ದೇವನಹಳ್ಳಿ : ಪಟ್ಟಣದ ಹಳೇ ತಾಲೂಕು ಕಚೇರಿ ರಸ್ತೆಯಲ್ಲಿ ಶ್ರೀ ಸರ್ವಶಕ್ತ್ಯಾತ್ಮಕ ಚೌಡೇಶ್ವರಿದೇವಾಲಯದ 13ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಪ್ರತ್ಯಂಗಿರ ಹೋಮ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದ್ದು ಭಕ್ತಾಧಿಗಳು ದೇವತಾ ಕಾರ್ಯಗಳಲ್ಲಿ ಭಾಗವಹಿಸುವಂತೆ ಚೌಡೇಶ್ವರಿ ದೇವಾಲಯ ಅಭಿವೃದ್ಧಿ ಸಮಿತಿ ಸದಸ್ಯ ಹಾಗೂ ನಿವೃತ್ತ ತಹಶಿಲ್ದಾರ್ ಪಿ.ಗಂಗಾಧರಪ್ಪ ತಿಳಿಸಿದರು.
ಪಟ್ಟಣದ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ 13ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಏ. 19 ಮತ್ತು ಏ.20 ಎರಡು ದಿನ ವಿಶೇಷ ಕಾರ್ಯಕ್ರಮ ಹಾಗೂ ಪೂಜಾ ಕೈಂಕರ್ಯಗಳು ಆಯೋಜಿಸಲಾಗಿದೆ, ಕಳೆದ 13 ವರ್ಷಗಳಿಂದ ದೇವಾಲಯಕ್ಕೆ ವಿವಿಧ ಜಿಲ್ಲೆಗಳಿಂದ ಭಕ್ತರು ಆಗಮಿಸಿ ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಿದ್ದಾರೆ ಏ.19 ರಂದು ದೇವಿಗೆ ಗಂಗಾಪೂಜೆ, ಮಹಾಸಂಕಲ್ಪ, ಮಂಗಳದ್ರವ್ಯಗಳಿAದ ಮಹಾಅಭಿಷೇಕ, ಸಂಜೆ ಬಜನೆ, ವಾಸಕಿ ಪೂಜೆ, ಮಂಡಲಾರಾಧನೆ ನಡೆಯಲಿದೆ. ಏ.20 ರಂದು ಮಂಗಳ ದ್ರವ್ಯಗಳಿಂದ ಪಂಚಾಮೃತ ಮಹಾಭಿಷೇಕ, ಸರ್ವದೋಷ ನಿವಾರಣೆ ಶಾಂತಿ ಹಾಗೂ ಲೋಕಕಲ್ಯಾಣಾರ್ಥವಾಗಿ ಪ್ರತ್ಯಂಗಿರ ಹೋಮ ದೇವಿಗೆ ಪ್ರತ್ಯಂಗಿರ ದೇವಿ ಅಲಂಕಾರ ಮಾಡಲಾಗುವುದು. ಮಧ್ಯಾನ್ಹ ಶಶಿಕಲ ಅಶ್ಪತಪ್ಪ ಗುರೂಜಿ ಸಾರತ್ಯದಲ್ಲಿ ಸತ್ಸಂಗ ಭಜನೆ, ಸಂಜೆ ಚಿನ್ನಲೇಪಿತ ಉತ್ಸವ ಮೂರ್ತಿಯನ್ನು ಪಟ್ಟಣದ ರಾಜಬೀದಿಯಲ್ಲಿ ಮಹಿಳೆಯರು ಹೊತ್ತುಸಾಗಲಿದ್ದಾರೆ. ಹಾಗೂ ಉಯ್ಯಾಲೋತ್ಸವ ನಡೆಯಲಿದೆ ಎಂದರು. ಶ್ರೀ ಚೌಡೇಶ್ವರಿ ದೇವಾಲಯ ಅಭಿವೃದ್ಧಿ ಸಮಿತಿ ಎಸ್.ಆರ್ ಮುನಿರಾಜು ಮಾತನಾಡಿ 12 ವರ್ಷದಲ್ಲಿ ದೇವಾಲಯ ಅತ್ಯಂತ ಪ್ರಸಿದ್ದಿಯಾಗಿ ಅನೇಕ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸುತ್ತಿದ್ದಾರೆ. ಪೂಜಾ ಕೈಂಕರ್ಯಗಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಮುನಿಕೃಷ್ಣ, ಶ್ರೀ ಚೌಡೇಶ್ವರಿ ದೇವಾಲಯ ಅಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀರಾಮಯ್ಯ, ಪಾಪಣ್ಣ, ಪಿ.ಜಯರಾಮ್, ಹನುಮಂತಪ್ಪ, ಗೋಪಿ, ಎ.ಎಚ್.ನಾಗರಾಜ್, ತೇಜುಕುಮಾರ್, ರಾಜಣ್ಣ ದೇವಾಲಯದ ಪ್ರಧಾನ ಅರ್ಚಕರಾದ ಮಂಜುನಾಥ ಶಾಸ್ತ್ರೀ ಮತ್ತಿತರರು ಭಾಗಿಯಾಗಿದ್ದರು.
ಶ್ರೀ ಸರ್ವಶಕ್ತ್ಯಾತ್ಮಕ ಚೌಡೇಶ್ವರಿ ಅಮ್ಮನವರ ದೇವಾಲಯದ 13ನೇ ವರ್ಷದ ವಾರ್ಷಿಕೋತ್ಸವ ಲೋಕ ಕಲ್ಯಾಣಾರ್ಥವಾಗಿ ಪ್ರತ್ಯಂಗೀರ ಹೋಮ ಹವನ



