ಜನರ ಗುಂಪಿನ ಮೇಲೆ ವ್ಯಾನ್ ಹರಿದು ಒಬ್ಬರು ಸಾವು, 15ಕ್ಕೂ ಹೆಚ್ಚು ಗಾಯಬರ್ಲಿನ್: ಜರ್ಮನಿಯ ರಾಜಧಾನಿ ಬರ್ಲಿನ್ ನಲ್ಲಿ ಆಯೋಜಿಸಲಾಗಿದ್ದ ಪ್ರಸಿದ್ಧ (ಕ್ರಿಸ್ಟೋಫರ್ ಸ್ರ್ಟೀಟ್ ಡೇ) ಸಂಭ್ರಮಾಚರಣೆಯ ವೇಳೆ ಭೀಕರ ದುರಂತವೊಂದು ಸಂಭವಿಸಿದೆ. ಶನಿವಾರ ರಾತ್ರಿ ಜನರ ಗುಂಪಿನ ಮೇಲೆ ವ್ಯಾನ್ನಿಂದ ಭೀಕರವಾಗಿ ಡಿಕ್ಕಿ ಹೊಡೆಸಿದ ಪರಿಣಾಮ ಒಬ್ಬರು ಸಾವನ್ನಪ್ಪಿದ್ದು, ಕನಿಷ್ಠ 16 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.ಈ ದಾಳಿಯ ಹಿನ್ನೆಲೆಯಲ್ಲಿ ಬರ್ಲಿನ್ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಮೆರವಣಿಗೆ ಹಾಗೂ ಸಂಗೀತ ಕಛೇರಿಯನ್ನು ರದ್ದುಗೊಳಿಸಿ ಇಡೀ ಪ್ರದೇಶವನ್ನು ಖಾಲಿ ಮಾಡಿಸಿದ್ದಾರೆ.ಪೊಲೀಸರು ಶಂಕಿತ ವ್ಯಕ್ತಿಯನ್ನು ಗುರುತಿಸಿದ್ದು, ಆತನಿಗೆ ಬರ್ಲಿನ್ನಲ್ಲಿರುವ ಇಸ್ಲಾಮಿಕ್ ತೀವ್ರಗಾಮಿ ಸಂಘಟನೆ ಗಳೊಂದಿಗೆ ನಿಕಟ ಸಂಪರ್ಕವಿರುವುದು ತಿಳಿದುಬಂದಿದೆ. ಶಂಕಿತನನ್ನು ಬಂಧಿಸಲು ಪೊಲೀಸರು ವ್ಯಾಪಕ ಜಾಲ ಬೀಸಿದ್ದು, ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಹಲವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ಬರ್ಲಿನ್ ಪೊಲೀಸ್ ವಕ್ತಾರ
ಫ್ಲೋರಿಯನ್ ನಾಥ್ ತಿಳಿಸಿದ್ದಾರೆ.
ಪ್ರೈಡ್ ಉತ್ಸವದಲ್ಲಿ ಭೀಕರ ದಾಳಿ!



