ಬೆಂಗಳೂರು: ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದ ನೂತನ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದುಕೊಳ್ಳಲು ನಾ ಮುಂದು ತಾ ಮುಂದು ಎಂದ ಪೈಪೋಟಿ ನಡೆದಿರುವ ಬೆನ್ನಲ್ಲೇ ಸಿಕ್ಕಿರುವ ಸ್ಥಾನದಿಂದ ಅಸಮಾಧಾನಗೊಂಡಿರುವ ಕೆಲವು ಸಚಿವರು ಅಧಿಕಾರ ಸ್ವೀಕರಿಸದಿರಲು ನಿರ್ಧಾರಿಸಿದ್ದಾರೆ.
ಈಗಾಗಲೇ ಕಳೆದ ಮರ್ನಾಲ್ಕು ದಿನಗಳಿಂದ ಬಹುತೇಕ ಸಚಿವಾಂಕಾAಕ್ಷಿ ಶಾಸಕರು ವರಿಷ್ಠರು ಹಾಗೂ ಮುಖ್ಯಮಂತ್ರಿಗಳ ಮನವೊಲಿಸಲು ದೆಹಲಿಯಲ್ಲೇ ಬೀಡುಬಿಟ್ಟಿದ್ದರು. ಇದರ ಜತೆಯಲ್ಲಿ ತಮಗೆ ದೊರೆತಿರುವ ಖಾತೆಯನ್ನು ವಿಭಜಿಸಿ ನೀಡಲು ನಿರ್ಧರಿಸಿದ್ದ ವರಿಷ್ಠರ ಕ್ರಮದಿಂದ ಅಸಮಾಧಾನಗೊಂಡು ತಮ್ಮ ಖಾತೆಯನ್ನು ವಿಭಜಿಸದೆ ಇರುವ ಸ್ಥಿತಿಯಲ್ಲೇ ನೀಡಬೇಕು ಎಂದು ಬೇಡಿಕೆಯಿಟ್ಟು ಕೃಷ್ಣಬೈರೇಗೌಡ ಪಟ್ಟುಹಿಡಿದು ಕುಳಿತಿದ್ದರು. ಪಕ್ಷದ ವರಿಷ್ಠರು ಹಾಗೂ ಪರಿಪರಿಯಾಗಿ ತಿಳಿಸಿ ಹೇಳಿದರೂ ಅವರ ಮಾತಿಗೆ ಮಣಿಯದೇ ತಮಗೆ ದೊರೆತಿರುವ ಖಾತೆಯನ್ನು ವಿಭಜಿಸದೆ ನೀಡಬೇಕು ಎಂದು ಒತ್ತಾಯ ಹೇರು
ತ್ತಿದ್ದಾರೆ. ಹೈಕಮಾಂಡ್ ವರಿಷ್ಠರ ಭೇಟಿಗೆ ಹರಸಾಹಸ ಮಾಡಿದ್ದರೂ ವರಿಷ್ಠರನ್ನು ಬೇಟಿಯಾಗಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.
ನಿನ್ನೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೃಷ್ಣಬೈರೇಗೌಡ ಅವರೊಂದಿಗೆ ಮಾತನಾಡಿ, ಕೇಂದ್ರ ಸಚಿವರನ್ನು ಭೇಟಿ ಮಾಡಲು ಕರೆದೊಯ್ದಿದ್ದರು. ಇಷ್ಟೆಲ್ಲಾ ನಡೆದರೂ ಕೃಷ್ಣಬೈರೇಗೌಡರು ತಮಗೆನೀಡಿರುವ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಬೇರ್ಪಡಿಸದೆ ಬಿಡಿಎ, ಬಿಎಂಆರ್ಡಿಎ ಒಟ್ಟಿಗೆ ಸೇರಿಸಿ ಕೊಡಬೇಕು ಎಂದು ಪ್ರಬಲವಾಗಿ ಒತ್ತಾಯಿಸುತ್ತಿದ್ದು ಆ ಖಾತೆಯನ್ನು ಸಂಪೂರ್ಣವಾಗಿ ನೀಡದರೆ ತಾವು ಸಚಿವರಾಗಿ ತಮಗೆ ನೀಡಿರುವ ಖಾತೆಯನ್ನು ವಹಿಸಲಾಗುವುದು ಇಲ್ಲವಾದರೆ ಇಲ್ಲವೆಂದು ನೇರವಾಗಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮತ್ತೊಂದೆಡೆ ಎರಡನೇ ಕಂತಿನಲ್ಲಿ ಸಂಪುಟ ರಚನೆಯಾಗುವ ಸಂದರ್ಭದಲ್ಲಿ ತಮ್ಮನ್ನು ಸಚಿವರನ್ನಾಗಿಸಬೇಕು ಎಂದು ವರಿಷ್ಠರ ಮುಂದೆ ಬೇಡಿಕೆಯಿಟ್ಟು ಅವರ ಮನವೊಲಿಸಲು ಸುಮಾರು 40ಕ್ಕೂ ಹೆಚ್ಚು ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದರು. ಇದರಲ್ಲಿ ಎರಡನೇ ಬಾರಿ ಶಾಸಕರಾದವರು ಹಾಗೂ ನಾಲ್ಕೈದು ಬಾರಿ ಶಾಸಕರಾದವರು ಹೆಚ್ಚಿನ ಮಂದಿಯಿದ್ದಾರೆ. ಕೆಲವರಂತೂ ತಾವು ಶಾಸಕರಾದಗಿನಿಂದ ಸತತವಾಗಿ ಆಯ್ಕೆಯಾಗಿ ಬರುತ್ತಿದ್ದರೂ ಇದುವರೆಗೂ ಸಚಿವ ಸ್ಥಾನ ಪಡೆದಿಲ್ಲ. ಹಾಗಾಗಿ ತಮಗೆ ಈ ಬಾರಿ ಸಚಿವ ಸ್ಥಾನ ನೀಡಲೇ ಬೇಕು ಎಂದು ಮುಖ್ಯಮಂತ್ರಿ ಹಾಗೂ ವರಿಷ್ಠರ ಮುಂದೆ ಪ್ರಬಲ ಬೇಡಿಕೆಯಿಟಿದ್ದಾರೆ.
ಹಿರಿಯ ಶಾಸಕ ಆರ್. ವಿ.ದೇಶಪಾಂಡೆ ಅವರು ನಿನ್ನೆ ಬೆಂಗಳೂರಿನಲ್ಲಿಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಈ ಬಾರಿ ತಮ್ಮನ್ನು ಸಚಿವರನ್ನಾಗಿ ಮಾಡಬೇಕು ಎಂದು ಬೇಡಿಕೆಯಿಟ್ಟಿರುವುದಾಗಿ ತಿಳಿದುಬಂದಿದೆ.



