ಬೆಂಗಳೂರು : ಬೆಂಗಳೂರಲ್ಲಿ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮತ್ತೆ ವಿವಾದಕ್ಕೆ ಸಿಲುಕಿದ್ದು, ರಿಕ್ಕಿ ರೈ ಲ್ಯಾಂಬೋರ್ಗಿನಿ ಕಾರು ರ್ಯಾಶ್ ಡ್ರೈವಿಂಗ್ ಮಾಡಲಾಗಿದೆ. ಏರ್ಪೋರ್ಟ್ ರಸ್ತೆಯಲ್ಲಿ ರಿಕ್ಕಿ ಲ್ಯಾಂಬರ್ಗಿನಿ ಕಾರಿನಿಂದ ಪುಂಡಾಟ ಮೆರೆಯಲಾಗಿದೆ. ಸಾರ್ವಜನಿಕರಿಗೆ ಭಯ ಮತ್ತು ಆತಂಕ ಸೃಷ್ಟಿಸುವ ರೀತಿಯಲ್ಲಿ ಕಾರು ಚಾಲನೆ ಮಾಡಲಾಗಿದೆ.ಕಾರಿನ ಸೈಲೆನ್ಸರ್ ನಲ್ಲಿ ಬೆಂಕಿಯನ್ನು ಸಿಡಿಸಿ ಕರ್ಕಶವಾಗಿ ಶಬ್ದ ಮಾಡಿಕೊಂಡು ಕಾರು ಡ್ರೈವ್ ಮಾಡಲಾಗಿದೆ ಈ ಒಂದು ವಿಡಿಯೋ ಆದರಿಸಿ ಪೊಲೀಸರು ಪರಿಶೀಲನೆಗೆ ಮುಂದಾಗಿದ್ದಾರೆ. ಅತಿ ವೇಗವಾಗಿ ಚಾಲನೆ ಮಾಡಿರುವ ವಿಡಿಯೋ ವೈರಲ್ ಆಗಿದೆ ಏಂ 05 ಓಖ 0009 ನಂಬರ್ನ ರಿಕ್ಕಿ ರಾಯ್ ಒಡೆತನದ ಲ್ಯಾಂಬೋರ್ಗಿನಿ ಕಾರು ಎಂದು ತಿಳಿದುಬಂದಿದೆ. ಕಾರು ಯಾರು ಚಾಲನೆ ಮಾಡಿದ್ದಾರೆ ಎನ್ನುವುದು ತಿಳಿದುಬಂದಿಲ್ಲ ಈ ವಿಡಿಯೋ ಆಧರಿಸಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.



