ಕ್ರೀಡೆ: ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಜಿಂಬಾಬ್ವೆ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 157 ರನ್ಗಳಿಸಲಷ್ಟೇ ಶಕ್ತವಾಗಿ 35 ರನ್ಗಳ ಸೋಲೊಪ್ಪಿಕೊಂಡಿತು.ಭಾರತ ತಂಡ ಜಿಂಬಾಬ್ವೆ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ (India vs Zimbabwe) ಭರ್ಜರಿ ಜಯ ಸಾಧಿಸಿ, 3 ಪಂದ್ಯಗಳ ಟಿ20 ಸರಣಿಯನ್ನ 3-0ಯಲ್ಲಿ ವೈಟ್ವಾಶ್ ಮಾಡಿದೆ. ಈಗಾಗಲೇ ಸರಣಿ ಗೆಲುವು ಸಾಧಿಸಿದ್ದರಿಂದ, ಈ ಔಪಚಾರಿಕ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಜಿಂಬಾಬ್ವೆ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 157 ರನ್ಗಳಿಸಲಷ್ಟೇ ಶಕ್ತವಾಗಿ 35 ರನ್ಗಳ ಸೋಲೊಪ್ಪಿಕೊಂಡಿತು. ರಯಾನ್ ಬರ್ಲ್ ಅಜೇಯ 54 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಆದರು.
ಬರ್ಲ್ ಹೋರಾಟ ವ್ಯರ್ಥ: ಜಿಂಬಾಬ್ವೆ 65 ರನ್ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಆದರೆ ರಯಾನ್ ಬರ್ಲ್ ಹಾಗೂ ಮಾಧೆವೆರೆ 5ನೇ ವಿಕೆಟ್ ಜೊತೆಯಾಟದಲ್ಲಿ 60 ರನ್ ಸೇರಿಸಿ ತಂಡದ ಮೊತ್ತವನ್ನ ಸೋಲಿನ ಅಂತರವನ್ನ ಕಡಿಮೆ ಮಾಡಿದರು. ಮಧೆವೆರೆ 25 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ಗಳ ಸಹಿತ 28 ರನ್ಗಳಿಸಿ ಔಟ್ ಆದರು. ಇವರ ವಿಕೆಟ್ ಬೆನ್ನಲ್ಲೇ ಜಿಂಬಾಬ್ವೆ ಸ್ಕೋರ್ ಗತಿಗೂ ಕಡಿವಾಣ ಬಿದ್ದಿತು. 7ನೇ ಕ್ರಮಾಂಕದಲ್ಲಿ ಬಂದ ವಿಕೆಟ್ ಕೀಪರ್ ಮರುಮಾನಿ ಕೇವಲ 1 ರನ್ಗಳಿಸಿ ಅಶೋಕ್ ಶರ್ಮಾ ಬೌಲಿಂಗ್ನಲ್ಲಿ ಔಟ್ ಆದರು. ಕೊನೆಯವರೆಗೂ ಅಜೇಯರಾಗಿ ಉಳಿದ ರಯಾನ್ ಬರ್ಲ್ 43 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ ಅಜೇಯ 54 ರನ್ಗಳಿಸಿ ತಂಡದ ಮೊತ್ತವನ್ನ 150ರ ಗಡಿ ದಾಟಿಸಿದರು. ಬ್ರಾಡ್ ಇವನ್ಸ್ 14 ರನ್ಗಳಿಸಿದರು. ಭಾರತದ ಪರ ಮಯಾಂಕ್ ಯಾದವ್ 29ಕ್ಕೆ3, ಯಶ್ ಠಾಕೂರ್ 45ಕ್ಕೆ2, ಅಶೋಕ್ ಶರ್ಮಾ 20ಕ್ಕೆ1, ರವಿ ಬಿಷ್ಣೋಯ್ 24ಕ್ಕೆ1 ವಿಕೆಟ್ ಪಡೆದರು.ಭಾರತದ ಇನ್ನಿಂಗ್ಸ್: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ವೈಭವ್ ಸೂರ್ಯವಂಶಿ ಸಿಡಿಸಿದ ಅರ್ಧಶತಕ (49 ಎಸೆತ, 8 ಬೌಂಡರಿ, 4 ಸಿಕ್ಸರ್), ಇಶಾನ್ ಕಿಶನ್ (26 ಎಸೆತಗಳಲ್ಲಿ 29), ಶ್ರೇಯಸ್ ಅಯ್ಯರ್ (18 ಎಸೆತಗಳಲ್ಲಿ 27) ಹಾಗೂ ರಿಂಕು ಸಿಂಗ್ (14 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 24) ಉತ್ತಮ ಬ್ಯಾಟಿಂಗ್ ನೆರವಿನಿಂದ 192 ರನ್ಗಳಿಸಿತ್ತು.
3-0ಯಲ್ಲಿ ಸರಣಿ ಗೆದ್ದ ಭಾರತ: ಐಪಿಎಲ್ ಬಳಿಕ ನಡೆದ ಮೊದಲ ಟಿ20 ಸರಣಿಯಲ್ಲಿ ಭಾರತ ತಂಡ ಐರ್ಲೆಂಡ್ ವಿರುದ್ಧ 0-2, ಇಂಗ್ಲೆಂಡ್ ವಿರುದ್ಧ 0-4 ಅಂತರದಲ್ಲಿ ಸರಣಿ ಕಳೆದುಕೊಂಡಿತ್ತು. ಇದೀಗ ಜಿಂಬಾಬ್ವೆ ವಿರುದ್ಧ 3-0ಯಲ್ಲಿ ಗೆಲ್ಲುವ ಮೂಲಕ ಮೊದಲ ಸರಣಿ ಜಯ ಸಾಧಿಸಿದ್ದಾರೆ.
ಜಿಂಬಾಬ್ವೆ ವಿರುದ್ಧ 3-0ಯಲ್ಲಿ ಸರಣಿ ವೈಟ್ವಾಶ್ ಮಾಡಿದ ಟೀಮ್ ಇಂಡಿಯಾ



