಾರ್ಯ ನಿರ್ವಹಿಸಲಿದ್ದಾರೆ ವಿಷೇಶ ದರ್ಶನ ವ್ಯವಸ್ಥೆ ಮಾಡಲಾಗಿದೆ,
ರಥೋತ್ಸವದ ದಿನ ದೇವಸ್ಥಾನದಿಂದ ಪ್ರಸಾದ ವಿನಿಯೋಗವಿರುತ್ತದೆ, ಕಾಸಾಗಿಯವರು ಕೊಡುವವರು ಚುನಾವಣೆ ನೀತಿ ಸಂಮಿತೆ ಇರುವುದರಿಂದ ಅನುಮತಿ ಪತ್ರ ಅವಶ್ಯವಿರುತ್ತದೆ ಎಂದರು,ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರಾದ ಪ್ರಮೋದ್, ರವೀಂದ್ರ, ರವಿಶಂಕರ್, ವಿಜಯಲಕ್ಷ್ಮಿ, ಸುಧಾ, ಪ್ರದಾನ ಅರ್ಚಕರಾದ ಶ್ರೀನಿವಾಸ ಭಟ್ರು, ಆಗಮಿಕರಾದ ಪ್ರಿಯ, ಹಾಗೂ ವೇಣುಕುಮಾರ್, ಸುದೀದ್ರ, ಅಡ್ಡೆಗಾರರದ ವೆಂಕಟೇಶ್, ದೇವರಾಜ್, ಬಲರಾಮ್, ಇತರರು ಇದ್ದರು.